ಮೊಹಮದ್ ನಲಪಾಡ್ ವಿರುದ್ದ ಹೈಗ್ರೌಂಡ್ಸ್​ ಠಾಣೆಯಲ್ಲಿ 3 ಪುಟಗಳ ದೂರು ದಾಖಲು
ಮೊಹಮದ್ ನಲಪಾಡ್ ವಿರುದ್ದ ಹೈಗ್ರೌಂಡ್ಸ್​ ಠಾಣೆಯಲ್ಲಿ 3 ಪುಟಗಳ ದೂರು ದಾಖಲು

ಮೊಹಮದ್ ನಲಪಾಡ್ ವಿರುದ್ದ ಹೈಗ್ರೌಂಡ್ಸ್​ ಠಾಣೆಯಲ್ಲಿ 3 ಪುಟಗಳ ದೂರು ದಾಖಲು

|

Updated on: Apr 22, 2021 | 4:32 PM

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರೋ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆ ವಿಚಾರವಾಗಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ಹಾಗೂ ಬೆಂಬಲಿಗರ ನಡುವೆ ಬುಧವಾರ  ವಾಗ್ವಾದವಾಗಿತ್ತು. ಗಲಾಟೆ ಬಳಿಕ ರಕ್ಷಾ ರಾಮಯ್ಯ ಬೆಂಬಲಿಗರಾದ ಭವ್ಯ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ದ ಹೈಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯರಿಂದ ದೂರು ದಾಖಲಾಗಿದ್ದು, ನಿನ್ನೆ ನಲಪಾಡ್ ಮತ್ತು ಬೆಂಬಲಿಗರು ಕಚೇರಿಗೆ ಆಗಮಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದೂರು ನೀಡಿದ್ದಾರೆ ಭವ್ಯ.ನಿನ್ನೆ ಕೋವಿಡ್ ವಾರ್ ರೂಮ್ ವಿಚಾರವಾಗಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ಹಾಗೂ ಬೆಂಬಲಿಗರ ನಡುವೆ ವಾಗ್ವಾದವಾಗಿತ್ತು ,ಗಲಾಟೆ ಬಳಿಕ ಪೋಲಿಸ್ ಠಾಣರ ಮೆಟ್ಟಿಲೇರಿದ ರಕ್ಷಾ ರಾಮಯ್ಯ ಬೆಂಬಲಿಗರಾದ ಭವ್ಯ ದೂರು ನೀಡಿದ್ದಾರೆ.

ಭವ್ಯ ನೀಡಿರುವ ದೂರಿನ ವೃತ್ತಾಂತ ಹೀಗಿದೆ:
ದೂರಿನಲ್ಲಿ ನಲಪಾಡ್ ಬೆದರಿಕೆ ಬಗ್ಗೆ ಸಂಪೂರ್ಣ ವಿವರ ಹಾಗೂ ಇತಿಹಾಸ ಉಲ್ಲೇಖಿಸಿರುವ ಭವ್ಯ ಶಾಸಕರಾದ ಹ್ಯಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15 ಕ್ಕೂ ಹೆಚ್ಚು ಜನರ ವಿರುದ್ಧ ಕಂಪ್ಲೆಂಟ್ ನೀಡಿದ್ದಾರೆ.

ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ ಎಂದು‌ ಕಂಪ್ಲೆಂಟ್​ನಲ್ಲಿ ಉಲ್ಲೇಖ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ದೂರು.