ಮೈಸೂರು ಬಳಿ ಮೆಲ್ಲಹಳ್ಳಿಯಲ್ಲಿ ರೌಡಿಗಳ ಗುಂಪಿನಿಂದ ಒಬ್ಬನ ಕೊಲೆ!
ಗ್ರಾಮದ ರಸ್ತೆಯೊಂದರಲ್ಲಿ ಮನೋಜ್ ಎಂಬ ಯುವಕನನ್ನು ಅದೇ ಗ್ರಾಮದ ರಘು, ಸಚಿನ್, ಕಿರಣ್ ಮತ್ತು ಶಂಕರ್ ಹೆಸರಿನ ರೌಡಿಗಳು ಬೆನ್ನಟ್ಟಿ ಇರಿದು ಕೊಂದ ಘಟನೆಯ ಆರಂಭಿಕ ದೃಶ್ಯವನ್ನು ನೀವು ನೋಡಬಹುದು.
ಮೈಸೂರು: ಬೆಂಗಳೂರು ಮಹಾನಗರದಲ್ಲಿ ನಡೆಯುವ ಕಳುವು, ಸುಲಿಗೆ, ರೇಪ್, ಮರ್ಡರ್ ಮೊದಲಾದ ಅಪರಾಧ ಕೃತ್ಯಗಳು ಈಗ ಮೈಸೂರು (Mysuru) ಜಿಲ್ಲೆಯಲ್ಲೂ ನಡೆಯುತ್ತಿವೆಯೇ? ಈ ಸಿಸಿಟಿವಿ ಫುಟೇಜ್ ವೀಕ್ಷಿಸಿದರೆ ಅಂತ ಅನುಮಾನ ಕಾಡದಿರದು. ತಾಲ್ಲೂಕಿನ ಮೆಲ್ಲಹಳ್ಳಿ (Mellahalli) ಗ್ರಾಮದಲ್ಲಿ ನಡೆದಿರುವ ಘಟನೆಯಿದು. ಗ್ರಾಮದ ರಸ್ತೆಯೊಂದರಲ್ಲಿ ಮನೋಜ್ (Manoj) ಎಂಬ ಯುವಕನನ್ನು ಅದೇ ಗ್ರಾಮದ ರಘು, ಸಚಿನ್, ಕಿರಣ್ ಮತ್ತು ಶಂಕರ್ ಹೆಸರಿನ ರೌಡಿಗಳು ಬೆನ್ನಟ್ಟಿ ಇರಿದು ಕೊಂದ ಘಟನೆಯ ಆರಂಭಿಕ ದೃಶ್ಯವನ್ನು ನೀವು ನೋಡಬಹುದು. ಫುಟೇಜ್ ನಲ್ಲಿ ಒಬ್ಬ ರೌಡಿ ಕೈಯಲ್ಲಿ ಚಾಕು ಹಿಡಿದು ಮನೋಜ್ ನನ್ನು ಬೆನ್ನಟ್ಟುವ ದೃಶ್ಯ ಮಾತ್ರ ಸೆರೆಯಾಗಿದೆ.