ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಯುವತಿಯನ್ನ ಕೂರಿಸಿಕೊಂಡು ಯುವಕ ವ್ಹೀಲಿಂಗ್​

| Updated By: ವಿವೇಕ ಬಿರಾದಾರ

Updated on: Nov 26, 2023 | 7:21 AM

ಬೈಕ್​ ಹಿಂಬದಿ ಯುವತಿಯನ್ನ ಕೂರಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ ಮೇಲೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಹೆದ್ದಾರಿ ಮೇಲೆ ವೀಲಿಂಗ್ ಮಾಡಿದ ಯುವಕ-ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಮನಗರ ನ.26: ಬೈಕ್​ ಹಿಂಬದಿ ಯುವತಿಯನ್ನ (Young Girl) ಕೂರಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ (Bengaluru-Mysore Highway) ಮೇಲೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಹೆದ್ದಾರಿ ಮೇಲೆ ವೀಲಿಂಗ್ ಮಾಡಿದ ಯುವಕ-ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಯುವಕನ ಹುಚ್ಚಾಟ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಯುವಕ ರೀಲ್ಸ್​​​ಗಾಗಿ ವೀಲ್ಹಿಂಗ್​​ ಮಾಡಿದ್ದಾನೆ. ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಯುವಕ ಹೆದ್ದಾರಿ ಪ್ರವೇಶಿಸಿದ್ದಾನೆ. ಚಾಲನೆ ಸಂದರ್ಭದಲ್ಲಿ ಹೆಲ್ಮಟ್​ ಕೂಡ ಹಾಕದ ಯುವಕ, ಬಿಡದಿಯ ಸೇತುವೆ ಬಳಿ ವೀಲ್ಹಿಂಗ್​ ಮಾಡಿದ್ದಾನೆ.