Video: ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದ ವ್ಯಕ್ತಿ, ಸಿಪಿಆರ್ ಮೂಲಕ ಜೀವ ಉಳಿಸಿದ ಯುವಕ

Updated on: Feb 27, 2026 | 10:05 AM

ಅಂಗಡಿಯೊಂದರೆ ಹೊರಗೆ ಟಿನ್ ಶೆಡ್ ಅಳವಡಿಸುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಕೂಡಲೇ ಬಂದು ಸಿಪಿಆರ್ ಮಾಡುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ. ಖುರ್ಜಾ ನಗರ ಕೊತ್ವಾಲಿ ಪೊಲೀಸ್ ವ್ಯಾಪ್ತಿಯ ಖುರ್ಜಾ ತಹಸಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು, ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಯುವಕ ಕೂಡಲೇ ಓಡಿಬಂದಿದ್ದರು. ನಂತರ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಲಂದ್​ಶಹರ್, ಫೆಬ್ರವರಿ 27: ಅಂಗಡಿಯೊಂದರೆ ಹೊರಗೆ ಟಿನ್ ಶೆಡ್ ಅಳವಡಿಸುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಕೂಡಲೇ ಬಂದು ಸಿಪಿಆರ್ ಮಾಡುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ. ಖುರ್ಜಾ ನಗರ ಕೊತ್ವಾಲಿ ಪೊಲೀಸ್ ವ್ಯಾಪ್ತಿಯ ಖುರ್ಜಾ ತಹಸಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು, ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಯುವಕ ಕೂಡಲೇ ಓಡಿಬಂದಿದ್ದರು. ನಂತರ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More