ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್; ಮುಕಳೆಪ್ಪ ಪತ್ನಿ ಗಾಯತ್ರಿ ಖಡಕ್ ಸ್ಪಷ್ಟನೆ ವೀಡಿಯೋ ವೈರಲ್!
ಖ್ಯಾತ ಯೂಟ್ಯೂಬರ್ ಮುಕಳೆಪ್ಪನ ವಿರುದ್ಧ ಹರಿದಾಡುತ್ತಿದ್ದ ಲವ್ ಜಿಹಾದ್ ಆರೋಪವನ್ನು ಆತನ ಪತ್ನಿ ಗಾಯತ್ರಿ ತಿರಸ್ಕರಿಸಿದ್ದಾಳೆ. ವೀಡಿಯೋ ಒಂದರಲ್ಲಿ ಮಾತನಾಡಿರುವ ಅವಳು ಆಕೆಯ ತಾಯಿ ಅವರ ಮದುವೆಗೆ ಬೆಂಬಲಿಸಿದ್ದಾರೆಂದೂ, ಅದರ ಪುರಾವೆಗಳು ಆಕೆಯ ಬಳಿಯಿರುವುದಾಗಿಯೂ ಹೇಳಿಕೊಂಡಿದ್ದಾಳೆ. ತನ್ನ ತಂದೆ ತಾಯಿಯರ ಮನವೊಲಿಸಿ ಅವರಿಂದ ದೂರು ನೀಡಿಸಿದ್ದಾರೆಂದು ಸ್ಪೂಟಕ ಮಾಹಿತಿ ನೀಡಿದ್ದಾಳೆ.
ಧಾರವಾಡ, ಸೆಪ್ಟೆಂಬರ್ 21: ಮುಕಳೆಪ್ಪನ ವಿರುದ್ಧದ ಲವ್ ಜಿಹಾದ್ ಆರೋಪಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆರೋಪ ಕೇಳಬಂದ ಬೆನ್ನಲ್ಲೇ ಸ್ವತಃ ಮುಕಳೆಪ್ಪನ ಹೆಂಡತಿ ಗಾಯತ್ರಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುಕಳೆಪ್ಪನನ್ನು ನಾನೇ ಪ್ರೀತಿಸಿ ಇಷ್ಟ ಪಟ್ಟು ಮದ್ವೆಯಾದ್ದೀನಿ. ತನ್ನ ತಂದೆ ತಾಯಿಯನ್ನು ಯಾರೋ ಮೈಂಡ್ ವಾಶ್ ಮಾಡಿ ಈ ರೀತಿ ಆರೋಪ ಮಾಡಿಸುತ್ತಿದ್ದಾರೆ. ನಾವಿಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೇವೆ. ಮೊದಲಿಗೆ ನನ್ನ ತಂದೆ-ತಾಯಿ ಚೆನ್ನಾಗಿ ನೋಡಿಕೊಂಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ವೀಡಿಯೋದಲ್ಲಿ ಹೇಳಿದ್ದಾಳೆ.
