ಯುವ ರಾಜ್​ಕುಮಾರ್​-ಶ್ರೀದೇವಿ ಡಿವೋರ್ಸ್​ ಬಗ್ಗೆ ಶಾಕಿಂಗ್​ ವಿಷಯ ತಿಳಿಸಿದ ಲಾಯರ್​

Updated on: Jun 10, 2024 | 8:12 PM

ಸುದ್ದಿಗೋಷ್ಠಿಯಲ್ಲಿ ಹಲವು ಶಾಕಿಂಗ್​ ಮಾಹಿತಿಯನ್ನು ಯುವ ರಾಜ್​ಕುಮಾರ್​ ಪರ ಲಾಯರ್​ ತಿಳಿಸಿದ್ದಾರೆ. ಶ್ರೀದೇವಿ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀದೇವಿಗೆ ಬೇರೆ ಬಾಯ್​ಫ್ರೆಂಡ್​ ಇದ್ದಾನೆ ಎಂದು ಲಾಯರ್​ ಹೇಳಿದ್ದಾರೆ. ಡಿವೋರ್ಸ್​ ಅರ್ಜಿಯಲ್ಲಿ ಇರುವು ಅಂಶಗಳನ್ನು ಅವರು ವಿವರಿಸಿದ್ದಾರೆ. ಲೈವ್​ ವಿಡಿಯೋ ಇಲ್ಲಿದೆ..

ರಾಘವೇಂದ್ರ ರಾಜ್​ಕುಮಾರ್​ ಅವರ ಪುತ್ರ ಯುವ ರಾಜ್​ಕುಮಾರ್​ ವಿಚ್ಛೇದನದ (Divorce) ಬಗ್ಗೆ ಮಾಹಿತಿ ನೀಡಲು ಯುವ ಪರ ಲಾಯರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಯುವ ರಾಜ್​ಕುಮಾರ್​ ಅವರು ಶ್ರೀದೇವಿ ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದು ಯಾಕೆ ಎಂಬುದಕ್ಕೆ ಲಾಯರ್​ ಕಾರಣ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆಲವು ಶಾಕಿಂಗ್​ ವಿಚಾರಗಳನ್ನು ಅವರು ತಿಳಿಸಿದ್ದಾರೆ. ಶ್ರೀದೇವಿ (Sridevi) ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀದೇವಿಗೆ ಬೇರೆ ಬಾಯ್​ಫ್ರೆಂಡ್​ ಇದ್ದಾನೆ ಎಂದು ಯುವ ರಾಜ್​ಕುಮಾರ್​ (Yuva Rajkumar) ಪರ ಲಾಯರ್​ ಹೇಳಿದ್ದಾರೆ. ವಿಚ್ಛೇದನದ ಅರ್ಜಿಯಲ್ಲಿ ಇರುವು ವಿಚಾರಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಸುದ್ದಿಗೋಷ್ಠಿಯ ಲೈವ್​ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More