ಹೊಸಪೇಟೆ ಜನರ ಅಭಿಮಾನದ ಬಗ್ಗೆ ಯುವ ಮಾತು

|

Updated on: Mar 23, 2024 | 11:08 PM

Yuva Rajkumar: ದೊಡ್ಮನೆಯ ಅಭಿಮಾನದ ಕೋಟೆ ಎಂದೇ ಕರೆಸಿಕೊಳ್ಳುವ ಹೊಸಪೇಟೆಯಲ್ಲಿ ಯುವ ರಾಜ್​ಕುಮಾರ್ ಮೊದಲ ಸಿನಿಮಾ ‘ಯುವ’ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆದಿದೆ.

ಹೊಸಪೇಟೆ, ದೊಡ್ಮನೆಯ ಕೋಟೆ ಎಂದೇ ಬಿಂಬಿತವಾಗಿದೆ. ಅಲ್ಲಿನವರ ದೊಡ್ಮನೆ ಪ್ರೇಮ ಸಾಮಾನ್ಯದ್ದಲ್ಲ. ಇದೀಗ ದೊಡ್ಮನೆಯ ಕುಡಿ ಯುವ ರಾಜ್​ಕುಮಾರ್ ಅವರ ಮೊದಲ ಸಿನಿಮಾ ‘ಯುವ’ದ (Yuva) ಪ್ರೀ ರಿಲೀಸ್ ಇವೆಂಟ್ ಹೊಸಪೇಟೆಯಲ್ಲಿ ನಡೆದಿದ್ದು, ಯುವ ರಾಜ್​ಕುಮಾರ್ ಅವರು ಹೊಸಪೇಟೆ ಬಗ್ಗೆ, ಅಲ್ಲಿನ ಜನರ ಪ್ರೀತಿಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ ಮಾರ್ಚ್ 28ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅಪ್ಪುವಿನ ಆತ್ಮೀಯ ಗೆಳೆಯರ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಸಪ್ತಮಿ ಗೌಡ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ