ಹೊಸಪೇಟೆಗೆ ಬಂದು ಮಧ್ಯರಾತ್ರಿ ಪುನೀತ್ ಪುತ್ಥಳಿಗೆ ನಮಿಸಿದ ಯುವ ರಾಜ್ಕುಮಾರ್
Puneeth Rajkumar Statue: ಯುವ ರಾಜ್ಕುಮಾರ್ ಅವರು ಪತ್ನಿ ಸಮೇತ ಹೊಸಪೇಟೆಗೆ ಭೇಟಿ ನೀಡಿದ್ದಾರೆ. ಅಲ್ಲಿರುವ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಅವರು ನಮಿಸಿದ್ದಾರೆ.
ಕರುನಾಡಿನಾದ್ಯಂತ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಅಭಿಮಾನಿಗಳಿದ್ದಾರೆ. ಹೊಸಪೇಟೆ ಮಂದಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಜೂನ್ ಮೊದಲ ವಾರದಲ್ಲಿ ಪುನೀತ್ ರಾಜ್ಕುಮಾರ್ ಅವರ ಕಂಚಿನ ಪತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಲಾಗಿತ್ತು. ಈಗ ಯುವ ರಾಜ್ಕುಮಾರ್ (Yuva Rajkumar) ಅವರು ಅಲ್ಲಿಗೆ ತೆರಳಿ ಅಪ್ಪು ಪುತ್ಥಳಿಗೆ ನಮಿಸಿದ್ದಾರೆ. ಮಧ್ಯರಾತ್ರಿ ಭೇಟಿ ನೀಡಿದ ಅವರನ್ನು ಹೊಸಪೇಟೆ (Hospet) ಜನತೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಭಿಮಾನಿಗಳ ಜೊತೆ ಯುವ ರಾಜ್ಕುಮಾರ್ ಅವರು ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ.
Published on: Jul 24, 2022 10:11 AM