ಸಭೆ ತಡ ಆಗಿದಕ್ಕೆ ಮುನಿಸಿಕೊಂಡು ಹೋಗುತ್ತಿದ್ದ ಮುನಿರತ್ನ, ಸೋಮಶೇಖರ್​ರನ್ನು ಜಮೀರ್ ಅಹ್ಮದ್​ ಸಮಾಧಾನ ಮಾಡಿದ್ದು ಹೇಗೆ ಗೊತ್ತಾ?

ಸಭೆ ತಡ ಆಗಿದಕ್ಕೆ ಮುನಿಸಿಕೊಂಡು ಹೋಗುತ್ತಿದ್ದ ಮುನಿರತ್ನ, ಸೋಮಶೇಖರ್​ರನ್ನು ಜಮೀರ್ ಅಹ್ಮದ್​ ಸಮಾಧಾನ ಮಾಡಿದ್ದು ಹೇಗೆ ಗೊತ್ತಾ?

ಆಯೇಷಾ ಬಾನು
|

Updated on:Jun 05, 2023 | 2:11 PM

ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್​ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.

ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ ಎಲೆಕ್ಷನ್ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಕರೆದಿದ್ದರು. ಬೆಂಗಳೂರು ನಗರ ಸಂಸದರು, ಶಾಸಕರ ಸಭೆ ಕರೆದಿದ್ದು ಚರ್ಚೆ ಮಾಡಿದ್ದಾರೆ. ಈ ಸಭಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಭಾಗವಹಿಸಿದ್ದರು. ಆದರೆ ಡಿಕೆ ಶಿವಕುಮಾರ್​ ಸಭೆಗೆ ತಡವಾಗಿ ಬಂದರು. ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್​ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.

Published on: Jun 05, 2023 02:11 PM