ವೇದಿಕೆಯ ಮೇಲೆ ಹತ್ತಾರು ಮುಖಂಡರಿದ್ದರೂ ಕೇವಲ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಕೈಗಳಲ್ಲಿ ಮಾತ್ರ ಸೀಬೆಹಣ್ಣು!
ವೇದಿಕೆಯ ಮೇಲೆ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಸಲೀಂ ಅಹ್ಮದ್ಮ ಹೆಚ್ ಕೆ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಕೂತಿದ್ದರು. ಅದರೆ, ಕೇವಲ ಗುರು ಶಿಷ್ಯ ಮಾತ್ರ ಸೀಬೆಹಣ್ಣು ತಿನ್ನುತ್ತಿದ್ದರು.
ಗದಗ: ಹಿರಿಯರು ನಡೆದ ದಾರಿಯನ್ನು ಅನುಸರಿಸುವುದು, ದೊಡ್ಡವರ ಹೆಜ್ಜೆ ಜಾಡಿನಲ್ಲಿ ಸಾಗುವುದು ಅಂತ ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಶಾಸಕ ಜಮೀರ್ ಅಹ್ಮದ್ (Zameer Ahmed) ನಡುವೆ ಇರುವ ಬಾಂಧವ್ಯ ಯಾರಿಗೆ ಗೊತ್ತಿಲ್ಲ? ಜನರೆಲ್ಲ ಅವರಿಬ್ಬರ ಜೋಡಿ ಗುರು-ಶಿಷ್ಯನ ಜೋಡಿ ಅಂತ ಕರೆಯುತ್ತಾರೆ. ಇವತ್ತು ಪ್ರಜಾಧ್ವನಿ ಯಾತ್ರೆ (Prajadhavni Yatre) ಭಾಗವಾಗಿ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ವೇದಿಕೆಯ ಮೇಲೆ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಸಲೀಂ ಅಹ್ಮದ್ಮ ಹೆಚ್ ಕೆ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಕೂತಿದ್ದರು. ಅದರೆ, ಕೇವಲ ಗುರು ಶಿಷ್ಯ ಮಾತ್ರ ಸೀಬೆಹಣ್ಣು ತಿನ್ನುತ್ತಿದ್ದರು. ಪಾಟೀಲ್ ಸಹ ಒಮ್ಮೆ ಒಂದು ಹೋಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ