Zameer Ahmed Khan: ಕೋಲಾರಕ್ಕೆ ಜಮೀರ್ ಅಹ್ಮದ್ ಭೇಟಿ

| Updated By: ಆಯೇಷಾ ಬಾನು

Updated on: Feb 01, 2023 | 3:04 PM

ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿ ಗ್ರಾಮಕ್ಕೆ ಜಮೀರ್ ಅಹ್ಮದ್ ಜೊತೆ ಶಾಸಕ ರಮೇಶ್​ಕುಮಾರ್, MLC ನಸೀರ್ ಅಹ್ಮದ್ ಭಾಗಿಯಾಗಿದ್ದರು.

ಕೋಲಾರ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆ ಕೋಲಾರಕ್ಕೆ ಶಾಸಕ ಜಮೀರ್ ಅಹ್ಮದ್ ಭೇಟಿ ನೀಡಿದ್ದಾರೆ. ಜಮೀರ್ ಅಹ್ಮದ್​​ಗೆ ಕೋಲಾರದಲ್ಲಿ ಭರ್ಜರಿ‌ ಸ್ವಾಗತ ಸಿಕ್ಕಿದೆ. ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿ ಗ್ರಾಮಕ್ಕೆ ಜಮೀರ್ ಅಹ್ಮದ್ ಜೊತೆ ಶಾಸಕ ರಮೇಶ್​ಕುಮಾರ್, MLC ನಸೀರ್ ಅಹ್ಮದ್ ಭಾಗಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ನಾಯಕರು ಭಾಗಿಯಾಗಿದ್ದು ನೂರಾರು ಜನ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ‌ ಸೇರ್ಪಡೆಗೊಂಡಿದ್ದಾರೆ. ಜಮೀರ್ ಮತ್ತು‌ ರಮೇಶ್ ಕುಮಾರ್ ಅವರನ್ನು ಹೆಗಲ‌ ಮೇಲೆ ಎತ್ತಿ ಕಾರ್ಯಕರ್ತರು ಕುಣಿದಾಡಿದ್ದಾರೆ.

Published on: Feb 01, 2023 03:00 PM