ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು

Updated on: Jun 08, 2026 | 8:29 AM

ದಿವಂಗತ ನಿರ್ಮಾಪಕ ದಿಲೀಪ್ ರಾಜ್ ನೆನಪಿನಲ್ಲಿ ಜೀ ಕನ್ನಡದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಪಾರು’ ಧಾರಾವಾಹಿಯ ಕಲಾವಿದರು ಭಾಗವಹಿಸಿ, ತಮಗೆ ನಟನಾ ಅವಕಾಶ ನೀಡಿ ಬೆಳೆಸಿದ ದಿಲೀಪ್ ರಾಜ್ ಅವರ ಮಾರ್ಗದರ್ಶನ ಮತ್ತು ಪ್ರೀತಿಯನ್ನು ಕಣ್ಣೀರಿನೊಂದಿಗೆ ನೆನಪಿಸಿಕೊಂಡರು. ಈ ಭಾವನಾತ್ಮಕ ಕ್ಷಣಗಳು ಇಡೀ ವೇದಿಕೆಯನ್ನು ಭಾವುಕಗೊಳಿಸಿದವು.

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ವೇದಿಕೆಯಲ್ಲಿ ಅಗಲಿದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ‘ಪಾರು’ ಧಾರಾವಾಹಿಯ ಮುಖ್ಯ ನಟಿ ಮೋಕ್ಷಿತಾ ಪೈ ಮತ್ತು ನಟ ಶರತ್, ದಿಲೀಪ್ ರಾಜ್ ತಮಗೆ ನೀಡಿದ ಬೆಂಬಲವನ್ನು ನೆನೆದು ಕಣ್ಣೀರಿಟ್ಟರು. ‘ಆರಂಭದ ದಿನಗಳಲ್ಲಿ ಶೂಟಿಂಗ್ ಕಷ್ಟವೆನಿಸಿದಾಗ ದಿಲೀಪ್ ಸರ್ ಮತ್ತು ವಿದ್ಯಾ ಮ್ಯಾಮ್ ತಮಗೆ ಧೈರ್ಯ ತುಂಬಿ, ನಟನೆಯನ್ನು ಪ್ರತಿಯೊಂದು ಹಂತದಲ್ಲೂ ಹೇಳಿಕೊಟ್ಟು ಬೆಳೆಸಿದರು ಎಂದು’ ಮೋಕ್ಷಿತಾ ಭಾವುಕರಾಗಿ ನುಡಿದರು. ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಕಿರುತೆರೆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಅಗಲಿಕೆಯ ನೋವು ಇಡೀ ವೇದಿಕೆಯನ್ನು ಮೌನವಾಗಿಸಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More