
ನವದೆಹಲಿ, ಅಕ್ಟೋಬರ್ 6: ಇಂದು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ಪನಾಮ ಧ್ವಜ ಹೊಂದಿದ ‘ಎಂಟಿ ಆನ್ ಪೀಸ್’ ಸರಕು ನೌಕೆಯ ಮೇಲೆ ಪ್ರೊಜೆಕ್ಟಿಲ್ ಅಪ್ಪಳಿಸಿದ ಪರಿಣಾಮವಾಗಿ ಗಾಯಗೊಂಡ 12 ಸಿಬ್ಬಂದಿಗಳಲ್ಲಿ 11 ಮಂದಿ ಭಾರತೀಯ ನಾವಿಕರಿದ್ದಾರೆ. ಒಮಾನ್ ಅಧಿಕಾರಿಗಳ ನೆರವಿನಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ಒಮಾನ್‌ನ ಖಾಸಾಬ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಡಗಿನಲ್ಲಿ ಒಟ್ಟು 19 ಸಿಬ್ಬಂದಿ ಇದ್ದು, ಅವರಲ್ಲಿ 17 ಮಂದಿ ಭಾರತೀಯರಾಗಿದ್ದಾರೆ.
ಇರಾನ್-ಅಮೆರಿಕ ಶಾಂತಿ ಮಾತುಕತೆಗಳ ವಿಫಲತೆ ಮತ್ತು ಅಮೆರಿಕದ ಪ್ರಸ್ತುತ ದಿಗ್ಬಂಧನದ ನಡುವೆ ಇತ್ತೀಚಿನ ವಾರಗಳಲ್ಲಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿವೆ.
ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದಲ್ಲಿ 16 ಭಾರತೀಯರು ಮೃತಪಟ್ಟಿದ್ದು, ಅವರಲ್ಲಿ 10 ಮಂದಿ ಭಾರತೀಯ ನಾವಿಕರಾಗಿದ್ದಾರೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸಿವೆ. ಹಾರ್ಮುಜ್ ಜಲಸಂಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮುಂದುವರಿದಿವೆ. ಅಕ್ಟೋಬರ್ ಮೊದಲ ವಾರದಲ್ಲೇ 7 ತೈಲ ನೌಕೆಗಳ ಮೇಲೆ ದಾಳಿಗಳು ನಡೆದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇವುಗಳಲ್ಲಿ ಕುವೈತ್ ಧ್ವಜ ಹೊಂದಿದ ‘ಎಂಟಿ ಕಾಜಿಮಾ III’ ಮತ್ತು ಲೈಬೀರಿಯಾ ಧ್ವಜ ಹೊಂದಿದ ‘ಲಿಪ್ಸಿ’ ನೌಕೆಗಳ ಮೇಲಿನ ದಾಳಿಗಳೂ ಸೇರಿವೆ.
ಇದನ್ನೂ ಓದಿ: ‘ಹಡಗು, ನಾವಿಕರ ಮೇಲಿನ ದಾಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’; ವಿಶ್ವಸಂಸ್ಥೆಯಲ್ಲಿ ಸಚಿವ ಜೈಶಂಕರ್ ಖಡಕ್ ಸಂದೇಶ
ಜುಲೈನಲ್ಲಿ ಒಮಾನ್ ಪ್ರಾದೇಶಿಕ ಜಲ ಗಡಿಯಲ್ಲಿ ಜಲಸಂಧಿಯನ್ನು ಹಾದುಹೋಗುತ್ತಿದ್ದ ಯುಎಇ ಸಂಪರ್ಕಿತ ‘ಎಂಟಿ ಮೊಂಬಾಸಾ’ ಮತ್ತು ‘ಎಂಟಿ ಅಲ್ ಬಾಹಿಯಾ’ ಎಂಬ ಎರಡು ಟ್ಯಾಂಕರ್‌ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ರೋಹನ್ ಕುಮಾರ್ ಎಂಬ ಭಾರತೀಯ ಸಿಬ್ಬಂದಿ ಮೃತಪಟ್ಟು, ಇತರ 10 ಮಂದಿ ಗಾಯಗೊಂಡಿದ್ದರು.
India calls for “immediate cessation of attacks” after strike on commercial vessel in Strait of Hormuz injures 11 of 17 nationals
Read @ANI Story |
https://t.co/JDs9PNigDw#MEA #Commericalvessels #StraitofHormuz #Strike #Indians https://t.co/t9NLoCXJYD
— ANI Digital (@ani_digital) October 6, 2026
ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರಕ್ಕೆ ಜೋಡಿಸುತ್ತದೆ. ಯುದ್ಧಕ್ಕೂ ಮುನ್ನ ಇದು ಜಾಗತಿಕ ತೈಲ ಮತ್ತು ಎಲ್‌ಎನ್‌ಜಿ ಪೂರೈಕೆಯ ಸುಮಾರು ಐದನೇ ಒಂದು ಭಾಗವನ್ನು ಸಾಗಿಸುತ್ತಿತ್ತು. ಇಲ್ಲಿನ ಅಡೆತಡೆಗಳು ಇಂಧನ ಬೆಲೆಗಳನ್ನು ಹೆಚ್ಚಿಸಬಹುದು ಮತ್ತು ಪೂರೈಕೆಯನ್ನು ವಿಳಂಬಗೊಳಿಸಬಹುದು. ದಾಳಿಗಳಿಂದಾಗಿ ಸರಕು ಸಾಗಣೆ ಮತ್ತು ವಿಮಾ ವೆಚ್ಚಗಳು ಹೆಚ್ಚಾಗುತ್ತಿದ್ದು, ತೈಲ ಪೂರೈಕೆ ಮುಂದುವರಿದರೂ ಸಾಗಣೆ ವೆಚ್ಚ ದುಬಾರಿಯಾಗುತ್ತಿದೆ. ಅಪಾಯವನ್ನು ಕಡಿಮೆ ಮಾಡಲು ಭಾರತ ಪರ್ಯಾಯ ಪೂರೈಕೆದಾರರನ್ನು ಹುಡುಕಿದೆ. ಮೇ ತಿಂಗಳ ವೇಳೆಗೆ ಭಾರತದ ಎಲ್‌ಎನ್‌ಜಿ ಖರೀದಿ ಜಲಸಂಧಿಯ ಒಳಗಿನ ಪೂರೈಕೆದಾರರಿಂದ ಇತರ ದೇಶಗಳತ್ತ ಗಣನೀಯವಾಗಿ ಬದಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ