ಕಾಂಗೋ: ಲಘು ವಿಮಾನ ಪತನಗೊಂಡು ಕನಿಷ್ಠ 23 ಮಂದಿ ಮೃತಪಟ್ಟಿರುವ ಘಟನೆ ಆಫ್ರಿಕಾ ಖಂಡದ ಕಾಂಗೋದಲ್ಲಿ ಭಾನುವಾರ ನಡೆದಿದೆ. ಗೋಮಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮನೆಗಳಿಗೆ ವಿಮಾನ ಡಿಕ್ಕಿಯೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಕೆಲ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಯಾವ ಪ್ರಯಾಣಿಕರು ಬದುಕುಳಿದಿಲ್ಲ ಎಂದು ವರದಿಯಾಗಿದೆ.
ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್ವೊಂದರಲ್ಲಿ ಸ್ಫೋಟದ ಶಬ್ಧ ಕೇಳಿಸಿದೆ. ತಕ್ಷಣ ಪೈಲೆಟ್ ವಿಮಾನವನ್ನು ಆರಂಭದ ಸ್ಥಳಕ್ಕೆ ಮರುಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
#DRCONGO: 24 ppl reported dead after a Busy Bee Congo Dornier 228 plane crashed into a residential area while taking off from Goma Int’l Airport in #Goma. pic.twitter.com/JdmjoDcLfW
— Horn24 (@Horn244) November 24, 2019
Published On - 11:15 pm, Sun, 24 November 19