ಕೊಲಂಬೊ: ಇತ್ತೀಚೆಗೆ ಭಯೋತ್ಪಾದಕರ ದಾಳಿಯಿಂದ ಬಸವಳಿದಿದ್ದ ಶ್ರೀಲಂಕಾ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಮೊನ್ನೆಯಷ್ಟೇ ಲಂಕಾ ಅಧ್ಯಕ್ಷರಾಗಿ ಗೊಟಬಯಾ ರಾಜಪಕ್ಸೆ ಆಯ್ಕೆಯಾಗಿದ್ದಾರೆ. ಮತ್ತಿಬ್ಬರು ಸದೋದರರ ಪೈಕಿ ಮಹಿಂದಾ ರಾಜಪಕ್ಸೆ ಪ್ರಧಾನ ಮಂತ್ರಿಯಾಗಿದ್ದರೆ. ಅವರದೇ ಸಂಪುಟದಲ್ಲಿ ಮತ್ತೊಬ್ಬ ಸಹೋದರ ಚಮಲ್ ರಾಜಪಕ್ಸೆಗೂ ಹಲವಾರು ಖಾತೆಗಳನ್ನು ಹಂಚಲಾಗಿದೆ.
ಸಂಪುಟದಲ್ಲಿ ಸಹೋದರರಿಗೆ ಸ್ಥಾನ:
ನಿನ್ನೆಯಷ್ಟೇ ಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ ಪ್ರಮಾಣ ವಚನ ಸ್ವೀಕರಿಸಿದ್ದರು. ಹಣಕಾಸು ಖಾತೆ, ಗ್ರಾಮೀಣಾಭಿವೃದ್ಧಿ, ಆರ್ಥಿಕ ವ್ಯವಹಾರ ಸೇರಿದಂತೆ ಹಲವಾರು ಖಾತೆಗಳನ್ನು ಮಹಿಂದಾ ಹೊಂದಿದ್ದಾರೆ. ಮತ್ತೊಬ್ಬ ಸಹೋದರ ಚಮಲ್ ರಾಜಪಕ್ಸೆಗೆ ಕೃಷಿ, ನೀರಾವರಿ, ಆಂತರಿಕ ವ್ಯಾಪಾರ ಸೇರಿ ಹಲವು ಖಾತೆಗಳನ್ನು ನೀಡಲಾಗಿದೆ.
ರಾನಿಲ್ ವಿಕ್ರಮ ಸಿಂಘೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸುತ್ತಿದ್ದಂತೆ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಿ ಹುದ್ದೆಗೆ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಶಿಫಾರಸು ಮಾಡಿದ್ದರು. 2005ರಿಂದ 2015ರವರೆಗೆ ಮಹಿಂದಾ ರಾಜಪಕ್ಸೆ ಲಂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಎಲ್ಲರಿಗೂ ಅಭಿನಂದನೆ ತಿಳಿಸಿ ಟ್ವೀಟ್:
ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮಧ್ಯಂತರ ಸಂಪುಟವನ್ನ ರಚಿಸಲಾಗಿದೆ. ಸಚಿವ ಸಂಪುಟದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿ ಪ್ರಧಾನಿ ಮಹಿಂದಾ ರಾಜಪಕ್ಸೆ ಟ್ವೀಟ್ ಮಾಡಿದ್ದಾರೆ.
I congratulate the new members of the cabinet. Together with the interim cabinet that was just appointed until the #GenElecSL, we look forward to serving all Sri Lankans.
— Mahinda Rajapaksa (@PresRajapaksa) November 22, 2019
Published On - 3:23 pm, Fri, 22 November 19