ಕೊವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; 27 ರೋಗಿಗಳು ಸಾವು, 90ಕ್ಕೂ ಹೆಚ್ಚು ಜನರ ರಕ್ಷಣೆ

ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಶ್ವಾಸಕೋಶದ ತೀವ್ರ ನಿಗಾ ಘಟಕ ಇರುವ ಬಳಿ. ನಂತರ ಅದು ಆವರಿಸಿಕೊಳ್ಳುತ್ತ ಹೋಯಿತು. ಆಸ್ಪತ್ರೆಯಿಂದ 90-120 ಜನರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; 27 ರೋಗಿಗಳು ಸಾವು, 90ಕ್ಕೂ ಹೆಚ್ಚು ಜನರ ರಕ್ಷಣೆ
ಬಾಗ್ದಾದ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ

Updated on: Apr 25, 2021 | 10:04 AM

ಇರಾಕ್​​ನ ರಾಜಧಾನಿ ಬಾಗ್ದಾದ್​​ದ ಕೊವಿಡ್​ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಅಗ್ನಿದುರಂತದಲ್ಲಿ 27 ರೋಗಿಗಳು ಸಾವನ್ನಪ್ಪಿದ್ದು, 46 ಮಂದಿ ಗಭೀರ ಗಾಯಗೊಂಡಿದ್ದಾರೆ. ಬಾಗ್ದಾದ್​ನ ಆಗ್ನೇಯದಲ್ಲಿರುವ ದಿಯಾಲಾ ಬ್ರಿಜ್​ ಏರಿಯಾದಲ್ಲಿರುವ ಐಬಿಎನ್​​ ಖತೀಬ್ ಆಸ್ಪತ್ರೆಯಲ್ಲಿ ಆಕ್ಸಿಜನ್​ ಟ್ಯಾಂಕ್​ ಸ್ಫೋಟಗೊಂಡ ಪರಿಣಾಮ ಈ ದುರಂತ ನಡೆದಿದೆ.

ಬೆಂಕಿ ಹೊತ್ತು ಉರಿಯುತ್ತಿರುವ ಬೆನ್ನಲ್ಲೇ ಅನೇಕ ಆಂಬುಲೆನ್ಸ್​ಗಳ ಮೂಲಕ ಇಲ್ಲಿನ ರೋಗಿಗಳನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಗಾಯಗೊಳ್ಳದೆ ಇರುವವರನ್ನೂ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಶ್ವಾಸಕೋಶದ ತೀವ್ರ ನಿಗಾ ಘಟಕ ಇರುವ ಬಳಿ. ನಂತರ ಅದು ಆವರಿಸಿಕೊಳ್ಳುತ್ತ ಹೋಯಿತು. ಆಸ್ಪತ್ರೆಯಿಂದ 90-120 ಜನರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾಕ್​​ನಲ್ಲಿ 102,5288 ಕೊರೊನಾ ಸೋಂಕಿತರು ಇದ್ದು, ಇದುವರೆಗೆ 15,217 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಹಾವೀರ ಜಯಂತಿ, ವೀಕೆಂಡ್ ಕರ್ಫ್ಯೂ ನಡುವೆ ಮಾಂಸ ಖರೀದಿಗೆ ಮುಗಿಬಿದ್ದ ಜನ, ಅಂಗಡಿ ಮುಚ್ಚಿಸಿ ಪೊಲೀಸರಿಂದ ವಾರ್ನಿಂಗ್

ವೈದ್ಯಕೀಯ ಆಕ್ಸಿಜನ್ ಅಭಾವ; ಆಮ್ಲಜನಕವಿಲ್ಲದೆ ಜೀವ ಬಿಟ್ಟ ನವಜಾತ ಅವಳಿ ಶಿಶುಗಳು

27 people have died in a fire Accident in covid 19 hospital of Baghdad hospital