ಚೀನಾದ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ; 36 ಜನ ಸಾವು, ಇಬ್ಬರು ನಾಪತ್ತೆ

ಸೋಮವಾರ ಸಂಜೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಚೀನಾದ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ; 36 ಜನ ಸಾವು, ಇಬ್ಬರು ನಾಪತ್ತೆ
ಚೀನಾದಲ್ಲಿ ಬೆಂಕಿ ಅವಘಡ
Image Credit source: NDTV
Updated By: ಸುಷ್ಮಾ ಚಕ್ರೆ

Updated on: Nov 22, 2022 | 8:29 AM

ಬೀಜಿಂಗ್: ಚೀನಾದ ಫ್ಯಾಕ್ಟರಿಯೊಂದರಲ್ಲಿ (China Fire Accident) ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ 36 ಜನರು ಸಾವನ್ನಪ್ಪಿದ್ದಾರೆ. ಈ ಬೆಂಕಿ ದುರಂತದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಫ್ಯಾಕ್ಟರಿಯೊಳಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ಸೋಮವಾರ ಸಂಜೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ” ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಬೆಂಕಿ ಹೊತ್ತಿಕೊಂಡ ಸೂಚನೆ ಸಿಕ್ಕ ಕೂಡಲೆ ಅಗ್ನಿಶಾಮಕ ರಕ್ಷಣಾ ತುಕಡಿ ಘಟನಾ ಸ್ಥಳಕ್ಕೆ ಆಗಮಿಸಿ, ಬೆಂಕಿ ಆರಿಸುವ ಕೆಲಸ ಮಾಡಿವೆ.

ಇದನ್ನೂ ಓದಿ: Video Viral: ತಮಿಳುನಾಡಿನ ಶಿವಕಾಶಿ ದೇವಸ್ಥಾನದ ಗೋಪುರಕ್ಕೆ ಬೆಂಕಿ

ಸಾರ್ವಜನಿಕ ಭದ್ರತೆ, ತುರ್ತು ಪ್ರತಿಕ್ರಿಯೆ, ಪುರಸಭೆ ಆಡಳಿತ ಮತ್ತು ವಿದ್ಯುತ್ ಸರಬರಾಜು ಘಟಕಗಳು ತುರ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿವೆ. ಸ್ಥಳೀಯ ಸಮಯ ರಾತ್ರಿ 11ರ ಸುಮಾರಿಗೆ ಬೆಂಕಿಯನ್ನು ಪೂರ್ತಿಯಾಗಿ ನಂದಿಸಲಾಗಿದೆ. ಈ ಘಟನೆಯಲ್ಲಿ 36 ಜನರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ವರ್ಷ ಚೀನಾದಲ್ಲಿ ನಡೆದ ಅನಿಲ ಸ್ಫೋಟದಲ್ಲಿ 25 ಜನರು ಮೃತಪಟ್ಟಿದ್ದರು. ಮಾರ್ಚ್ 2019ರಲ್ಲಿ ಶಾಂಘೈನಿಂದ 260 ಕಿ.ಮೀ. ದೂರದಲ್ಲಿರುವ ಯಾಂಚೆಂಗ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 78 ಜನರು ಮೃತಪಟ್ಟಿದ್ದರು. ಇದರಿಂದ ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳು ಧ್ವಂಸವಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ