ಇಟಲಿ(Italy)ಯಲ್ಲಿ ತರಬೇತಿ ಹಂತದಲ್ಲಿದ್ದ ಮಿಲಿಟರಿ ಜೆಟ್(Military Jet) ಕಾರಿನ ಮೇಲೆ ಪತನಗೊಂಡಿದ್ದು, ಐದು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಈ ಮಾಹಿತಿ ನೀಡಿದ್ದು, ಬಾಲಕಿಯ ಸಹೋದರ ಕೂಡ ಗಾಯಗೊಂಡಿದ್ದಾನೆ, ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಚಿವಾಲಯವು ಬಾಲಕಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ. ಪೈಲಟ್ ಪ್ಯಾರಾಚೂಟ್ನಿಂದ ಜಿಗಿಯುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೆಜಿಲ್ನಲ್ಲಿ ವಿಮಾನ ಪತನ 14 ಮಂದಿ ಸಾವು
ಬ್ರೆಜಿಲ್(Brazil)ನ ಉತ್ತರ ಅಮೆಜಾನ್(Amazon) ರಾಜ್ಯದಲ್ಲಿ ಶನಿವಾರ ನಡೆದ ವಿಮಾನ ಅಪಘಾತ(Plane Crash)ದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ.
ಮತ್ತಷ್ಟು ಓದಿ: Brazil Plane Crash: ಬ್ರೆಜಿಲ್ನಲ್ಲಿ ವಿಮಾನ ಪತನ, 14 ಮಂದಿ ಸಾವು
ಶನಿವಾರ ಬಾರ್ಸೆಲೋಸ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವಿಗೆ ಅಮೆಜನಾಸ್ನ ಗವರ್ನರ್ ವಿಲ್ಸನ್ ಲಿಮಾ ವಿಷಾಧ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಯಾರೂ ಕೂಡ ಬದುಕುಳಿದಿಲ್ಲ ಎಂದು ಬ್ರೆಜಿಲ್ ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಬಾರ್ಸೆಲೋಸ್‌ಗೆ ಸುಮಾರು 90 ನಿಮಿಷಗಳ ಹಾರಾಟ ನಡೆಸಬೇಕಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ