Nagasaki Day 2021: ನಾಗಸಾಕಿ ಮೇಲಿನ ಪರಮಾಣು ಬಾಂಬ್​ ದಾಳಿಗೆ 76 ವರ್ಷ; ಕಹಿ ನೆನಪು..

| Updated By: Lakshmi Hegde

Updated on: Aug 09, 2021 | 10:25 AM

ಅಣುಬಾಂಬ್​ ದಾಳಿಯಿಂದ ನಾಗಸಾಕಿ ಮತ್ತು ಹಿರೋಷಿಮಾದಲ್ಲಿ ಆ ಕ್ಷಣಕ್ಕೆ ಸತ್ತವರು ಲಕ್ಷಾಂತರ ಜನರಾದರೆ, ಬಳಿಕವೂ ಕೂಡ ಅಸಂಖ್ಯಾತ ಮಂದಿ ಕ್ಯಾನ್ಸರ್​ ಸೇರಿ ಮತ್ತಿತರ ರೋಗಗಳಿಂದ ಮೃತಪಟ್ಟಿದ್ದಾರೆ.

Nagasaki Day 2021: ನಾಗಸಾಕಿ ಮೇಲಿನ ಪರಮಾಣು ಬಾಂಬ್​ ದಾಳಿಗೆ 76 ವರ್ಷ; ಕಹಿ ನೆನಪು..
ನಾಗಸಾಕಿ ಚಿತ್ರಣ
Follow us on

ಜಪಾನ್​​ನ ನಾಗಸಾಕಿ (Nagasaki Day 2021) ನಗರದ ಮೇಲೆ ಪರಮಾಣು ಬಾಂಬ್​ ದಾಳಿ (Atomic Bomb) ನಡೆದು ಇಂದಿಗೆ 76 ವರ್ಷ. 1945 ಆಗಸ್ಟ್​ 9ರಂದು ಭೀಕರ ದುರ್ಘಟನೆ ನಡೆದಿತ್ತು. ಅದು ಎರಡನೇ ಜಾಗತಿಕ ಯುದ್ಧದ ಅಂತಿಮ ದಿನಗಳ ಸಂದರ್ಭ. 1945ರ ಆಗಸ್ಟ್​ 6ರಂದು ಮೊದಲು ಯುನೈಟೆಡ್​ ಸ್ಟೇಟಸ್​ ಹಿರೋಶಿಮಾ ಮೇಲೆ ಅಣುಬಾಂಬ್​ ದಾಳಿ ನಡೆಸಿತ್ತು. ಅದು ವಿಶ್ವದ ಮೊದಲ ಅಣುಬಾಂಬ್​ ದಾಳಿ (Atomic bomb)ಯೆಂಬ ಕುಖ್ಯಾತಿ ಪಡೆದಿದೆ. ಅದಾದ ಮೂರೇ ದಿನಗಳಲ್ಲಿ ನಾಗಸಾಕಿ ಮೇಲೆ ಅಣುಬಾಂಬ್​ ದಾಳಿ ಮಾಡಿತು. ಇವೆರಡೂ ಪರಮಾಣು ಬಾಂಬ್​ ದಾಳಿಗೆ ಜಪಾನ್​ ನಡುಗಿಹೋಗಿತ್ತು. ಹಿರೋಶಿಮಾ ದಾಳಿಯಲ್ಲಿ ಸುಮಾರು 140,000 ಮಂದಿ ಮೃತಪಟ್ಟಿದ್ದರೆ, ನಾಗಸಾಕಿ ದಾಳಿಯಲ್ಲಿ 70 ಸಾವಿರಕ್ಕೂ ಜನರು ಬಲಿಯಾಗಿದ್ದರು. ಈ ಎರಡೂ ಅಣುಬಾಂಬ್​ ದಾಳಿಗಳು ನಡೆದ ಕೆಲವೇ ದಿನಗಳಲ್ಲಿ, ಅಂದರೆ ಆಗಸ್ಟ್​ 15ರಂದು ಜಪಾನ್​ ಶರಣಾಯಿತು. ಅಲ್ಲಿಗೆ ಎರಡನೇ ವಿಶ್ವಯುದ್ಧ ಮುಕ್ತಾಐವಾಯಿತು

ಅಣುಬಾಂಬ್​ ದಾಳಿಯಿಂದ ನಾಗಸಾಕಿ ಮತ್ತು ಹಿರೋಷಿಮಾದಲ್ಲಿ ಆ ಕ್ಷಣಕ್ಕೆ ಸತ್ತವರು ಲಕ್ಷಾಂತರ ಜನರಾದರೆ, ಬಳಿಕವೂ ಕೂಡ ಅಸಂಖ್ಯಾತ ಮಂದಿ ಕ್ಯಾನ್ಸರ್​ ಸೇರಿ ಮತ್ತಿತರ ರೋಗಗಳಿಂದ ಮೃತಪಟ್ಟಿದ್ದಾರೆ. ಅಣುಬಾಂಬ್​ ಸ್ಫೋಟದಿಂದ ಹೊರಬಂದ ರೇಡಿಯೇಶನ್​ ಆ ನಗರಗಳಲ್ಲಿ ತೀವ್ರ ಹಾನಿಯನ್ನುಂಟು ಮಾಡಿದೆ.

ಯುಎಸ್​ ಅಣುಬಾಂಬ್​ ದಾಳಿ ಮಾಡಲು ಕಾರಣವೇನು?
ಎರಡನೇ ವಿಶ್ವಯುದ್ಧದಲ್ಲಿ ಒಮ್ಮೆ ಯುಎಸ್​ ಜಪಾನ್ ಮೇಲೆ ಅಣುಬಾಂಬ್​ ದಾಳಿ ನಡೆಸದೆ ಇದ್ದರೆ, ನಿಸ್ಸಂದೇಹವಾಗಿಯೂ ಜಪಾನ್​ ಗೆಲ್ಲುತ್ತಿತ್ತು. ಜಪಾನ್​ ಗೆಲ್ಲುವುದನ್ನು ತಪ್ಪಿಸಲೆಂದೇ ಯುಎಸ್​ ಇಂಥ ಒಂದು ಘನಘೋರ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಯುಎಸ್​​ನ ಹೆಚ್ಚಿನ ಜನರು ಸಾಯುವುದನ್ನು ತಪ್ಪಿಸಲು, ಜಪಾನ್​ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಿಂದ ಮತ್ತು ಯುದ್ಧ ಬೇಗನೇ ಮುಗಿಯಲಿ ಎಂಬ ಕಾರಣಕ್ಕೆ, ಮ್ಯಾನ್​ ಹಟ್ಟನ್ ಎಂಬ ಯೋಜನೆಯಡಿ ಅಣುಬಾಂಬ್​ ಪ್ರಯೋಗ ಮಾಡುವಂತೆ ವಿಜ್ಞಾನಿಗಳಿಗೆ ಯುಎಸ್​ನ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಸೂಚನೆ ನೀಡಿದ್ದರು.

ಸಿದ್ಧತೆ ಹೇಗಿತ್ತು?
ಜಪಾನ್​ನ್ನು ವಿನಾಶಗೊಳಿಸುವ ಮ್ಯಾನ್​ ಹಟ್ಟನ್​ ಯೋಜನೆ 1939ರಲ್ಲಿಯೇ ಪ್ರಾರಂಭಗೊಂಡಿತ್ತು. ಇದು ಎರಡನೇ ವಿಶ್ವಯುದ್ಧ ಪ್ರಾರಂಭವಾದ ವರ್ಷ. ಜಪಾನ್​ ವಿರುದ್ಧ ಗೆಲ್ಲಲು ಯುಎಸ್​ ಹೆಣದಿದ್ದ ಈ ರಣತಂತ್ರ ಯೋಜನೆಯಲ್ಲಿ ತೊಡಗಿಕೊಂಡಿದ್ದ ಅಮೆರಿಕದ ವಿಜ್ಞಾನಿಗಳಲ್ಲಿ ಹಲವರು ಯುರೋಪ್​ನ ಫ್ಯಾಸಿಸ್ಟ್​ ಆಡಳಿತದಿಂದ ನಿರಾಶ್ರಿತಗೊಂಡವರೇ ಆಗಿದ್ದರು. ಭೌತವಿಜ್ಞಾನಿ ಜೆ ರಾಬರ್ಟ್ ಓಪನ್‌ಹೀಮರ್ ಅವರ ನಿರ್ದೇಶನದಲ್ಲಿಯೇ ಅಣುಬಾಂಬ್​ಗಳು ತಯಾರಾಗಿದ್ದವು. 1940ರಲ್ಲಿ ಯುಎಸ್​ ಸರ್ಕಾರ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧನಸಹಾಯ ನೀಡಲು ಪ್ರಾರಂಭಿಸಿತ್ತು.

ಜಪಾನ್​ನ  ಪ್ರಮುಖ ಪಟ್ಟಣವಾಗಿದ್ದ ಹಿರೋಶಿಮಾ  ಸೇನಾ ಕಾರ್ಯಚಟುವಟಿಕೆಗಳ ಪ್ರಮುಖ ಕೇಂದ್ರವೂ ಆಗಿತ್ತು. ಹಾಗಾಗಿ ಯುಎಸ್​ ಮೊದಲು ಅದೇ ನಗರವನ್ನು ಗುರಿಯಾಗಿಸಿತು. ಮೂರು ದಿನಗಳ ನಂತರ ನಾಗಸಾಕಿ ಅಣುಬಾಂಬ್​ ದಾಳಿಗೆ ತತ್ತರಿಸಿತು. ಯುಎಸ್​ನ ಈ ಒಂದು ದಾಳಿ ಎರಡೂ ನಗರಗಳನ್ನು ಸಂಪೂರ್ಣ ನಾಶ ಮಾಡಿವೆ. ಎಲ್ಲೆಲ್ಲೂ ಆಕ್ರಂದನ, ಸುಟ್ಟ ನೋವುಗಳಿಂದ ಬಳಲುವವರ ಗೋಳಾಟಗಳು ಮುಗಿಲು ಮುಟ್ಟಿದ್ದವು. ಇನ್ನೂ ಒಂದೆಂದರೆ ಇದೆರಡೂ ದಾಳಿಗಳಿಂದ ಸೈನಿಕರು ಸತ್ತಿದ್ದಕ್ಕಿಂತ, ಬಲಿಯಾದ ನಾಗರಿಕರ ಸಂಖ್ಯೆಯೇ ಹೆಚ್ಚಾಗಿದೆ. ಇವತ್ತಿಗೂ ಆ ಎರಡೂ ನಗರಗಳಲ್ಲಿ ಮಕ್ಕಳಲ್ಲಿ ಊನ, ವಿವಿಧ ಆನುವಂಶಿಕ ಕಾಯಿಲೆಗಳು ಕಾಣಿಸಿಕೊಳ್ಳಲು ಅಂದು ನಡೆದ ಈ ಪರಮಾಣುಬಾಂಬ್​ ದಾಳಿಗಳೇ ಕಾರಣವಾಗಿವೆ.

ಇದನ್ನೂ ಓದಿ: ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು

ಮಾಣಿಕ್ ಷಾ ಪರೇಡ್ ಸ್ವಾತಂತ್ರ್ಯ ದಿನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ

Published On - 10:06 am, Mon, 9 August 21