AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಣಿಕ್ ಷಾ ಪರೇಡ್ ಸ್ವಾತಂತ್ರ್ಯ ದಿನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ

75th Indian Independence Day 2021: ಆಗಸ್ಟ್ 15 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸಲು ಅವಕಾಶವೇ ಇಲ್ಲ. ಗಣ್ಯ ವ್ಯಕ್ತಿ ,ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮಾಣಿಕ್ ಷಾ ಪರೇಡ್ ಸ್ವಾತಂತ್ರ್ಯ ದಿನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ
ಸಂಗ್ರಹ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Aug 09, 2021 | 10:07 AM

Share

ಬೆಂಗಳೂರು: ಮಹಾಮಾರಿ ಕೊರೊನಾ ಇಲ್ಲದಿದ್ದಿದ್ದರೆ ನಗರದಲ್ಲಿ ಸ್ವತಂತ್ರ ದಿನಾಚರಣೆಯ ರಂಗು ಎಲ್ಲೆಲ್ಲೂ ಪಸರಿಸಿರುತ್ತಿತ್ತು. ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಇಷ್ಟೊತ್ತಿಗಾಗಲೇ ದೇಶ ಪ್ರೇಮದ ಕೂಗು ಕೇಳಿ ಬರುತ್ತಿತ್ತು. ಶಾಲೆ- ಕಾಲೇಜು ವಿದ್ಯಾರ್ಥಿಗಳು ತಯಾರಿಯಲ್ಲಿ ಮುಳುಗುತ್ತಿದ್ದರು. ಎನ್ಸಿಸಿ ಕೆಡಿಟ್ಸ್ ಯೋಧರಂತೆ ಕಂಗೊಳಿಸುತ್ತಿದ್ದರು. ಆದರೆ ಕೊರೊನಾದಿಂದಾಗಿ ಎಲ್ಲವೂ ಮರೆಯಾಗಿದೆ. ಆಗಸ್ಟ್ 15ರ ಸ್ವತಂತ್ರ ದಿನಾಚರಣೆಗೆ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.

ಆಗಸ್ಟ್ 15 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸಲು ಅವಕಾಶವೇ ಇಲ್ಲ. ಗಣ್ಯ ವ್ಯಕ್ತಿ ,ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹೇಗೆ ನಡೆಯಬೇಕು ಎಂಬ ಬಗ್ಗೆ ಶೀಘ್ರವೇ ಸಿಎಸ್ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಡಿಮೆ ಜನರನ್ನ ಸೇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಬೇಕಾಗಿದೆ. ಹೀಗಾಗಿ ಸ್ಥಳ ವೀಕ್ಷಣೆ ಸಹ ಶೀಘ್ರವೇ ನಡೆಯಲಿದೆ. ಬಹುತೇಕ ಸರಳ‌ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಕೆಂಪು ಕೋಟೆ ಸುತ್ತ ಬಿಗಿಭದ್ರತೆ, ಎಲ್ಲೆಲ್ಲೂ ಕಂಟೇನರ್​ಗಳು

Published On - 10:04 am, Mon, 9 August 21