Covid 19 New Guidelines: ಬೆಂಗಳೂರಿಗೆ ಶೀಘ್ರದಲ್ಲೆ ಮತ್ತೆ ಟಫ್ ರೂಲ್ಸ್ ಜಾರಿ!
ರಾಜ್ಯ ಸರ್ಕಾರ ಈಗಾಗಲೇ ರಾತ್ರಿ 9 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ವಿಕೇಂಡ್ ಕರ್ಫ್ಯೂ ಜಾರಿಗೂ ಪ್ಲ್ಯಾನ್ ಮಾಡುತ್ತಿದೆ. ಈ ವಾರದ ಅಂತ್ಯಕ್ಕೆ ಸೋಂಕಿನ ಪ್ರಮಾಣ 500ರ ಗಡಿ ದಾಟಿದರೆ ವಿಕೇಂಡ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಕೊರೊನಾ (Coronavirus) ಎರಡನೇ ಅಲೆ ಮುಗಿಯುತ್ತಿದ್ದಂತೆ ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮತ್ತೆ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಾಗಿದೆ. ಜೊತೆಗೆ ನೈಟ್ ಕರ್ಫ್ಯೂ (Night Curfew) ಕೂಡಾ ಜಾರಿಯಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ತರಲು ಶೀಘ್ರದಲ್ಲೇ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಈಗಾಗಲೇ ರಾತ್ರಿ 9 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ವಿಕೇಂಡ್ ಕರ್ಫ್ಯೂ ಜಾರಿಗೂ ಪ್ಲ್ಯಾನ್ ಮಾಡುತ್ತಿದೆ. ಈ ವಾರದ ಅಂತ್ಯಕ್ಕೆ ಸೋಂಕಿನ ಪ್ರಮಾಣ 500ರ ಗಡಿ ದಾಟಿದರೆ ವಿಕೇಂಡ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಕಠಿಣ ನಿಯಮಗಳು ಜಾರಿಯಾಗಬಹುದು.
ಕಠಿಣ ನಿಯಮಗಳು ಜಾರಿಯಾದರೆ ಮದುವೆ ಸಮಾರಂಭದಲ್ಲಿ ಕೇವಲ 40 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೋಟೆಲ್ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ, ಬಸ್ಗಳಲ್ಲಿ ಓಡಾಡಲು ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಬಹುದು. ಇನ್ನು ಫ್ಯಾಕ್ಟರಿ, ಇಂಡಸ್ಟ್ರಿಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಇಂದು ಅಧಿಕಾರಿಗಳ ಸಭೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಿಬಿಎಂಪಿ ಸಂಪೂರ್ಣ ಅಧಿಕಾರ ಹೊಂದಿರುವ ಕಾರಣ ಅಧಿಕಾರಿಗಳು ಇಂದು ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಕೆಲ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. ಮುಖ್ಯವಾಗಿ 50-50 ರೂಲ್ಸ್ಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಆನ್ಲೈನ್ ತರಗತಿ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ.
ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿದ್ಧತೆ, ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, 20 ಲಕ್ಷ ಕೊರೊನಾ ಕೇಸ್ ದಾಟುವ ಆತಂಕ ಹಿನ್ನೆಲೆ ಸರ್ಕಾರ ಸಹ ಕೊರೊನಾ ನಿಯಂತ್ರಣ ಸಂಬಂಧ ಚರ್ಚೆ ನಡೆಸುತ್ತಿದೆ. ದೇವಿಶೆಟ್ಟಿ, ಸುದರ್ಶನ್ ಬಲ್ಲಾಳ್ ಮುಂದಿನ ಅಲೆಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊವಿಡ್ ಲಸಿಕೆಗೆ ಹೆಚ್ಚು ಒತ್ತು ಕೊಡಲು ಸೂಚಿಸಿದ್ದಾರೆ. ಸಭೆ, ಸಮಾರಂಭ, ನೈಟ್ ಪಾರ್ಟಿ ನಿರ್ಬಂಧಕ್ಕೆ ಸೂಚನೆ ನೀಡಿದ್ದಾರೆ. ಗಡಿಭಾಗದಲ್ಲಿ ವೀಕೆಂಡ್ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿ ಮಾಡಲು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
Coronavirus ಕೇರಳದಲ್ಲಿ 18,607 ಹೊಸ ಕೊವಿಡ್ ಪ್ರಕರಣ ಪತ್ತೆ, 93 ಸಾವು
(Bangalore will soon have a new Guidelines for controlling coronavirus)
Published On - 8:59 am, Mon, 9 August 21