Coronavirus ಕೇರಳದಲ್ಲಿ 18,607 ಹೊಸ ಕೊವಿಡ್ ಪ್ರಕರಣ ಪತ್ತೆ, 93 ಸಾವು

Coronavirus in Kerala: ಕೇರಳದಲ್ಲಿ 93 ಕೋವಿಡ್ -19 ಸಂಬಂಧಿತ ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 17,747 ಕ್ಕೆ ತಲುಪಿದೆ. ಪರೀಕ್ಷಾ ಪಾಸಿಟಿವಿಟಿ ದರವು ಶೇ 13.87 ದಾಖಲಾಗಿದೆ.

Coronavirus ಕೇರಳದಲ್ಲಿ 18,607 ಹೊಸ ಕೊವಿಡ್ ಪ್ರಕರಣ ಪತ್ತೆ, 93 ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 08, 2021 | 8:34 PM

ತಿರುವನಂತಪುರಂ: ಕೇರಳದಲ್ಲಿ ಕೊರೊನಾವೈರಸ್ ಇಳಿಮುಖ ಆಗುವ ಸೂಚನೆಗಳು ಕಾಣಿಸುತ್ತಿಲ್ಲ. ಭಾನುವಾರ ಇಲ್ಲಿ18,607 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 35,52,525 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ 93 ಕೊವಿಡ್ -19 ಸಂಬಂಧಿತ ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 17,747 ಕ್ಕೆ ತಲುಪಿದೆ. ಪರೀಕ್ಷಾ ಪಾಸಿಟಿವಿಟಿ ದರವು ಶೇ 13.87 ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ 20,108 ಜನರು ಸೋಂಕಿನಿಂದ ಗುಣಮುಖರಾಗಿದ್ದು ಚೇತರಿಸಿಕೊಂಡವರ ಸಂಖ್ಯೆ 33,57,687 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,76,572 ಕ್ಕೆ ತಲುಪಿದೆ ಎಂದು ಸರ್ಕಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 1,34,196 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಇಲ್ಲಿಯವರೆಗೆ 2,85,14,136 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಲಪ್ಪುರಂ ಜಿಲ್ಲೆಯು 3,051 ಪ್ರಕರಣಗಳೊಂದಿಗೆ ಅತಿ ಹೆಚ್ಚು ಹೊಸ ಸೋಂಕುಗಳನ್ನು ದಾಖಲಿಸಿದ್ದು, ತ್ರಿಶೂರ್ (2,472), ಕೋಯಿಕ್ಕೋಡ್ (2,467) ಮತ್ತು ಎರ್ನಾಕುಲಂ (2,216) ಜಿಲ್ಲೆಗಳಲ್ಲಿ 2,000ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ 1,550 ಕೊವಿಡ್ ಸೋಂಕುಗಳನ್ನು ದಾಖಲಿಸಿದ್ದು, ಕೊಲ್ಲಂನಲ್ಲಿ 1,075 ಮತ್ತು ಕಣ್ಣೂರು ಜಿಲ್ಲೆಯಲ್ಲಿ 1,012 ಪ್ರಕರಣಗಳು ವರದಿ ಆಗಿವೆ.

ಶನಿವಾರದಿಂದ 84 ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ -19 ಇರುವುದು ದೃಢಪಟ್ಟಿದೆ. 116 ಹೊಸ ರೋಗಿಗಳು ರಾಜ್ಯದ ಹೊರಗಿನಿಂದ ಬಂದಿದ್ದರೆ, 17,610 ಜನರು ಸಂಪರ್ಕದ ಮೂಲಕ ವೈರಸ್‌ಗೆ ತುತ್ತಾದರು. 797 ರ ಸೋಂಕಿನ ಮೂಲವು ತಿಳಿದಿಲ್ಲ ಎಂದು ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಪ್ರಸ್ತುತ ಸುಮಾರು 4,90,858 ಜನರು ನಿಗಾದಲ್ಲಿದ್ದಾರೆ. ಅವರಲ್ಲಿ 4,61,530 ಜನರು ಮನೆ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 29,328 ಮಂದಿ ಆಸ್ಪತ್ರೆಗಳಲ್ಲಿ ಇದ್ದಾರೆ.

ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದಿಂದ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ

ಇಲ್ಲಿನ ಫೋರ್ಟ್ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಕೆಲ ದಿನಗಳ ನಂತರ, ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘವು (ಕೆಜಿಎಂಒಎ) ಭಾನುವಾರ ಆಸ್ಪತ್ರೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಸಾಮಾನ್ಯ ಜನರಿಗೆ ಅಗತ್ಯ ವೈದ್ಯಕೀಯ ಆರೈಕೆಯ ಸುಗಮ ವಿತರಣೆಯ ಮೇಲೆ ಪರಿಣಾಮ ಬೀರುವ ದಾಳಿಗಳನ್ನು ತಡೆಗಟ್ಟಲು ಆಸ್ಪತ್ರೆಗಳಲ್ಲಿನ ಸೌಲಭ್ಯಗಳು ಅಸಮರ್ಪಕವಾಗಿವೆ ಎಂದು ಕೆಜಿಎಂಒಎ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರಯಲ್ಲಿನ ದಾಳಿಗಳು ಕೊವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮುಂಚೂಣಿಯಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದ್ದ ವೈದ್ಯರನ್ನು ನಿರಾಶೆಗೊಳಿಸಿದೆ. ನೀವು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡಿದ್ದೀರಿ ಮತ್ತು ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ನಮಗೆ ಖಚಿತವಾಗಿದೆ “ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ಅಸೋಸಿಯೇಷನ್ ಹೇಳಿದೆ.

ಗುರುವಾರ ರಾತ್ರಿ ಫೋರ್ಟ್ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರು ಹಾಗೂ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಇಬ್ಬರು ಜನರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 1598 ಮಂದಿಗೆ ಕೊವಿಡ್ ಸೋಂಕು, 20 ಮಂದಿ ಸಾವು

(Kerala on Sunday recorded 18,607 new Covid-19 cases 93 deaths TPR at 13.87 per cent)

Published On - 8:32 pm, Sun, 8 August 21