AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 Karnataka Update: ಕರ್ನಾಟಕದಲ್ಲಿ 1598 ಮಂದಿಗೆ ಕೊವಿಡ್ ಸೋಂಕು, 20 ಮಂದಿ ಸಾವು

ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ 348 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 1598 ಮಂದಿಗೆ ಕೊವಿಡ್ ಸೋಂಕು, 20 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 08, 2021 | 7:41 PM

Share

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಒಟ್ಟು 1598 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊವಿಡ್​ನಿಂದ 20 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1914 ಮಂದಿ ಸೋಂಕಿನಿಂದ ಚೇತರಿಸಿಕೊಂಡ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 23,930 ಸಕ್ರಿಯ ಪ್ರಕರಣಗಳಿವೆ. ಶೇ 1.09 ಪಾಸಿಟಿವಿಟಿ ಸರಾಸರಿಯಿದ್ದು, ಸಾವಿನ ಸರಾಸರಿ ಪ್ರಮಾಣ ಶೇ 1.25 ಆಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,18,525 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,57,776 ಮಂದಿ ಚೇತರಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ 348 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಇಂದು 366 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 12,30,486ಕ್ಕೆ ಏರಿಕೆಯಾಗಿದೆ. ಈವರೆಗೆ 12,06,078 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಒಟ್ಟು 8493 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 15,914 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 348, ಬಾಗಲಕೋಟೆ 2, ಬಳ್ಳಾರಿ 10, ಬೆಂಗಳೂರು ಗ್ರಾಮಾಂತರ 25, ಬೀದರ್ 2, ಚಾಮರಾಜನಗರ 22, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 52, ಚಿತ್ರದುರ್ಗ 22, ದಕ್ಷಿಣ ಕನ್ನಡ 438, ದಾವಣಗೆರೆ 15, ಧಾರವಾಡ 7, ಹಾಸನ 80, ಹಾವೇರಿ 2, ಕಲಬುರಗಿ 5, ಕೊಡಗು 83, ಕೋಲಾರ 36, ಕೊಪ್ಪಳ 7, ಮಂಡ್ಯ 31, ಮೈಸೂರು 98, ರಾಯಚೂರು 4, ಶಿವಮೊಗ್ಗ 37, ತುಮಕೂರು 38, ಉಡುಪಿ 129, ಉತ್ತರ ಕನ್ನಡ 53, ಗದಗ, ವಿಜಯಪುರ, ಯಾದಗಿರಿ 1.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ದಕ್ಷಿಣ ಕನ್ನಡ 6, ಹಾಸನ, ಕೋಲಾರ 3, ಧಾರವಾಡ, ಉತ್ತರ ಕನ್ನಡ 2, ಬೆಂಗಳೂರು ನಗರ, ಬೆಳಗಾವಿ, ದಾವಣಗೆರೆ, ಮೈಸೂರು 1.

(Karnataka Covid Numbers 1598 infected 20 died of coronavirus)

ಇದನ್ನೂ ಓದಿ: ಕೊವಿಡ್ -19 ಲಸಿಕೆಗಳಿಗೆ ಡೆಲ್ಟಾ ಪ್ರಸರಣವನ್ನು ನಿಲ್ಲಿಸಲು ಸಾಧ್ಯವಾಗದೇ ಇರಬಹುದು: ಎಚ್ಚರಿಕೆ ನೀಡಿದ ಬ್ರಿಟನ್

ಇದನ್ನೂ ಓದಿ: ಹಾಸನ: ಕೇರಳ ಮೂಲದ 102 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ದೃಢ