ಉಳಿದ 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ದೆವಾ? ಮುನಿರತ್ನ ಪ್ರಶ್ನೆ

2 ವರ್ಷ ನಾನು ಯಾವುದೇ ಅಧಿಕಾರ ಇಲ್ಲದೆ ಸುಮ್ಮನಿದ್ದೆ. ಪಕ್ಷದ ಕೆಲಸ ಮಾಡಿಕೊಂಡಿದ್ದೆ, ಇಂದು ಪಕ್ಷ ಗುರುತಿಸಿದೆ. ತಾಳ್ಮೆಯಿಂದ ಇರಬೇಕು, ಎಲ್ಲ ಇವತ್ತೇ ಆಗಬೇಕಂದ್ರೆ ಹೇಗೆ? ನೀವು ಬಂದಿರುವ ಉದ್ದೇಶ ಏನು ಎಂದು ಮುನಿರತ್ನ ಪ್ರಶ್ನಿಸಿದ್ದಾರೆ.

ಉಳಿದ 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ದೆವಾ?  ಮುನಿರತ್ನ ಪ್ರಶ್ನೆ
ಮುನಿರತ್ನ
Follow us
TV9 Web
| Updated By: guruganesh bhat

Updated on:Aug 08, 2021 | 9:54 PM

ತುಮಕೂರು: ರಾಜ್ಯ ಸಚಿವ ಸಂಪುಟದಲ್ಲಿ ಕೇಳಿದ್ದ ಖಾತೆ ನೀಡಿಲ್ಲವೆಂದು ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ನೂತನ ತೋಟಗಾರಿಕಾ ಸಚಿವ ಮುನಿರತ್ನ ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಚಿವರು ಯಾಕೆ ದೊಡ್ಡ ದೊಡ್ಡ ಖಾತೆ ಬೇಕು ಎಂದು ಕೇಳೋದು? ನನ್ನ ಪ್ರಕಾರ ಆ ರೀತಿ ಕೇಳುವುದು ತಪ್ಪು. 2 ವರ್ಷ ನಾನು ಯಾವುದೇ ಅಧಿಕಾರ ಇಲ್ಲದೆ ಸುಮ್ಮನಿದ್ದೆ. ಪಕ್ಷದ ಕೆಲಸ ಮಾಡಿಕೊಂಡಿದ್ದೆ, ಇಂದು ಪಕ್ಷ ಗುರುತಿಸಿದೆ. ತಾಳ್ಮೆಯಿಂದ ಇರಬೇಕು, ಎಲ್ಲ ಇವತ್ತೇ ಆಗಬೇಕಂದ್ರೆ ಹೇಗೆ? ನೀವು ಬಂದಿರುವ ಉದ್ದೇಶ ಏನು ಎಂದು ಮುನಿರತ್ನ ಪ್ರಶ್ನಿಸಿದ್ದಾರೆ. ಇವತ್ತು ಏನು ಸಿಗುತ್ತದೆಯೋ ಅದನ್ನು ಅನುಭವಿಸಿ ಮತ್ತೆ ಹೋಗ್ಬೇಕಾ? ಈಗ ಅನುಭವಿಸಿ ಮತ್ತೆ ಹೋಗಬೇಕು ಎಂಬ ಉದ್ದೇಶವೇ? 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ವಾ? 105 ಶಾಸಕರು ಇದ್ದಿದ್ದಕ್ಕೆ ಅಲ್ವಾ ನಾವು ಮಂತ್ರಿಗಳಾಗಿದ್ದು? ಎಂದು ಅವರು ಪ್ರಶ್ನಿಸಿದ್ದಾರೆ. 

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನೂತನ ತೋಟಗಾರಿಕಾ ಸಚಿವ ಸಚಿವ ಮುನಿರತ್ನ ತಮ್ಮ ಖಾತೆಯ ಬಗ್ಗೆ ಆಕ್ಷೇಪವೆತ್ತಿರುವ ಕೆಲವು ಸಚಿವರಿಗೆ ಈ ಪ್ರಶ್ನೆ ಕೇಳಿದ್ದಾರೆ. ಸಿಎಂ ಬದಲಾವಣೆಯಿಂದ ಯಾವ ಅಭದ್ರತೆಯೂ ಇಲ್ಲ. ನಾನು ಬಿಜೆಪಿ ಸದಸ್ಯನಾಗಿ, ಕಾರ್ಯಕರ್ತನಾಗಿ ಇಲ್ಲಿದ್ದೇನೆ. ಖಾತೆ ಕೊಟ್ಟರೂ ಹೀಗೆ, ಕೊಡದಿದ್ದರೂ ಹೀಗೆ ಇರುತ್ತೇನೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಚಿವ ಮುನಿರತ್ನ ಸ್ಪಷ್ಟಪಡಿಸಿದರು.

ಇದನ್ನೂ ಓದಿ:  

ಕೇಳಿದ ಖಾತೆ ನೀಡಿಲ್ಲವೆಂದು ಆನಂದ್ ಸಿಂಗ್ ಅಸಮಾಧಾನ; ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸಚಿವ

ಖಾತೆ ಬದಲಾವಣೆ ತಕ್ಷಣಕ್ಕೆ ಸಾಧ್ಯವಿಲ್ಲ ಎಂದಿರುವ ಸಿಎಂ ಬೊಮ್ಮಾಯಿ; ಅರೆ ಮನಸ್ಸಿನಿಂದ ಹೊರಟ ಎಂಟಿಬಿ ನಾಗರಾಜ್

(Karnataka horticulture Minister Munirathna says from the help of other 105 BJP MLAs we are became Ministers)

Published On - 8:45 pm, Sun, 8 August 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್