ಕೇಳಿದ ಖಾತೆ ನೀಡಿಲ್ಲವೆಂದು ಆನಂದ್ ಸಿಂಗ್ ಅಸಮಾಧಾನ; ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸಚಿವ

ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸಿಎಂರನ್ನು ಆನಂದ್ ಸಿಂಗ್ ಭೇಟಿ ಮಾಡಿದ್ದಾರೆ.

ಕೇಳಿದ ಖಾತೆ ನೀಡಿಲ್ಲವೆಂದು ಆನಂದ್ ಸಿಂಗ್ ಅಸಮಾಧಾನ; ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸಚಿವ
ಆನಂದ್ ಸಿಂಗ್
Follow us
TV9 Web
| Updated By: sandhya thejappa

Updated on:Aug 08, 2021 | 2:15 PM

ಬೆಂಗಳೂರು: ನಿನ್ನೆ (ಆಗಸ್ಟ್ 7) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ತಮಗೆ ಸಿಕ್ಕ ಖಾತೆ ಬಗ್ಗೆ ಹಲವು ಸಚಿವರಿಗೆ ಖುಷಿಯಿದೆ. ಆದರೆ ಕೆಲ ಸಚಿವರಿಗೆ ಊಹಿಸಿದ್ದ ಖಾತೆ ಸಿಗದಿದ್ದಕ್ಕೆ ಬೇಸರವೂ ಆಗಿದೆ. ಸಚಿವ ಆನಂದ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ನೀಡಿದ್ದು, ತಾನು ಕೇಳಿದ ಖಾತೆಯನ್ನು ನೀಡಲಿಲ್ಲ ಅಂತ ಬೇಸರಗೊಂಡಿದ್ದಾರೆ. ಇದೇ ವಿಚಾರವಾಗಿ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸಿಎಂರನ್ನು ಆನಂದ್ ಸಿಂಗ್ (Anand Singh) ಭೇಟಿ ಮಾಡಿದ್ದಾರೆ.

ಖಾತೆಯ ಬಗ್ಗೆ ಆನಂದ್ ಸಿಂಗ್ ನಿನ್ನೆಯಷ್ಟೇ ಅಸಮಧಾನ ವ್ಯಕ್ತಪಡಿಸಿದ್ದರು. ಇಂದು ಮುಖ್ಯಮಂತ್ರಿಯನ್ನು ಭೇಟಿಯಾಗಿರುವ ಅವರು ಖಾತೆ ಬದಲಿಸುವಂತೆ ಮನವಿ ಮಾಡಿದ್ದಾರೆ. ಕುಟುಂಬ ಸಮೇತ ಬಂದು ಸಿಎಂ ಭೇಟಿಯಾಗಿ ಖಾತೆ ಬದಲಾವಣೆ ಬಗ್ಗೆ ಮನವಿ ಮಾಡಿರುವ ಅನಂದ್ ಸಿಂಗ್, ಭೇಟಿ ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ. ಈ ವರ್ತನೆಯಿಂದ ಖಾತೆ ಹಂಚಿಕೆಯ ಅಸಮಾಧಾನ ಇನ್ನೂ ಶಮನವಾಗಿಲ್ವಾ? ಎಂಬ ಪ್ರಶ್ನೆ ಮೂಡಿದೆ.

ಅಸಮಾಧಾನ ಹೊರ ಹಾಕಿರುವ ಅನಂದ್ ಸಿಂಗ್ ಕೇಳಿದ ಖಾತೆ ಏಕೆ ನೀಡಲಿಲ್ಲ ಅನ್ನೋದು ನನಗೆ ತಿಳಿಸಬೇಕು. ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿ ಮನವಿ ಮಾಡುವೆ. ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್ ಫಿಟ್ ಇದೀನಾ? ಎಂದು ಕೇಳುವೆ. ಅವರು ನೀನು ನಾಲಾಯಕ್ ಅಂತ ಅನ್ನೋದನ್ನಾದ್ರೂ ಹೇಳಲಿ. ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನೂ ಮೊದಲಿಗ. ಮೊದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಾನೇ. ನಾನು ರಾಜೀನಾಮೆ ನೀಡಿದಾಗ ಯಾರೂ ಕೊಟ್ಟಿರಲಿಲ್ಲ. ನಾನು ಕೇಳಿದ ಖಾತೆ ನನಗೆ ಮತ್ತು ಸಿಎಂಗೆ ಮಾತ್ರ ಗೊತ್ತು. ಕೇಳಿದ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಬಳ್ಳಾರಿ ನಗರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ನನ್ನ ನಡೆಯನ್ನೆಲ್ಲಾ ಸಿಎಂಗೆ ಹೇಳಿದ್ದೇನೆ. ನನ್ನ ಬೇಡಿಕೆ ಈಡೇರಿಲ್ಲ. ಬಿಜೆಪಿಗೆ ಸೇರಬೇಕಾದಾಗ ನಾನು ಇಟ್ಟಿದ್ದ ಬೇಡಿಕೆ ಈಡೇರಿಲ್ಲ. ಯಡಿಯೂರಪ್ಪ ಅವರೇ ಇದ್ದಿದ್ರೆ ನಾವು ಅದನ್ನ ಕೇಳುತ್ತಿರಲಿಲ್ಲ. ಮಂತ್ರಿ ಮಂಡಲ ಬದಲಾಗಿದ್ದಕ್ಕೆ ನಾವು ಕೇಳುತ್ತಿದ್ದೇವೆ. ಹೊರಗಡೆ ಯಾವುದನ್ನೂ ಮಾತನಾಡಬೇಡಿ ಎಂದು ಹೇಳಿದ್ದಾರೆ. ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲಾ ಕೂಡ ಮುಖ್ಯಮಂತ್ರಿಯವರ ಕೈಯಲ್ಲಿ ಇದೆ. ಸಿಎಂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ನನ್ನ ಬೇಡಿಕೆಯನ್ನೆಲ್ಲಾ ಸಿಎಂ ಮುಂದೆ ಇಟ್ಟಿದ್ದೇನೆ. ಯಾವಾಗ ತೀರ್ಮಾನ ತೆಗೆದುಕೊಳ್ತಾರಾ ನೋಡಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಸಮಯವನ್ನ ಕೇಳಿದ್ದಾರೆ ಎಂದು  ಟಿವಿ9ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಉಡುಪಿ: ಪ್ರವಾಸಿಗರಿಗೆ ಶಾಕ್ ನೀಡಿದ ಜಿಲ್ಲಾಡಳಿತ; ಸೆಪ್ಟೆಂಬರ್ 15 ರವರೆಗೆ ಸಮುದ್ರದ ಅಲೆಗಳ ಜತೆ ಆಟವಾಡಲು ನಿರ್ಬಂಧ

ಕೇಳಿದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವ ಪರೋಕ್ಷ ಸುಳಿವು ಕೊಟ್ಟ ನೂತನ ಸಚಿವ ಆನಂದ್ ಸಿಂಗ್

(Anand Singh upset to cabinet post and today meet to CM Basavaraj Bommai at Bengaluru)

Published On - 10:27 am, Sun, 8 August 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ