AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಳಿದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವ ಪರೋಕ್ಷ ಸುಳಿವು ಕೊಟ್ಟ ನೂತನ ಸಚಿವ ಆನಂದ್ ಸಿಂಗ್

ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್‌ ಫಿಟ್ ಇದೀನಾ? : ನೂತನ ಸಚಿವ ಆನಂದ್ ಸಿಂಗ್

ಕೇಳಿದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವ ಪರೋಕ್ಷ ಸುಳಿವು ಕೊಟ್ಟ ನೂತನ ಸಚಿವ ಆನಂದ್ ಸಿಂಗ್
ಆನಂದ್ ಸಿಂಗ್
TV9 Web
| Updated By: guruganesh bhat|

Updated on:Aug 07, 2021 | 3:44 PM

Share

ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕೇಳಿದ ಖಾತೆ ನೀಡದಿರುವುದು ನನಗೆ ಅಸಮಾಧಾನ ಉಂಟುಮಾಡಿದೆ. ಕೇಳಿದ ಖಾತೆ ಏಕೆ ನೀಡಲಿಲ್ಲ ಅನ್ನೋದು ನನಗೆ ತಿಳಿಸಬೇಕು. ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿ ಮನವಿ ಮಾಡುವೆ. ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್‌ ಫಿಟ್ ಇದೀನಾ? ಎಂದು ಕೇಳುವೆ. ಅವರು ನೀನು ನಾಲಾಯಕ್ ಅಂತ ಅನ್ನೋದನ್ನಾದ್ರೂ ಹೇಳಲಿ. ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನೂ ಮೊದಲಿಗ. ಮೊದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಾನೇ. ನಾನು ರಾಜೀನಾಮೆ ನೀಡಿದಾಗ ಯಾರೂ ಕೊಟ್ಟಿರಲಿಲ್ಲ. ನಾನು ಕೇಳಿದ ಖಾತೆ ನನಗೆ ಮತ್ತು ಸಿಎಂಗೆ ಮಾತ್ರ ಗೊತ್ತು. ಕೇಳಿದ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಬಳ್ಳಾರಿ ನಗರದಲ್ಲಿ ಎಚ್ಚರಿಕೆ ನೀಡಿದರು.

ಸಚಿವ ಆನಂದ್ ಸಿಂಗ್ ಅಸಮಧಾನದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ‘ಎಲ್ಲರಿಗೂ ಕೇಳಿದ ಖಾತೆ ನೀಡಲು ಆಗಲ್ಲ. ನಾಳೆ ಸಚಿವ ಆನಂದ್ ಸಿಂಗ್ ಜತೆ ಚರ್ಚೆ ಮಾಡುತ್ತೇನೆ. ಸಂಪುಟ ರಚನೆಯಾದಾಗ ಅಸಮಾಧಾನ ಸಹಜ’ ಎಂದು ತಿಳಿಸಿದರು.

ಇದನ್ನೂ ಓದಿ: ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಮಹತ್ವದ, ಆಯಕಟ್ಟಿನ ಇಲಾಖೆ ನೀಡಿದರೂ ರಗಳೆ ತೆಗೆದ ಬಳ್ಳಾರಿ ಕಡೆಯ ಇಬ್ಬರು ಸಚಿವರು

ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

(Minister Anand Singh indirectly instructed him to resign if he did not give his demanded ministry)

Published On - 3:35 pm, Sat, 7 August 21