ಕೊವಿಡ್ -19 ಲಸಿಕೆಗಳಿಗೆ ಡೆಲ್ಟಾ ಪ್ರಸರಣವನ್ನು ನಿಲ್ಲಿಸಲು ಸಾಧ್ಯವಾಗದೇ ಇರಬಹುದು: ಎಚ್ಚರಿಕೆ ನೀಡಿದ ಬ್ರಿಟನ್

ಕೊವಿಡ್ -19 ಲಸಿಕೆಗಳಿಗೆ ಡೆಲ್ಟಾ ಪ್ರಸರಣವನ್ನು ನಿಲ್ಲಿಸಲು ಸಾಧ್ಯವಾಗದೇ ಇರಬಹುದು: ಎಚ್ಚರಿಕೆ ನೀಡಿದ ಬ್ರಿಟನ್
ಪ್ರಾತಿನಿಧಿಕ ಚಿತ್ರ

Delta variant ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಇತ್ತೀಚಿನ ಸಾಂಕ್ರಾಮಿಕ ರೋಗ ವರದಿಯಲ್ಲಿ ಮೂರು ಹೆಚ್ಚುವರಿ ದೇಶಗಳು ಡೆಲ್ಟಾ ರೂಪಾಂತರ ಪ್ರಕರಣಗಳನ್ನು ವರದಿ ಮಾಡಿವೆ. ಅಂತಹ ದೇಶಗಳ ಒಟ್ಟು ಸಂಖ್ಯೆ 135 ಕ್ಕೆ ತಲುಪಿದೆ ಎಂದು ಹೇಳಿದೆ.

TV9kannada Web Team

| Edited By: Rashmi Kallakatta

Aug 06, 2021 | 9:16 PM

ಲಂಡನ್: ಆರಂಭಿಕ ಸಂಶೋಧನೆಗಳ ಪ್ರಕಾರ Sars-CoV-2 ನ ಡೆಲ್ಟಾ ರೂಪಾಂತರವು ಕೊವಿಡ್ ವಿರುದ್ಧ ಲಸಿಕೆ ಹಾಕಿದ ಜನರು ಲಸಿಕೆ ಹಾಕದವರಂತೆ ಸಾಂಕ್ರಾಮಿಕ ರೋಗವನ್ನು ಹರಡಬಹುದು ಎಂದು ಸೂಚಿಸಿವೆ ಎಂದು ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ (PHE) ಶುಕ್ರವಾರ ಹೇಳಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಡೆಲ್ಟಾ ರೂಪಾಂತರಿಯ ಹರಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಸಂಶೋಧನೆಗಳು ಬಂದಿವೆ.

ಭಾರತದಲ್ಲಿ ಮೊದಲು ಪತ್ತೆಯಾದ ಕಾಳಜಿಯ ರೂಪಾಂತರವು ವೇಗವಾಗಿ ವಿಶ್ವದಾದ್ಯಂತ  ಹರಡುತ್ತಿದೆ. ಪಿಎಚ್‌ಇ ಪ್ರಕಟಿಸಿದ ವರದಿಯಲ್ಲಿ ವಿಜ್ಞಾನಿಗಳು ವ್ಯಾಕ್ಸಿನೇಷನ್ ಕೊರೊನಾವೈರಸ್ ಹರಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರೂ ಹೆಚ್ಚಿನ ಮಟ್ಟದ ರಕ್ಷಣೆ ನೀಡುತ್ತದೆ ಎಂದಿದ್ದರು.

ಕೆಲವು ಆರಂಭಿಕ ಸಂಶೋಧನೆಗಳ ಪ್ರಕಾರ ಈಗಾಗಲೇ ಲಸಿಕೆ ಹಾಕಿದವರು ಡೆಲ್ಟಾ ಸೋಂಕಿಗೆ ಒಳಗಾಗಿದ್ದರೆ ವೈರಸ್ ಮಟ್ಟವು ಲಸಿಕೆ ಹಾಕದ ಜನರಲ್ಲಿ ಕಂಡುಬರುವ ಮಟ್ಟವನ್ನು ಹೋಲುತ್ತದೆ ಎಂದು ಸೂಚಿಸುತ್ತದೆ” ಎಂದು ಪಿಎಚ್‌ಇ ಹೇಳಿಕೆಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ ಡೆಲ್ಟಾ ರೂಪಾಂತರವು ಈಗ ಬ್ರಿಟನ್​​ನಾದ್ಯಂತ ಕೊವಿಡ್ -19 ಪ್ರಕರಣಗಳಲ್ಲಿ ಶೇ 99ಕ್ಕಿಂತಲೂ ಹೆಚ್ಚಿದೆ. ಡೆಲ್ಟಾ ರೂಪಾಂತರದ ದೃಢಪಟ್ಟ ಪ್ರಕರಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ 1,467 ರೋಗಿಗಳಲ್ಲಿ ಶೇ 55.1 ಜನರು ಲಸಿಕೆ ಹಾಕಿಲ್ಲ. ಆದರೆ ಶೇ34.9 ಜನರು ಕೊವಿಡ್ -19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ವ್ಯಾಕ್ಸಿನೇಷನ್ ಡ್ರೈವ್ ಮತ್ತಷ್ಟು ವಿಸ್ತರಿಸಿದಂತೆ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿದ ಜನರು ಸಂಖ್ಯೆಯಲ್ಲಿ ಶೇಕಡಾವಾರು ಏರಿಕೆ ಕಾಣುತ್ತದೆ ಎಂದು ಪಿಎಚ್ಇ ಹೇಳಿದೆ.

ಅವರಿಗೆ ಲಸಿಕೆ ಹಾಕಲಾಗಿದೆಯೋ ಇಲ್ಲವೋ ಇದು ಪರಿಣಾಮ ಬೀರಬಹುದು, ಆದಾಗ್ಯೂ, ಇದು ಆರಂಭಿಕ ಪರಿಶೋಧನೆಯ ವಿಶ್ಲೇಷಣೆ ಮತ್ತು ಇದು ಇದೆಯೇ ಎಂದು ಖಚಿತಪಡಿಸಲು ಮತ್ತಷ್ಟು ಅಧ್ಯಯನಗಳು ಬೇಕಾಗುತ್ತವೆ ಎಂದು ಪಿಎಚ್ಇ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಇತ್ತೀಚಿನ ಸಾಂಕ್ರಾಮಿಕ ರೋಗ ವರದಿಯಲ್ಲಿ ಮೂರು ಹೆಚ್ಚುವರಿ ದೇಶಗಳು ಡೆಲ್ಟಾ ರೂಪಾಂತರ ಪ್ರಕರಣಗಳನ್ನು ವರದಿ ಮಾಡಿವೆ. ಅಂತಹ ದೇಶಗಳ ಒಟ್ಟು ಸಂಖ್ಯೆ 135ಕ್ಕೆ ತಲುಪಿದೆ ಎಂದು ಹೇಳಿದೆ.

ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಡಾ ಜೆನ್ನಿ ಹ್ಯಾರಿಸ್ ಅವರು ತೀವ್ರ ಅನಾರೋಗ್ಯದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಲಸಿಕೆ ಅತ್ಯುತ್ತಮ ಸಾಧನವಾಗಿದೆ.ಆದಾಗ್ಯೂ, ಅದು ಎಲ್ಲಾ ಅಪಾಯಗಳನ್ನು ನಿವಾರಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆಯದೇ ಇದ್ದರೆ ಸೆಲ್ ಫೋನ್ ಬ್ಲಾಕ್, ಕೆಲಸಕ್ಕೂ ಕುತ್ತು: ಕಠಿಣ ಕ್ರಮ ಕೈಗೊಂಡ ಪಾಕಿಸ್ತಾನ

ಇದನ್ನೂ ಓದಿ: ಚೀನಾದಲ್ಲಿ ಹೆಚ್ಚುತ್ತಿದೆ ಡೆಲ್ಟಾ ರೂಪಾಂತರಿ ವೈರಸ್​ ಪ್ರಸರಣ; ನಾಲ್ಕು ನಗರಗಳು ತೀವ್ರ ಅಪಾಯದಲ್ಲಿ..

Follow us on

Related Stories

Most Read Stories

Click on your DTH Provider to Add TV9 Kannada