Weekly Horoscope: ಆಗಸ್ಟ್ 24 ರಿಂದ ಆಗಸ್ಟ್ 30 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಆಗಸ್ಟ್ ತಿಂಗಳ ನಾಲ್ಕನೇ ವಾರ 24-08-2025 ರಿಂದ 30-08-2025ರವರೆಗೆ ಇರಲಿದೆ. ಬುಧನ ಚಲನೆ ಬದಲಾಗಲಿದೆ. ಶತ್ರುವಿನ ಮನೆಯಿಂದ ಮಿತ್ರನ ಮನೆಗೆ ಬಂದರೂ ಕೇತುವಿನ ಸಹವಾಸ ಉಂಟಾಗಲಿದ್ದು ಬೌದ್ಧಿಕ ಚಿಂತನೆ ಭಿನ್ನವಾಗಿದ್ದು ಹೊಂದಾಣಿಕೆ ಕಷ್ಟವೆನಿಸುವುದು. ಯಾವುದೇ ನಿರ್ಧಾರವನ್ನು ಆತುರದಿಂದ ಪಡೆಯದೇ ಮುಂದುವರಿಯುವ ಅವಕಾಶವನ್ನು ಒಬ್ಬರು ಮಾಡಿಕೊಳ್ಳಬೇಕು.

ಆಗಸ್ಟ್ ತಿಂಗಳ ನಾಲ್ಕನೇ ವಾರ 24-08-2025 ರಿಂದ 30-08-2025ರವರೆಗೆ ಇರಲಿದೆ. ಬುಧನ ಚಲನೆ ಬದಲಾಗಲಿದೆ. ಶತ್ರುವಿನ ಮನೆಯಿಂದ ಮಿತ್ರನ ಮನೆಗೆ ಬಂದರೂ ಕೇತುವಿನ ಸಹವಾಸ ಉಂಟಾಗಲಿದ್ದು ಬೌದ್ಧಿಕ ಚಿಂತನೆ ಭಿನ್ನವಾಗಿದ್ದು ಹೊಂದಾಣಿಕೆ ಕಷ್ಟವೆನಿಸುವುದು. ಯಾವುದೇ ನಿರ್ಧಾರವನ್ನು ಆತುರದಿಂದ ಪಡೆಯದೇ ಮುಂದುವರಿಯುವ ಅವಕಾಶವನ್ನು ಒಬ್ಬರು ಮಾಡಿಕೊಳ್ಳಬೇಕು.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಗೆ ಈ ವಾರ ರಾಶಿಯ ಅಧಿಪತಿ ಬುಧನ ಸ್ಥಾನದಲ್ಲಿದ್ದು ನೌಕರರ ಬಗ್ಗೆ ನಿಮಗೆ ಕಾಳಜಿ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಈ ವಾರ ದೊಡ್ಡ ಉದ್ಯಮಿಗಳು ನಿಮ್ಮನ್ನು ಭೇಟಿಯಾಗಲುದ್ದಾರೆ. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ನಗರದ ಸಮೀಪದಲ್ಲಿ ಉತ್ತಮ ನೀರಾವರಿ ಪ್ರದೇಶ ಸಿಗುವುದು. ಸಂಗಾತಿಯ ವಿಚಾರಕ್ಕೆ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ನೀವು ನಿಗ್ರಹಿಸುವ ವಿಧಾನವನ್ನು ಕಂಡಿಲುಕೊಂಡಿರುವಿರಿ. ಅಧಿಕೃತ ಮೂಲದಿಂದ ಬಂದ ವಿಚಾರಗಳನ್ನು ಮಾತ್ರ ನಂಬಿ. ನಿಮ್ಮ ಬಗ್ಗೆ ಆತ್ಮವಿಶ್ವಾಸವು ಇರಲಿ.
ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರನು ಈ ವಾರ ತೃತೀಯದಲ್ಲಿ ಇದ್ದು ಸಹೋದರಿಯ ಬಗ್ಗೆ ಅನುಕಂಪ ಬರಲಿದೆ. ಹೇಳಬೇಕಾದ ವಿಚಾರವನ್ನು ನೀವು ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲಿರಿಗೂ ಇಷ್ಟವಾಗುವುದು. ಈ ವಾರ ನೀವು ಹೋದಕಡೆ ನಿಮಗೆ ಬೇಕಾದ ಸಂತೋಷಕರವಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಧನ ಸಹಾಯವನ್ನು ಮಾಡುವಿರಿ. ಮಕ್ಕಳ ಆರೋಗ್ಯದ ಮೇಲೆ ಎಚ್ಚರಿಕೆ ಇರಲಿ. ಹೆಚ್ಚಿನ ಆದಾಯಕ್ಕೆ ನೀವು ಯೋಜನೆಯನ್ನು ರೂಪಿಸುವಿರಿ. ಅಧ್ಯಾತ್ಮದಲ್ಲಿ ನಿಮಗೆ ನಿರಾಸಕ್ತಿಯು ಉಂಟಾಗಬಹುದು. ಈ ವಾರ ಏಕತಾನತೆಯಿಂದ ಹೊರಬರಲು ಪ್ರಯತ್ನಿಸುವಿರಿ.
ಮಿಥುನ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿ ತೃತೀಯದಲ್ಲಿ ಇರುವನು. ಸನ್ಮಿತ್ರರ ಸಹವಾಸ ಸಿಗಲಿದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಸ್ನೇಹ ಸಾರ್ಥಕವಾಗಲಿದೆ. ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಈ ವಾರದಲ್ಲಿ ಯಾರೋ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತಾತ್ಕಾಲಿಕವಾಗಿ ಸಾಲವನ್ನು ಮಾಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಕೆಲಸದ ಒತ್ತಡದಿಂದ ನಿಮಗೆ ಆಯಾಸವಾಗಬಹುದು. ತಲೆನೋವು ನಿಮ್ಮ ಇಡೀ ವಾರದಲ್ಲಿ ಉತ್ಸಾಹವನ್ನು ಕಡಿಮೆ ಮಾಡುವುದು.
ಕರ್ಕಾಟಕ ರಾಶಿ: ರಾಶಿಯ ಅಧಿಪತಿ ಚಂದ್ರನಿಂದ ಸ್ಪರ್ಧೆಯಲ್ಲಿ ಗೆಲುವಿಗಾಗಿ ಮಾಡಿದ ನಿಮ್ಮ ಶ್ರಮ ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ನಿಮಗೆ ಬೆಂಬಲವು ಪೂರ್ಣವಾಗಿ ಸಿಗದೇ ಇರಬಹುದು. ಈ ವಾರದಲ್ಲಿ ಧಾರ್ಮಿಕ ವಿಷಯದಿಂದ ನಿಮಗೆ ಆಸಕ್ತಿಯು ಕಡಿಮೆ ಇರುವುದು. ಆದಷ್ಟು ನಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೀಗುವುದು ಬೇಡ. ಜನಸಾಮಾನ್ಯರ ಜೊತೆ ಬೆರೆಯುವುದು ನಿಮಗೆ ಆಗದು. ಈ ವಾರದಲ್ಲಿ ಹೆಚ್ಚು ಸಂದರ್ಭದಲ್ಲಿ ಮಾತನಾಡುವಾಗ ಬಹಳ ಆಯ್ಕೆ ಮಾಡುವಿರಿ. ಇನ್ನೊಬ್ಬರ ಸಂಕಷ್ಟಕ್ಕೆ ನಿಮ್ಮ ಸ್ಪಂದನೆ ಇರದು.
ಸಿಂಹ ರಾಶಿ: ಆಗಸ್ಟ್ ತಿಂಗಳ ಈ ವಾರದಲ್ಲಿ ನಿಮಗೆ ಒತ್ತಡ. ರಾಶಿಯ ಅಧಿಪತಿ ರಾಶಿಯಲ್ಲಿ ಇದ್ದರೂ ಪ್ರಯೋಜನ ನಿಮಗೆ ಆಗಬೇಕಾದರೂ ಕೆಲವನ್ನು ತ್ಯಾಗಮಾಡಲು ತಯಾರಿರಬೇಕು. ಎಲ್ಲ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ಶರೀರಪೀಡಿಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಯಾರನ್ನೋ ದ್ವೇಷ ಮಾಡುವುದು ಸರಿ ಕಾಣದು. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕಾಗುತ್ತದೆ. ಆತ್ಮವಂಚನೆಯಿಂದ ಬೇಸರವಾಗಲಿದೆ. ಎಂದೋ ಕಾಣೆಯಾದ ವಸ್ತುವನ್ನು ಇಂದು ನೀವು ಹುಡುಕುವಿರಿ. ತಂದೆಯ ಪ್ರೀತಿಯಿಂದ ನಿಮಗೆ ಸಂತೋಷ.
ಕನ್ಯಾ ರಾಶಿ: ರಾಶಿಯ ಅಧಿಪತಿ ಕರ್ಮಾಧಿಪತಿ ಬುಧ ದ್ವಾದಶಲ್ಲಿ. ಮಿತ್ರ ರಾಶಿಯಾದರೂ ಸ್ಥಾನ ಕೆಟ್ಟದ್ದಾದ ಕಾರಣ ಮಿತ್ರರಿಂದಲೇ ಆಪತ್ತು. ಹಿತಶತ್ರುಗಳಿಂದ ಬಿಕ್ಕಟ್ಟು ಹೆಚ್ಚಾಗಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ಯಾವುದನ್ನು ಮುಗಿಸಬೇಕು ಎನ್ನುವ ಗೊಂದಲವೂ ಇರುವುದು. ಮಾನಸಿಕ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಈ ವಾರದಿಂದ ಕೆಲವು ಬದಲಾವಣೆ ಆಗಲಿದೆ. ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಹಿರಿಯರ ಮಾತುಗಳೂ ನಿಮಗೆ ಸಿಟ್ಟು ತರಿಸಬಹುದು. ಯಾವ ಕಾರ್ಯಕ್ಕೂ ಉತ್ಸಾಹವೇ ಇಲ್ಲವಾಗುವುದು. ಮಹಾವಿಷ್ಣುವಿನ ಆರಾಧನೆಯು ಅವಶ್ಯವಾಗಿ ಮಾಡಿ.
ತುಲಾ ರಾಶಿ: ಶುಕ್ರನು ಈ ರಾಶಿಯ ಅಧಿಪತಿಯಾಗಿದ್ದು ದಶಮ ಸ್ಥಾನದಲ್ಲಿ ಇರುವನು. ಈ ವಾರ ಉದ್ಯೋಗದ ಸ್ಥಳದಿಂದ ಆರೋಗ್ಯ ಕೆಡಲಿದೆ. ಸುಲಭ ಮಾರ್ಗದಲ್ಲಿ ಆದಾಯವನ್ನು ಪಡೆಯುವ ಯೋಜನೆಯು ಯಶಸ್ವಿಯಾಗದು. ಸರ್ಕಾರಿ ಕೆಲಸಗಳು ಒತ್ತಡದಿಂದಾಗಿ ಮುಂದುವರಿಯುವುದು. ನೀವು ಮೌನದಿಂದ ಇದ್ದಷ್ಟು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವಿರಿ. ಕುಲದೇವರ ದರ್ಶನಕ್ಕೆ ಈ ವಾರ ನೀವು ಬಿಡುವುಮಾಡಿಕೊಂಡು ಹೋಗುವಿರಿ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದೀತು. ಪರಿಚಿತರಿಂದ ಈ ವಾರ ನಿಮ್ಮ ಸಾಧನೆಗೆ ಗೌರವವು ಸಿಗಲಿದೆ. ಆಲಸ್ಯದಿಂದ ನೀವು ಹೊರಬೇಕಡದೀತು. ವಾಹನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಒಂದು ತೀರ್ಮಾನಕ್ಕೆ ಹತ್ತು ಬಾರಿ ಯೋಚಿಸುತ್ತೀರಿ.
ವೃಶ್ಚಿಕ ರಾಶಿ: ಈ ವಾರದಲ್ಲಿ ರಾಶಿಯ ಅಧಿಪತಿಯ ಸ್ಥಾನ ಏಕಾದಶವಾಗಿದ್ದು ನಿಮ್ಮ ಸಾಮರ್ಥ್ಯಕ್ಕೆ ನಿಮಗೆ ಕೊಟ್ಟ ಜವಾಬ್ದಾರಿಯು ಚಿಕ್ಕದು ಎನಿಸಬಹುದು. ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸುವಿರಿ. ನೀವು ಮಾಡುವ ಕಾರ್ಯದಲ್ಲಿ ಗೊಂದಲವಿದ್ದರೆ ಯಾರನ್ನಾದರೂ ಕೇಳಿ. ಮುಂದೂಡುತ್ತ ಕುಳಿತರೆ ಇನ್ನಷ್ಟು ಗೊಂದಲಗಳು ಹೆಚ್ಚಾಗಲಿದೆ. ಈ ವಾರ ಸಂಗಾತಿಯ ವಿಷಯಕ್ಕೆ ನಿಮಗೆ ಬೇಸರವಾಗುವುದು. ನಿಮಗೆ ಬೇಕಾಗಿರುವ ಸಂಪತ್ತನ್ನು ಸ್ನೇಹಿತರಿಂದ ಸಾಲವಾಗಿ ಪಡೆಯುವಿರಿ. ದುರಭ್ಯಾಸಗಳು ಸಹವಾಸದಿಂದ ಬರಬಹುದು. ಮನೆಯಲ್ಲಿ ಅತಿಥಿಗಳ ಕಾರಣಕ್ಕೆ ಹಣವನ್ನು ಖರ್ಚು ಮಾಡುವಿರಿ.
ಧನು ರಾಶಿ: ಆಗಸ್ಟ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿ ಗುರುವು ಒತ್ತಡದಿಂದ ನಿಮ್ಮನ್ನು ರಕಗಷಿಸುವನು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಉದ್ಯೋಗವಿಲ್ಲವೆಂದು ಸಂಕಟಪಡುತ್ತಿದ್ದರೆ ಅನಿರೀಕ್ಷಿತ ಪರಿಚಯದಿಂದ ಅವಕಾಶವು ಸಿಗಲಿದೆ. ಮತ್ತೇನನ್ನೂ ವಿಚಾರಿಸದೇ ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮನಕಾರಾತ್ಮಕ ಆಲೋಚನೆಗಳಿಂದ ಕುಟುಂಬವನ್ನೂ ಕೆಡಸುವುದು ಬೇಡ. ಆರ್ಥಿಕ ವಿಚಾರವನ್ನು ಹೇಳಬೇಕಾದವರಲ್ಲಿ ಹೇಳಿ. ಅಪರಿಚಿತರೂ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯೋಗ್ಯ ಸಲಹೆಯನ್ನು ಕೊಡುವರು. ಬಹಳ ದಿನಗಳ ಅನಂತರ ಈ ವಾರ ಪ್ರೀತಿಪಾತ್ರರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡಬಹುದು.
ಮಕರ ರಾಶಿ: ಈ ವಾರ ರಾಶಿಯ ಅಧಿಪತಿ ತೃತೀಯದಲ್ಲಿದ್ದು ನಿಮಗೆ ಮಿತ್ರರ ಸಹಾಯದಿಂದ ಉಪಯೋಗವಾಗುವ ಲಾಭವು ಆಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಲಿದೆ. ವಾರದಲ್ಲಿ ಪರಿಚಿತರ ಜೊತೆ ಜೀವನದ ಸಂಗತಿಯ ಬಗ್ಗೆ ಆಪ್ತ ಸಮಾಲೋಚನೆ ಮಾಡುವಿರಿ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದೇ ನಿಮ್ಮ ಮೇಲೆ ಸಿಟ್ಟುಗೊಂಡಾರು. ನಿಮ್ಮ ಇಂದಿನ ಸಂಪಾದನೆಯು ಮನೆಯ ಬಳಕಗೇ ಆಗವುದು. ಕುಲದೇವರ ದರ್ಶನವನ್ನು ನೀವು ಮಾಡಲಿದ್ದು ನೆಮ್ಮದಿ ಇರುವುದು. ನಿಮ್ಮ ಗುಣಗಳನ್ನು ದುರುಪಯೋಗ ಮಾಡುವರು. ಮಕ್ಕಳು ನಿಮ್ಮ ಮಾತನ್ನು ಕೇಳಲಾರರು.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಗೆ ಈ ವಾರ ವೃತ್ತಿಯನ್ನು ಹೊರತುಪಡಿಸಿಯೂ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಶನಿ ದಶೆ ನಿಮಗೆ ಶುಭವಾಗಿದೆ. ಒಳ ಜಗಳವು ಹೊರಬರುವುದು. ನಿಮ್ಮನ್ನು ನಂಬಿಕೊಂಡವರಿಗೆ ಕಷ್ಟವಾದೀತು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ. ಸಿಟ್ಟನ್ನು ಮಾಡಬಾರದು ಎಂದುಕೊಂಡರೂ ಸಂದರ್ಭವು ನಿಮ್ಮ ನಿರ್ಧಾರವನ್ನು ಬದಲಿಸುವುದು. ಈ ವಾರ ವ್ಯವಹಾರವನ್ನು ಲಾಭಕ್ಕಾಗಿಯೇ ಮಾಡಿದರೆ ನೀವು ಸೋಲುವಿರಿ. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು.
ಮೀನ ರಾಶಿ: ರಾಶಿಯ ಅಧಿಪತಿ ಚತುರ್ಥದಲ್ಲಿದ್ದು ಮಹತ್ವದ ಕಾರಣಕ್ಕೆ ಆಗಾಗ ಸಣ್ಣ ಮಾತಿನ ಘರ್ಷಣೆಯಾಗಲಿದೆ. ನಿಮ್ಮ ಕಾರ್ಯವು ಆಗಬೇಕಾದರೆ ಈ ವಾರ ತಿರುಗಾಟವನ್ನೇ ಮಾಡುವುದು ಅನಿವಾರ್ಯ. ನೀವು ಉತ್ಸಾಹದಿಂದ ಇರುವಿರಿ. ನಿಮಗಾಗದವರನ್ನು ಎದುರುಬದರಾಗುವ ಸಂದರ್ಭವು ಬರುವುದು. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ. ನೀವು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಕೊನೆಗೆ ನಿಮ್ಮನ್ನೇ ಸುತ್ತಿಕೊಳ್ಳುವುದು. ನಿಮ್ಮ ಮಾತೇ ನಿಮಗೆ ತೊಂದರೆಯನ್ನು ತರುವುದು. ಸಂಗಾತಿಯು ಇತರರನ್ನು ಹೋಲಿಸಿಕೊಂಡು ಮಾತನಾಡುವರು. ಒಂದೊಂದು ರುಪಾಯಿಯನ್ನೂ ಬಹಳ ಜೊಪಾನ ಮಾಡುವಿರಿ. ನಿಮ್ಮ ಉತ್ಸಾಹವನ್ನು ಭಂಗ ಮಾಡುವ ಮಾತುಗಳು ನಿಮ್ಮ ನಡುವೇ ಬರಬಹುದು. ಗುರು ದಶೆ ಇದ್ದವರಿಗೆ ಸದ್ಯ ಉತ್ತಮ.
-ಲೋಹಿತ ಹೆಬ್ಬಾರ್ – 8762924271 (what’s app only)




