- Kannada News Photo gallery Cricket photos How RCB’s Dominant Win Has Put 6 IPL Teams In Deep Trouble
RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಲ್ಲದೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ ಆರ್‌ಸಿಬಿ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ.
Updated on: May 14, 2026 | 9:56 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ದಾಖಲಿಸಿದ 6 ವಿಕೆಟ್‌ಗಳ ಭರ್ಜರಿ ಗೆಲುವು, ಇಡೀ ಟೂರ್ನಿಯ ಸಮೀಕರಣವನ್ನೇ ಬದಲಾಯಿಸಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ (105*) ನೆರವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಆರ್‌ಸಿಬಿಯ ಈ ವಿಜಯೋತ್ಸವವು ಟೂರ್ನಿಯ ಇತರ 5 ಪ್ರಮುಖ ತಂಡಗಳನ್ನು ಭಾರೀ ಸಂಕಷ್ಟಕ್ಕೆ ತಳ್ಳಿದೆ. (PC: BCCI)

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಆರ್‌ಸಿಬಿ ವಿರುದ್ಧದ ಸೋಲಿನಿಂದ ಕೆಕೆಆರ್ ತಂಡಕ್ಕೆ ಅತ್ಯಂತ ದೊಡ್ಡ ಆಘಾತ ಎದುರಾಗಿದೆ. 11 ಪಂದ್ಯಗಳನ್ನು ಆಡಿರುವ ಕೆಕೆಆರ್ ಕೇವಲ 4 ಗೆಲುವಿನೊಂದಿಗೆ 9 ಪಾಯಿಂಟ್ಸ್ ಪಡೆದು 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಕೆಕೆಆರ್ ತಂಡದ ನೆಟ್ ರನ್ ರೇಟ್ ಪ್ರಸ್ತುತ -0.198 ರಷ್ಟಿದ್ದು, ಇದು ಅತ್ಯಂತ ಕಳಪೆಯಾಗಿದೆ. ಹೀಗಾಗಿ ಕೆಕೆಆರ್ ಮುಂದಿನ ಪಂದ್ಯಗಳನ್ನು ಗೆದ್ದರೂ ಅಧಿಕೃತವಾಗಿ ಪ್ಲೇಆಫ್ ತಲುಪಬೇಕಾದರೆ ಸಿಎಸ್‌ಕೆ, ರಾಜಸ್ಥಾನ್ ರಾಜಸ್ಥಾನ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕಿದೆ. (PC: BCCI)

ಡೆಲ್ಲಿ ಕ್ಯಾಪಿಟಲ್ಸ್ (DC): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ 16 ಅಂಕಗಳನ್ನು ಪಡೆದಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಮತ್ತಷ್ಟು ಕಠಿಣವಾಗಿದೆ. ಈವರೆಗೆ ಕೇವಲ 10 ಅಂಕಗಳನ್ನು ಮಾತ್ರ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೂ, ಎಸ್ಆರ್ಹೆಚ್, ಪಂಜಾಬ್ ಕಿಂಗ್ಸ್, ಸಿಎಸ್‌ಕೆ ಹಾಗೂ ಆರ್ಆರ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋಲುವುದು ಡಿಸಿ ಪಾಲಿಗೆ ಅನಿವಾರ್ಯವಾಗಿದೆ. (PC: BCCI)

ಮೊದಲ ಕ್ವಾಲಿಫೈಯರ್: ಐಪಿಎಲ್ ನಿಯಮಾವಳಿಗಳ ಪ್ರಕಾರ ಅಂಕಪಟ್ಟಿಯ ಮೊದಲ ಎರಡು ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು 'ಕ್ವಾಲಿಫೈಯರ್ 1' ರೂಪದಲ್ಲಿ ಎರಡು ಅವಕಾಶಗಳು ಸಿಗುತ್ತವೆ. ಪ್ರಸ್ತುತ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಲಾ 16 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. (PC: BCCI)

ಮಧ್ಯಮ ಕ್ರಮಾಂಕದ ತಂಡಗಳ ಆತಂಕ: ಪ್ರಸ್ತುತ 3, 4, 5 ಮತ್ತು 6ನೇ ಸ್ಥಾನಗಳಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (14 ಅಂಕ), ಪಂಜಾಬ್ ಕಿಂಗ್ಸ್ (13 ಅಂಕ), ಚೆನ್ನೈ ಸೂಪರ್ ಕಿಂಗ್ಸ್ (12 ಅಂಕ) ಮತ್ತು ರಾಜಸ್ಥಾನ್ ರಾಯಲ್ಸ್ (12 ಅಂಕ) ತಂಡಗಳಿಗೆ ಈಗ ಟಾಪ್-2 ತಲುಪುವ ಹಾದಿ ದುರ್ಗಮವಾಗಿದೆ. ಏಕೆಂದರೆ ಇನ್ನುಳಿದ ಪಂದ್ಯಗಳಲ್ಲಿ ಈ ತಂಡಗಳು ಕೇವಲ ಗೆಲ್ಲುವುದಷ್ಟೇ ಅಲ್ಲದೆ, ದೊಡ್ಡ ಅಂತರದಿಂದ ಜಯಭೇರಿ ಬಾರಿಸಬೇಕಿದೆ. ಏಕೆಂದರೆ ಆರ್‌ಸಿಬಿ ಮತ್ತು ಜಿಟಿ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮೊದಲ ಕ್ವಾಲಿಫೈಯರ್ ಆಡುವುದು ಖಚಿತ. ಹೀಗಾಗಿ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಸೋಲುವುದನ್ನು ಪಂಜಾಬ್ ಕಿಂಗ್ಸ್, ಸಿಎಸ್‌ಕೆ, ಎಸ್ಆರ್ಹೆಚ್ ಮತ್ತು ಆರ್ಆರ್ ತಂಡಗಳು ಎದುರು ನೋಡಬೇಕು. (PC: BCCI)




