ಪ್ಲೇಆಫ್ಗೇರಿಲ್ಲ… ಹೀಗಾದ್ರೆ RCB ಟೂರ್ನಿಯಿಂದಲೇ ಔಟ್..!
RCB Playoff Scenarios: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ಗೇರಲಿದೆಯಾ? 16 ಅಂಕಗಳನ್ನು ಪಡೆದರೂ ಸಹ ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಪ್ರಸ್ತುತ ಅಂಕ ಪಟ್ಟಿ. ಏಕೆಂದರೆ ಆರ್‌ಸಿಬಿ ತಂಡ ಮುಂಬರುವ ಪಂದ್ಯಗಳಲ್ಲಿ ತಂಡ ಸಣ್ಣ ತಪ್ಪು ಮಾಡಿದರೂ ಸಹ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಆರ್‌ಸಿಬಿ ಎಲಿಮಿನೇಟ್ ಆಗಲು ಇರುವ ಪ್ರಮುಖ ಕಾರಣಗಳು ಮತ್ತು ಸಮೀಕರಣಗಳು ಇಲ್ಲಿವೆ.
Updated on:May 14, 2026 | 2:28 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಈ ಅಗ್ರಸ್ಥಾನದ ಹೊರತಾಗಿಯೂ ಆರ್‌ಸಿಬಿ ತಂಡದ ಪ್ಲೇಆಫ್ ಪ್ರವೇಶ ಇನ್ನೂ ಸಹ ಖಾತರಿಯಾಗಿಲ್ಲ!

ಏಕೆಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿರುವ 7 ತಂಡಗಳಿಗೆ 16+ ಅಂಕಗಳನ್ನು ಗಳಿಸಲು ಅವಕಾಶವಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಎಡವಿದರೆ ಟೂರ್ನಿಯಿಂದಲೇ ಹೊರಬೀಳಬಹುದು. ಹೀಗೆ ಆಘಾತಕಾರಿಯಾಗಿ ಹೊರಬೀಳಲು ಕಾರಣವಾಗುವ ಸಮೀಕರಣಗಳು ಈ ಕೆಳಗಿನಂತಿವೆ...

ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಶುಭ್ಮನ್ ಗಿಲ್ ಪಡೆಯು ಮುಂದಿನ ಎರಡು ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಒಟ್ಟು 20 ಅಂಕಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಂದಿನ ಮ್ಯಾಚ್ಗಳು ಸಿಎಸ್ಕೆ ಮತ್ತು ಕೆಕೆಆರ್ ವಿರುದ್ಧ. ಈ ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಬಹುದು.

ಸನ್ರೈಸರ್ಸ್ ಹೈದರಾಬಾದ್: ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಒಟ್ಟು 14 ಅಂಕಗಳನ್ನು ಹೊಂದಿದೆ. ಮುಂದಿನ ಎರಡು ಮ್ಯಾಚ್ಗಳಲ್ಲಿ ಎಸ್ಆರ್ಹೆಚ್ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಇಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಎದುರಾಳಿಗಳು ಸಿಎಸ್ಕೆ ಮತ್ತು ಆರ್‌ಸಿಬಿ. ಎಸ್ಆರ್ಹೆಚ್ ವಿರುದ್ಧ ಆರ್‌ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಇದರಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ನೆಟ್ ರನ್ ಹಾಗೂ 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.

ಪಂಜಾಬ್ ಕಿಂಗ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್. ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ವಿರುದ್ಧ ಗೆದ್ದರೆ ಶ್ರೇಯಸ್ ಅಯ್ಯರ್ ಪಡೆ ಗೆದ್ದರೆ ಒಟ್ಟು 17 ಅಂಕಗಳನ್ನು ಪಡೆಯಲಿದೆ. ಇದರಿಂದಾಗಿ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನು ಕೊನೆಯ ಮ್ಯಾಚ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಟ್ಟು 19 ಅಂಕಗಳನ್ನು ಪಡೆಯಲು ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ಮುಂದಾಳತ್ವದ ರಾಜಸ್ಥಾನ್ ರಾಯಲ್ಸ್ ಒಟ್ಟು 12 ಅಂಕಗಳನ್ನು ಹೊಂದಿದೆ. ಅಲ್ಲದೆ ಇನ್ನೂ ಮೂರು ಮ್ಯಾಚ್ಗಳಿವೆ. ಈ ಮೂರು ಪಂದ್ಯಗಳಲ್ಲಿ ಆರ್ಆರ್ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಬಹುದು.

ಅಂದರೆ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಲಿದೆ. ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಮುಂದಿನ ಮೂರು ಮ್ಯಾಚ್ಗಳಲ್ಲೂ ಜಯ ಸಾಧಿಸಿದರೆ 19 ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಮುಂದಿನ ಮೂರು ಪಂದ್ಯಗಳ ಮೂಲಕ ಒಟ್ಟು 18 ಅಂಕಗಳನ್ನು ಪಡೆಯಲು ಅವಕಾಶವಿದೆ.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಎರಡು ಪಂದ್ಯಗಳನ್ನಾಡಲಿರುವುದು ಪ್ಲೇಆಫ್ ರೇಸ್ನಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಎಂಬುದು ಉಲ್ಲೇಖಾರ್ಹ. ಈ ಎರಡು ಮ್ಯಾಚ್ಗಳಲ್ಲಿ ಆರ್‌ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅದೇ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂದಿನ 2 ಗೆಲುವುಗಳೊಂದಿಗೆ 18 ಅಂಕಗಳನ್ನು ಪಡೆಯಲು ಅವಕಾಶವಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ 17 ಅಂಕಗಳನ್ನು ಪಡೆಯಬಹುದು. ಹಾಗೆಯೇ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಗೆದ್ದರೆ 18 ಅಂಕಗಳನ್ನು ಪಡೆಯಲಿದೆ.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಂದಿನ ಎರಡು ಮ್ಯಾಚ್ಗಳು ನಿರ್ಣಾಯಕ. ಏಕೆಂದರೆ ಆರ್‌ಸಿಬಿ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಆಡಲಿರುವುದು ಪ್ಲೇಆಫ್ ರೇಸ್ನಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ. ಈ ಎರಡು ತಂಡಗಳು ಜಯ ಸಾಧಿಸಿದರೆ ಆರ್‌ಸಿಬಿ ತಂಡದ ಪಾಯಿಂಟ್ಸ್ 16 ರಲ್ಲೇ ಉಳಿಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಂದಿನ ಎಲ್ಲಾ ಮ್ಯಾಚ್ಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಮುಂಬರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಆರ್‌ಸಿಬಿ ತಂಡ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ.
Published On - 2:21 pm, Thu, 14 May 26




