ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಶನಿವಾರ ಹೊಸಬರ ಸಾಂಗತ್ಯ, ಅಚಾತುರ್ಯ, ಪರರಿಂದ ದುಃಖ, ಅಸ್ಥೈರ್ಯ, ನಾಯಕರ ಗತ್ತು, ಅನ್ಯರ ಹೊಣೆ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಸಿದ್ದಿ, ಕರಣ: ಚತುಷ್ಪಾತ್, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 49 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:28 – 11:02, ಗುಳಿಕ ಕಾಲ 06:21- 07:55 ಯಮಗಂಡ ಕಾಲ 14:09 – 15:42
ಮೇಷ ರಾಶಿ: ಹೊಸಬರಿಗೆ ನಿಮ್ಮ ಸಾಂಗತ್ಯ ಆಪ್ತವೆನಿಸುವುದು. ನಿಮ್ಮಲ್ಲಿರುವ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು. ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಬೇಕಾದುದನ್ನು ಪಡೆಯಲು ದಾಕ್ಷಿಣ್ಯವು ನಿಮಗೆ ಅಡ್ಡ ಬರಬಹುದು. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಒಳ್ಳೆಯ ವಿಚಾರಕ್ಕೆ ನೀವು ಹೆಚ್ಚಿನ ಒತ್ತುಕೊಡಲಿದ್ದೀರಿ. ಒಲ್ಲದ ಮನಸ್ಸಿನಿಂದ ದೇವಕಾರ್ಯವನ್ನು ಮಾಡುವುದು ಬೇಡ. ಮತ್ತೆ ಯಾರಿಗಾದರೂ ಒಮ್ಮನಸ್ಸಿನಿಂದ ನೀಡಿ. ಒಳ್ಳೆಯದೇ ಆದರೂ ಮಿತಿಯಲ್ಲಿ ಇದ್ದರೆ ಒಳ್ಳೆಯದು. ಸರಳವಾಗಿರಲು ನೀವು ಇಚ್ಛಿಸುವಿರಿ. ಯಾರಿಗಾದೂ ಸಾಲವನ್ನು ಕೊಡಲು ಮುಂದಾಗುವಿರಿ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಜಯದಿಂದ ಬೀಗುವುದು ಬೇಡ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಕೆಯಾಗಲಿದೆ.
ವೃಷಭ ರಾಶಿ: ಅಚಾತುರ್ಯದಿಂದ ಆದುದನ್ನು ನಿಮ್ಮದೆನ್ನುವಂತೆ ಹೊಗಳುವಿರಿ. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ನಿಮಗೆ ಸುರಕ್ಷಿತ ಸ್ಥಳದಲ್ಲಿ ಇದ್ದು ಬೇಸರವಾಗಬಹುದು. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ಹಣ ಸಂಗ್ರಹಕ್ಕೆ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಎಲ್ಲರ ಜೊತೆ ಬೆರೆಯುವ ಅಭ್ಯಾಸ ಉತ್ತಮ. ಯಾರದೋ ಮಾತನ್ನು ನಂಬಿ ಬಂಧುಗಳನ್ನು ದೂರ ಮಾಡಿಕೊಳ್ಳಬೇಕಾಗುವುದು. ಯಾರನ್ನಾದರೂ ಕುಟುಕುತ್ತ ಇರುವುದು ನಿಮಗೆ ದುರಭ್ಯಾಸವಾಗುವುದು. ತೊಂದರೆಯ ಪರಿಹಾರಕ್ಕೆ ದೈವದ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು.
ಮಿಥುನ ರಾಶಿ: ಪರರ ಸಂತೋಷಕ್ಕಾಗಿ ಬದುಕುವ ನಿಮಗೆ ದುಃಖವೇ ಪುನಃ ಪುನಃ ಬಂದಂತೆ ತೋಚುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಿದ್ಧ ವಸ್ತುಗಳ ವ್ಯಾಪರದಿಂದ ಲಾಭ. ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ನಿಮ್ಮ ಗಟ್ಟಿ ನಿಲುವನ್ನು ಯಾರೂ ಪ್ರಶ್ನಿಸಲಾರರು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಧಿಕ ಮಾತು ನಿಮ್ಮವರಿಗೆ ಇಷ್ಟವಾಗದು. ನಿಮಗೆ ಸಿಗಬೇಕಾದ ಸಂಪತ್ತು ಸರಿಯಾದ ಸಮಯಕ್ಕೆ ಸಿಗದೇ ಸ್ನೇಹಿತರ ಬಳಿ ಸಾಲಮಾಡಬೇಕಾದೀತು. ನೋವಿಗೆ ಪ್ರತಿಯಾಗಿ ನೋವನ್ನು ಕೊಡುವ ನಿರ್ಧಾರ ಮಾಡುವಿರಿ. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕತೆ ಬಹಳ ಕೆಳಮಟ್ಟಕ್ಕೆ ಹೋಗಬಹುದು.
ಕರ್ಕಾಟಕ ರಾಶಿ: ಧೈರ್ಯವಿಂದು ಕುಂಠಿತವಾಗಬಹುದು. ಸಾಹಸಕ್ಕೆ ಹೋಗುವುದು ಬೇಡ. ಒಂಟಿಯಾದ ಚಾಲನೆಯೂ ನಿಮಗೆ ಅಪಾಯಕಾರಿ. ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪಲಾರಿರಿ. ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಬಂಧನದ ಭೀತಿಯಿಂದ ಮನಸ್ಸು ಖಿನ್ನವಾಗಲಿದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅಧಿಕ ಲಾಭವನ್ನು ಪಡೆಯಬಹುದು. ಬಂಧುಗಳು ನಿಮ್ಮ ಸಂಪತ್ತನ್ನು ಬಯಸುವರು. ಕೃಷಿಯನ್ನು ಆಪತ್ಕಾಲದ ಆದಾಯ ಮೂಲವನ್ನಾಗಿ ಮಾಡುವ ಆಸೆ ಬರುವುದು. ಮಕ್ಕಳ ಜೊತೆಗೆ ಇಂದು ಕಳೆದು ಸಂತೋಷವನ್ನು ಪಡೆಯುವಿರಿ. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸುವರು. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಸಮಾಲೋಚನೆಗಳು ಬಯಲಾಗಬಹುದು. ಹಳೆಯ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು.
ಸಿಂಹ ರಾಶಿ: ನಿಮ್ಮ ಹಾವ ಭಾವಗಳು ನಿಮ್ಮನ್ನು ನಾಯಕರಂತೆ ತೋರಿಸುವುದು. ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು. ಗೊತ್ತಿರುವ ವಿಚಾರ ಸತ್ಯವೋ ಸುಳ್ಳೋ ಪ್ರಸ್ತುತಿಯನ್ನಂತೂ ಸರಿಯಾಗಿ ಮಾಡುವಿರಿ. ಕೆಲವರ ಒಡನಾಟದಿಂದ ನಕಾರಾತ್ಮಕತೆ ಉಂಟಾಗುವುದು. ಹೊಸ ಯೋಜನೆಯೊಂದು ನಿಮಗೆ ಸಿಗಲಿದ್ದು ಬಹಳ ಉತ್ಸಾಹವಿರಲಿದೆ. ಬೇರೆಯವರ ನೇರವಾದ ನುಡಿಗಳು ನಿಮಗೆ ನಾಟಬಹುದು. ಮನಸ್ಸು ಬಹಳ ತಳಮಳಗೊಳ್ಳಬಹುದು. ಮನೆಯವರಿಗೆ ನಿಮ್ಮ ಬದಲಾವಣೆ ಅನಿರೀಕ್ಷಿತ ಎನಿಸಬಹುದು. ಇತರ ಕೆಲಸದಲ್ಲಿ ಮಗ್ನವಾಗಿ ಮಾಡಬೇಕಾದ ಮುಖ್ಯ ಕೆಲಸವು ನಿಂತುಹೋಗಬಹುದು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು.
ಕನ್ಯಾ ರಾಶಿ: ಮನಸ್ಸು ವಿಕೇಂದ್ರೀಕೃತಗೊಂಡು ಉನ್ಮತ್ತತೆಯನ್ನು ತರಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಜ್ಜನರ ಸೇವೆಯ ಅವಕಾಶ ನಿಮಗೆ ಸಿಗಲಿದೆ. ಕಛೇರಿಯಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು. ಕೆಲವರ ಮಾತು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ನಿಮ್ಮನ್ನು ನಿಯಂತ್ರಿಸಲು ಯಾರಾದರೂ ಮೇಲಧಿಕಾರಿಯ ಕಿವಿ ಚುಚ್ಚಬಹುದು. ನೀವು ಇಂದು ಪ್ರತಿಕೃತಿಯ ನಿರ್ಮಾಣದಲ್ಲಿ ಮಗದನರಾಗುವಿರಿ. ಹಳೆಯ ವಿಚಾರವು ಪುನಃ ಮುಖ್ಯವೇದಿಕೆ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣ ಕಲಹವೂ ಆಗಬಹುದು. ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡಲು ನೀವು ಬಯಸುವಿರಿ. ಅನ್ವೇಷಣೆಗೆ ಹೊಸ ದಿಕ್ಕು ಕಾಣಿಸುವುದು. ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಆದಾಯವನ್ನು ಹೆಚ್ಚಿಸಲು ಬೇರೆ ಮಾರ್ಗವನ್ನು ಅನ್ವೇಷಿಸುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲ ವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದೆ.




