ಡಿಕೆ ಶಿವಕುಮಾರ್ ಯಾವತ್ತೂ ಆರೆಸ್ಸೆಸ್ ಶಾಖೆಗೆ ಹೋದವರಲ್ಲ, ಸಂಘದ ಕೆಲ ಸ್ನೇಹಿತರಿದ್ದಾರೆ: ಡಿಕೆ ಸುರೇಶ್
ಸಚಿವ ಸ್ಥಾನದಿಂದ ಪದಚ್ಯುತಗೊಂಡಿರುವ ಕೆಎನ್ ರಾಜಣ್ಣ ತನ್ನ ವಿರುದ್ಧ ಮೂವರು ನಾಯಕರು ಕುತಂತ್ರ ನಡೆಸಿದ್ದಾರೆ ಎಂದು ದೆಹಲಿಯಲ್ಲಿ ಹೇಳಿರುವುದಕ್ಕೆ ಸುರೇಶ್, ಅವರು ಏನು ಹೇಳಿದ್ದಾರೋ ಗೊತ್ತಿಲ್ಲ, ತಾನು ದೆಹಲಿಗೆ ಹೋಗದೆ ಬಹಳ ದಿನಗಳಾಯಿತು ಎಂದರು. ಕ್ಯಾಬಿನೆಟ್ಗೆ ಮರಳುವುದಾಗಿ ಅಂತ ರಾಜಣ್ಣ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ, ಅವರು ಬಂದರೆ ಸ್ವಾಗತವಿದೆ ಅಂತ ಸುರೇಶ್ ಹೇಳಿದರು.
ಬೆಂಗಳೂರು, ಆಗಸ್ಟ್ 23: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಅರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಹೇಳಿದ್ದು ದೊಡ್ಡಸುದ್ದಿಯಾಗುತ್ತಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಧುರೀಣ ಡಿಕೆ ಸುರೇಶ್, ತಮ್ಮ ದೊಡ್ಡಮ್ಮನ ಮನೆ ಪಕ್ಕದಲ್ಲೇ ಮೈದಾನವಿದೆ, ಅಲ್ಲಿ ಅರೆಸ್ಸೆಸ್ ಶಾಖೆ ನಡೆಸುತ್ತದೆ, ಚಿಕ್ಕಂದಿನಿಂದ ಅದನ್ನು ನೋಡುತ್ತಿದ್ದೇವೆ, ಶಾಖೆಗೆ ಬರುವ ಹಲವಾರು ಹಿರಿಯರು ಶಿವಕುಮಾರ್ ಅವರಿಗೆ ಸ್ನೇಹಿತರು, ಅದರೆ ಅವರು ಯಾವತ್ತೂ ಶಾಖೆಗೆ ಹೋದವರಲ್ಲ ಎಂದು ಹೇಳಿದರು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಂಜೇಗೌಡ ಮತ್ತು ರಾಘವೇಂದ್ರ ಹಿಟ್ನಾಳ್ ಅವರು ಸ್ಪರ್ಧೆಗಿಳಿದರೆ ತಪ್ಪೇನೂ ಇಲ್ಲ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: ರಾಜಕಾರಣದಲ್ಲಿ ನಿವೃತ್ತಿ ಅಂತಿಲ್ಲ, ಹಾಗಾಗೇ ಸಿದ್ದರಾಮಯ್ಯ 2028ರಲ್ಲೂ ತಮ್ಮದೇ ನಾಯಕತ್ವ ಅಂದಿರಬಹುದು: ಡಿಕೆ ಸುರೇಶ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

