ಜರ್ಮನಿ: ಒಬ್ಬೊಬ್ಬರಿಗೆ ಒಂದೊಂದು ಹುಚ್ಚು. ಇಂಥದ್ದೇ ವಿಚಿತ್ರ ಹುಚ್ಚಿನ ವ್ಯಕ್ತಿಯೊಬ್ಬ ಜರ್ಮನಿಯಲ್ಲಿದ್ದಾನೆ. ಈತನ ವಯಸ್ಸು ಕೇವಲ 39. ಆದ್ರೆ ಕಳೆದ 13 ವರ್ಷಗಳಲ್ಲಿ ಬರೋಬ್ಬರಿ 17 ಬಾರಿ ತನ್ನ ದೇಹದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ.
ಹೌದು ಜರ್ಮನಿಯ ಸಾಂಡ್ರ್ಯೂ ಎನ್ನುವ ಈತ 17 ಬಾರಿ ತನ್ನ ದೇಹದಲ್ಲಿ ಮಾರ್ಪಾಡುಗಳನ್ನು ಮಾಡಿಸಿಕೊಂಡಿದ್ದಾನೆ. ತನಗಿಷ್ಟವಾದ ಹಾಗೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಬದಲಾವಣೆಗಳನ್ನು ಮಾಡಿಸಿಕೊಂಡಿದ್ದಾನೆ.
ಅಷ್ಟೇ ಅಲ್ಲ ತನ್ನ ಎರಡೂ ಕಿವಿಗಳನ್ನು ಕತ್ತರಿಸಿ ಒಂದು ಜಾರ್‌ನಲ್ಲಿ ಶೇಖರಿಸಿಟ್ಟುಕೊಂಡಿದ್ದಾನೆ. ಹಾಗೇನೆ ತನ್ನ ಹಣೆಯ ಮೇಲೆ ವಿ ಆಕಾರದಲ್ಲಿ ಗುಮ್ಮಟೆಗಳನ್ನು ಇಂಪ್ಲಾಂಟ್ ಮಾಡಿಸಿಕೊಂಡಿದ್ದಾನೆ.
ಜೊತೆಗೆ ತನ್ನ ಎರಡು ಮುಂಗೈಗಳ ಹಿಂಬದಿಯಲ್ಲಿ ಹಾಗೂ ಮುಖದ ತುಂಬೆಲ್ಲಾ ಟ್ಯಾಟೂಗಳನ್ನ ಹಾಕಿಸಿಕೊಂಡಿದ್ದಾನೆ. ಹೀಗೆ ಮಾಡಿಸಿಕೊಂಡಿದ್ದರಿಂದ ತನಗೆ ಆತ್ಮವಿಶ್ವಾಸ ಮೂಡಿದೆ ಎಂದು ತನ್ನ ಹುಚ್ಚುತನವನ್ನು ಸಮರ್ಥಿಸಿಕೊಂಡಿದ್ದಾನೆ.