ಲಾಹೋರ್​​ನಲ್ಲಿ ಕಲಾವಿದನ ಬಂಧನ; ಕಾರಣ ಕೇಳಿದರೆ ‘ಇದೆಲ್ಲ ಅಪರಾಧವಾ’ ಎಂಬ ಪ್ರಶ್ನೆ ಮೂಡದೆ ಇರದು

| Updated By: Lakshmi Hegde

Updated on: Jun 14, 2021 | 1:23 PM

ಅಬುಝಾರ್​ ಒಬ್ಬ ಕಲಾವಿದ ಮತ್ತು ಶಿಕ್ಷಕ. ಕಲ್ಮಾ ಚೌಕ್​ ಬಳಿ ಆಟೋಕ್ಕೆ ಕಾಯುತ್ತ ನಿಂತಿದ್ದ. ಆಗ ಅಲ್ಲಿಗೆ ವ್ಯಾನ್​​ನಲ್ಲಿ ಬಂದ ಪೊಲೀಸರು ಅವನ ಬಳಿ ಐಡಿ ಕಾರ್ಡ್ ತೋರಿಸಲು ಹೇಳಿದರು. ಅದೃಷ್ಟಕ್ಕೆ ಆತನ ಬಳಿ ಇತ್ತು.

ಲಾಹೋರ್​​ನಲ್ಲಿ ಕಲಾವಿದನ ಬಂಧನ; ಕಾರಣ ಕೇಳಿದರೆ ‘ಇದೆಲ್ಲ ಅಪರಾಧವಾ’ ಎಂಬ ಪ್ರಶ್ನೆ ಮೂಡದೆ ಇರದು
ಬಂಧಿತ ಕಲಾವಿದ
Follow us on

ಲಾಹೋರ್​: ಪಾಕಿಸ್ತಾನದಲ್ಲಿ ಯಾವುದೆಲ್ಲ ಅಪರಾಧವೆನಿಸಿಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ನಾವು-ನೀವು ಊಹಿಸಲು ಸಾಧ್ಯವಿಲ್ಲದ್ದೂ ಇಲ್ಲ ಬಂಧಿಸಲ್ಪಡುವಷ್ಟು ಅಪರಾಧ ಎಂಬುದಕ್ಕೆ ಇಲ್ಲೊಂದು ಘಟನೆ ನಡೆದಿದೆ. ಇತ್ತೀಚೆಗೆ ಪಾಕಿಸ್ತಾನದ ಕಲಾವಿದನೊಬ್ಬನನ್ನು ಲಾಹೋರ್​ ಪೊಲೀಸರು ಬಂಧಿಸಿದ್ದಾರೆ. ಆದರೆ ಕಾರಣ ಮಾತ್ರ ತೀರ ಕ್ಷುಲ್ಲಕ. ಈ ಬಂಧಿತ ಕಲಾವಿದನ ಹೆಸರು ಅಬುಝಾರ್​ ಮಧು ಎಂದಾಗಿದ್ದು, ಒಂದು ದಿನ ಮುಂಜಾನೆ ಹೊತ್ತಲ್ಲಿ ಆಟೋಕ್ಕಾಗಿ ಕಾಯುತ್ತ ನಿಂತಿದ್ದರು. ಅವರನ್ನು ನೋಡಿದ ಪೊಲೀಸರು ಎಳೆದುಕೊಂಡು ಹೋಗಿ ಠಾಣೆಯಲ್ಲಿ ಕೂಡಿದ್ದಾರೆ. ನನ್ನನ್ನು ಯಾಕ್ರೀ ಬಂಧಿಸಿದ್ದೀರಿ ಎಂದು ಕೇಳಿದ್ದಕ್ಕೆ.. ನೀನು ತಲೆಕೂದಲನ್ನು ಉದ್ದ ಬಿಟ್ಟಿದ್ದಕ್ಕೆ ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ನತಾಶಾ ಜಾವೇದ್​ ಎಂಬುವರು ಸರಣಿ ಟ್ವೀಟ್ ಮಾಡಿದ್ದಾರೆ. ಜಾವೇದ್​ ಲಾಹೋರ್​​ನಲ್ಲಿ ಮಕ್ಕಳ ಹಕ್ಕುಗಳ ವಕೀಲರಾಗಿದ್ದಾರೆ. ಅಬುಝಾರ್​ ಮಧು ನನ್ನ ಸ್ನೇಹಿತ ಎಂದು ಹೇಳಿಕೊಂಡಿರುವ ನತಾಶಾ, ಅಬುಝಾರ್​ ಕೂದಲು ಉದ್ದ ಬಿಟ್ಟಿದ್ದಕ್ಕೆ ಆತನನ್ನು ಪೊಲೀಸು ಬಂಧಿಸಿದ್ದು ನಿಜಕ್ಕೂ ಶಾಕಿಂಗ್​ ಎಂದಿದ್ದಾರೆ. ಕೂದಲು ಉದ್ದವಾಗಿದೆ ಎಂಬ ಕಾರಣಕ್ಕೆ ಜೈಲಿಗೆ ಹಾಕಲಾಗಿತ್ತು. ರಾತ್ರಿಯೆಲ್ಲ ಅಲ್ಲೇ ಇದ್ದ ಎಂದು ಬರೆದುಕೊಂಡಿದ್ದಾರೆ.

ಅಬುಝಾರ್​ ಒಬ್ಬ ಕಲಾವಿದ ಮತ್ತು ಶಿಕ್ಷಕ. ಕಲ್ಮಾ ಚೌಕ್​ ಬಳಿ ಆಟೋಕ್ಕೆ ಕಾಯುತ್ತ ನಿಂತಿದ್ದ. ಆಗ ಅಲ್ಲಿಗೆ ವ್ಯಾನ್​​ನಲ್ಲಿ ಬಂದ ಪೊಲೀಸರು ಅವನ ಬಳಿ ಐಡಿ ಕಾರ್ಡ್ ತೋರಿಸಲು ಹೇಳಿದರು. ಅದೃಷ್ಟಕ್ಕೆ ಆತನ ಬಳಿ ಇತ್ತು, ತೋರಿಸಿದ. ಆದರೂ ಪೊಲೀಸರು ಅಬುಝಾರ್​​ನನ್ನು ಬಂಧಿಸಿ, ಕರೆದುಕೊಂಡು ಹೋದರು. ಉದ್ದ ಕೂದಲಿನ ಕಾರಣ ಕೊಟ್ಟರು ಎಂದು ನತಾಶಾ ಬರೆದುಕೊಂಡಿದ್ದಾರೆ.

ತಾವು ಅಬುಝಾರ್​​ನನ್ನು ನೋಡಿ ಆತನ ಉದ್ದ ಕೂದಲು ಬನ್​ನಲ್ಲಿ ಕಟ್ಟಲ್ಪಟ್ಟಿತ್ತು. ಒಂದು ತೋಳಿಗೆ ಬಳೆಯನ್ನು ತೊಟ್ಟಿದ್ದ. ಮುಂಜಾನೆ 3 ಗಂಟೆ ಹೊತ್ತಿಗೆ ರಸ್ತೆಯಲ್ಲಿ ಇದ್ದ. ಹಾಗಾಗಿ ಪ್ರಶ್ನೆಗಳು ಮೂಡಿದ ಕಾರಣ ಬಂಧಿಸಬೇಕಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇನ್ನು ಅಬುಝಾರ್​​ನನ್ನು ಕರೆದುಕೊಂಡು ಹೋಗಿ ಆತನ ಬ್ಯಾಗ್​ ಮತ್ತು ಅದರಲ್ಲಿದ್ದ ವಸ್ತುಗಳನ್ನೂ ಪರಿಶೀಲಿಸಲಾಗಿದೆ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ; ಕುಟುಂಬದಲ್ಲಿ ಒಬ್ಬರಿಗೆ ಮಾತ್ರ: ಸಿಎಂ ಯಡಿಯೂರಪ್ಪ ಘೋಷಣೆ