Afghanistan Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, 4.6 ತೀವ್ರತೆ ದಾಖಲು

|

Updated on: Oct 13, 2023 | 10:02 AM

ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಎರಡು ದಿನದ ಹಿಂದಷ್ಟೇ 6.3 ತೀವ್ರತೆಯ ಭೂಕಂಪ ಸಂಭವಿಸಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದಕ್ಕೂ ಮುನ್ನ ಕಳೆದ ವಾರ ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪಗಳು ಸಂಭವಿಸಿ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಅಫ್ಘಾನಿಸ್ತಾನದಲ್ಲಿ ಒಂದು ವಾರದೊಳಗೆ ಇದು ಮೂರನೇ ಭೂಕಂಪವಾಗಿದೆ

Afghanistan Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, 4.6 ತೀವ್ರತೆ ದಾಖಲು
ಭೂಕಂಪ
Image Credit source: Aljazeera
Follow us on

ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಎರಡು ದಿನದ ಹಿಂದಷ್ಟೇ 6.3 ತೀವ್ರತೆಯ ಭೂಕಂಪ ಸಂಭವಿಸಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದಕ್ಕೂ ಮುನ್ನ ಕಳೆದ ವಾರ ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪಗಳು ಸಂಭವಿಸಿ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಅಫ್ಘಾನಿಸ್ತಾನದಲ್ಲಿ ಒಂದು ವಾರದೊಳಗೆ ಇದು ಮೂರನೇ ಭೂಕಂಪವಾಗಿದೆ.

ಬುಧವಾರ ಬೆಳಿಗ್ಗೆ 5.10 ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಹೆರಾತ್ ನಗರದ ಉತ್ತರಕ್ಕೆ 28 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿತ್ತು. ಅಕ್ಟೋಬರ್ 7 ರಂದು ಹೆರಾತ್ ನಗರದಿಂದ ಸುಮಾರು 40 ಕಿಮೀ (25 ಮೈಲುಗಳು) ಗ್ರಾಮಾಂತರ ಜಿಲ್ಲೆಯ ಜಿಂದಜಾನ್‌ಗೆ ಅಪ್ಪಳಿಸಿದ ಭೂಕಂಪದಲ್ಲಿ ಬದುಕುಳಿದವರಿಗಾಗಿ ಇನ್ನೂ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.

ಅಫ್ಘಾನಿಸ್ತಾನದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಭೂಕಂಪವು ಹೆರಾತ್ ಪ್ರಾಂತ್ಯದ ರಾಜಧಾನಿಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಮತ್ತಷ್ಟು ಓದಿ: Afghanistan Earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ಇನ್ನು ಘಟನೆಯಲ್ಲಿ 465 ಮನೆಗಳು ನಾಶವಾಗಿದ್ದು 135ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ನಗರದಲ್ಲಿ ದೂರವಾಣಿ ಸಂಪರ್ಕವೂ ಕಡಿತಗೊಂಡಿದ್ದರಿಂದ ರಕ್ಷಣಾ ಕಾರ್ಯಚರಣೆಯಲ್ಲಿ ತೊಂದರೆಯುಂಟಾಗಿದೆ. 2022ರ ಜೂನ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 1,000 ಜನ ಸಾವನ್ನಪ್ಪಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ