ಅಫ್ಘಾನಿಸ್ತಾನ(Afghanistan)ದಲ್ಲಿ ಮಹಿಳಾ ಬ್ಯೂಟಿ ಸಲೋನ್ಗಳಿಗೆ ಬೀಗ ಹಾಕಲಾಗಿದೆ. ಇನ್ನುಮುಂದೆ ಮಹಿಳೆಯರು ಸಿಂಗರಿಸಿಕೊಳ್ಳುವುದು ಕನಸಿನ ಮಾತಾಗಿದೆ. ಈ ಆದೇಶವು ಮಂಗಳವಾರದಿಂದ ಜಾರಿಗೆ ಬಂದಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ನಂತರ, ಮಹಿಳೆಯರ ಸ್ವಾತಂತ್ರ್ಯವನ್ನು ತಡೆಯುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ.
ತಾಲಿಬಾನ್ ಅಧಿಕಾರಿಗಳು ಮಹಿಳೆಯರಿಗೆ ಹಲವು ರೀತಿ ನಿರ್ಬಂಧಗಳನ್ನು ಹೇರಿದ್ದಾರೆ. ಏತನ್ಮಧ್ಯೆ, ಈಗ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಬ್ಯೂಟಿ ಸಲೂನ್‌ಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ, ಈ ಹಿನ್ನೆಲೆಯಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಬಟನೆ ನಡೆಸಿದ್ದಾರೆ.
ಹೆಚ್ಚು ಶಿಕ್ಷಣ ಪಡೆಯುವಂತಿಲ್ಲ, ಉದ್ಯೋಗ ಮಾಡುವಂತಿಲ್ಲ, ರೆಸ್ಟೋರೆಂಟ್ಗಳಲ್ಲಿ ಪುರುಷರಿಗೆ ಸರಿಸಮನಾಗಿ ಕುಳಿತು ಊಟ ಮಾಡುವಂತಿಲ್ಲ, ಒಬ್ಬರೇ ಓಡಾಡುವಂತಿಲ್ಲ, ಉದ್ಯಾನಗಳಿಗೆ ತೆರಳುವಂತಿಲ್ಲ ಹೀಗೆ ಹಲವು ರೀತಿಯಲ್ಲಿ ಮಹಿಳೆಯರ ಕೈಕಾಲು ಕಟ್ಟುವ ಪ್ರಯತ್ನಗಳು ನಡೆದಿವೆ.
ನಾಲ್ಕು ತಿಂಗಳ ಹಿಂದೆ ಮಹಿಳಾ ಬ್ಯೂಟಿ ಸಲೂನ್‌ಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಲಾಗಿತ್ತು, ಆದರೆ ಅವುಗಳನ್ನು ಅನುಸರಿಸಿಲ್ಲ ಎಂದು ಸಚಿವಾಲಯ ಹೇಳಿದೆ.
ಮತ್ತಷ್ಟು ಓದಿ: UNO: ಅಫ್ಘಾನ್ ಮಹಿಳೆಯರ ಮೇಲೆ ನಿರ್ಬಂಧ ಇರುವವರೆಗೂ ತಾಲಿಬಾನ್ ಸರ್ಕಾರವನ್ನು ಅಂತರರಾಷ್ಟ್ರೀಯ ಸಮುದಾಯ ಎಂದು ಗುರುತಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆ
ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನು ಬಲವಂತವಾಗಿ ಮುಚ್ಚುವುದರಿಂದ ಮಹಿಳೆಯರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಸೆಕ್ರೆಟರಿ ಜನರಲ್ ಫರ್ಹಾನ್ ಹಕ್ ಅವರ ಉಪ ವಕ್ತಾರರು ಬ್ಯೂಟಿ ಸಲೂನ್‌ಗಳನ್ನು ಮುಚ್ಚುವ ಆದೇಶವನ್ನು ನಿಲ್ಲಿಸುವಂತೆ ತಾಲಿಬಾನ್ ಅಧಿಕಾರಿಗಳನ್ನು ಕೇಳಿದ್ದಾರೆ.
ಕೆಲವು ಕುಟುಂಬಗಳಲ್ಲಿ ಮಹಿಳೆಯರೇ ದುಡಿಯುತ್ತಿದ್ದಾರೆ, ಈ ಆದೇಶದಿಂದ ಅವರ ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
ದೇಶಾದ್ಯಂತ 12,000 ಕ್ಕೂ ಹೆಚ್ಚು ಮಹಿಳಾ ಬ್ಯೂಟಿ ಸಲೂನ್‌ಗಳಿವೆ, ಪ್ರತಿಯೊಂದೂ ಸರಾಸರಿ 5 ಮಹಿಳೆಯರನ್ನು ನೇಮಿಸಿಕೊಂಡಿದೆ. ಕಾಬೂಲ್‌ನಲ್ಲಿ 3,100 ಮಹಿಳೆಯರ ಬ್ಯೂಟಿ ಪಾರ್ಲರ್ಗಳಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ