Nigeria Tanker Explosion: ನೈಜೀರಿಯಾದಲ್ಲಿ ತೈಲ ಟ್ಯಾಂಕರ್​ ಸ್ಫೋಟ: 3 ಮಕ್ಕಳು ಸೇರಿ 20 ಮಂದಿ ಸಾವು

|

Updated on: Jul 25, 2023 | 8:55 AM

ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡು ಮೂವರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. ಒಂಡೋ ರಾಜ್ಯದ ಲಾಗೋಸ್-ಬೆನಿನ್ ಹೆದ್ದಾರಿ ಬಳಿ ಘಟನೆ ನಡೆದಿದೆ, ಮೂವರು ಮಕ್ಕಳು ಸೇರಿ 20 ಜನ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.

Nigeria Tanker Explosion: ನೈಜೀರಿಯಾದಲ್ಲಿ ತೈಲ ಟ್ಯಾಂಕರ್​ ಸ್ಫೋಟ: 3 ಮಕ್ಕಳು ಸೇರಿ 20 ಮಂದಿ ಸಾವು
ಟ್ಯಾಂಕರ್ ಸ್ಫೋಟ
Image Credit source: Republicworld.com
Follow us on

ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡು ಮೂವರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. ಒಂಡೋ ರಾಜ್ಯದ ಲಾಗೋಸ್-ಬೆನಿನ್ ಹೆದ್ದಾರಿ ಬಳಿ ಘಟನೆ ನಡೆದಿದೆ, ಮೂವರು ಮಕ್ಕಳು ಸೇರಿ 20 ಜನ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.

ತೈಲ ಟ್ಯಾಂಕರ್​​ ಸ್ಫೋಟದಿಂದ ಮನೆಗಳಿಗೆ ಬೆಂಕಿ ಹರಡಿ ದುರಂತ ಸಂಭವಿಸಿದೆ. ಲಾಗೋಸ್-ಬೆನಿನ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಸ್ಫೋಟವು ದಟ್ಟವಾದ ಕಪ್ಪು ಹೊಗೆಯೊಂದಿಗೆ ಭಾರಿ ಬೆಂಕಿಯನ್ನು ಉಂಟುಮಾಡಿತು, ಅದು ಇಡೀ ಪ್ರದೇಶವನ್ನು ಆವರಿಸಿತು, ಪರಿಸ್ಥಿತಿಯನ್ನು ಅವಲೋಕಿಸಲು ವೀಕ್ಷಕರು ಸ್ಥಳಕ್ಕೆ ಧಾವಿಸಿದರು.

ಒಂಡೋ ರಾಜ್ಯ ಸರ್ಕಾರದ ಮಧ್ಯಪ್ರವೇಶದ ನಂತರ ಹಲವಾರು ಅಗ್ನಿಶಾಮಕ ಟ್ರಕ್‌ಗಳನ್ನು ಒಂಡೋ ರಾಜ್ಯದಲ್ಲಿ ಘಟನಾ ಸ್ಥಳಕ್ಕೆ ರವಾನಿಸಲಾಯಿತು.

ಕೆಲವರು ಇಂಧನವನ್ನು ಸ್ಕೂಪ್ ಮಾಡಲು ಅಲ್ಲಿಗೆ ಹೋಗಿದ್ದರು. ಈ ಪ್ರಕ್ರಿಯೆಯಲ್ಲಿ, ಟ್ಯಾಂಕರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ನೈಜೀರಿಯಾದಲ್ಲಿ ಇಂಧನವನ್ನು ರೈಲಿನಲ್ಲಿ ಸಾಗಿಸುವುದಿಲ್ಲ, ಬದಲಾಗಿ ಟ್ರಕ್​ಗಳ ಮೂಲಕ ರಸ್ತೆಯಲ್ಲೇ ಸಾಗಿಸಲಾಗುತ್ತದೆ. ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್‌ಗೆ 189 ನೈರಾ ($0.24) ರಿಂದ 617 ನೈರಾ ($0.78) ಕ್ಕೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ