ತಾನು ಬರುವ ಮುನ್ನವೇ ಮಗನ ಮೃತದೇಹ ದಫನ ಮಾಡಿದ್ದಕ್ಕೆ ಗುಂಡಿನ ದಾಳಿ ನಡೆಸಿದ ಕಾಂಗೋ ಯೋಧ; 13 ಸಾವು
ಗುರುವಾರ ಮರಣಹೊಂದಿದ ಮಗನ್ನು ಸಮಾಧಿ ಮಾಡಲು ಕುಟುಂಬ ಮತ್ತು ಸಮುದಾಯದ ಸದಸ್ಯರು ಸೇರಿದ್ದರು. ಮಗನ ಅಂತ್ಯ ಸಂಸ್ಕಾರಕ್ಕಾಗಿ ಈ ಯೋಧ ಪ್ರಾಂತ್ಯದ ಮತ್ತೊಂದು ಹಳ್ಳಿಯಿಂದ ಮನೆಗೆ ಬಂದಿದ್ದ ಎಂದು ಸ್ಥಳೀಯ ಗ್ರಾಮದ ಮುಖ್ಯಸ್ಥ ಬರಾಕಾ ಮುಗುವಾ ಆಸ್ಕರ್ ಹೇಳಿದ್ದಾರೆ.
ಗೋಮಾ, ಜುಲೈ 23: ಈಶಾನ್ಯ ಕಾಂಗೋದಲ್ಲಿ (Congo) ಯೋಧನೊಬ್ಬ (Soldier) ತಾನು ಮನೆಗೆ ಬರುವ ಮುನ್ನವೇ ತನ್ನ ಮಗನನ್ನು ದಫನ ಮಾಡಿದ ಕುಟುಂಬದ ಸದಸ್ಯರು ಮತ್ತು ಇತರರ ಮೇಲೆ ಗುಂಡಿನ ದಾಳಿ ನಡೆಸಿದ್ದು, 10 ಮಕ್ಕಳು ಸೇರಿದಂತೆ 13 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಶನಿವಾರ ನಡೆದ ಈ ದಾಳಿಯಲ್ಲಿ ಯೋಧನ ಪತ್ನಿ, ಅತ್ತೆ-ಮಾವಂದಿರು ಮತ್ತು ಅವರ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಆ ಯೋಧ ಅಲ್ಲಿ ನೆರೆದಿದ್ದ ಜನರ ಮೇಲೆಯೂ ಗುಂಡುಹಾರಿಸಿದ್ದಾನೆ ಎಂದು ಇಟುರಿ ಪ್ರಾಂತ್ಯದ ಸೇನೆಯ ವಕ್ತಾರ ಲೆಫ್ಟಿನೆಂಟ್ ಜೂಲ್ಸ್ ನ್ಗೊಂಗೊ ಹೇಳಿದ್ದಾರೆ. ಆದಾಗ್ಯೂ, ಯೋಧನ ಗುರುತು ಪತ್ತೆಯಾಗಿಲ್ಲ.
ಗುರುವಾರ ಮರಣಹೊಂದಿದ ಮಗನ್ನು ಸಮಾಧಿ ಮಾಡಲು ಕುಟುಂಬ ಮತ್ತು ಸಮುದಾಯದ ಸದಸ್ಯರು ಸೇರಿದ್ದರು. ಮಗನ ಅಂತ್ಯ ಸಂಸ್ಕಾರಕ್ಕಾಗಿ ಈ ಯೋಧ ಪ್ರಾಂತ್ಯದ ಮತ್ತೊಂದು ಹಳ್ಳಿಯಿಂದ ಮನೆಗೆ ಬಂದಿದ್ದ ಎಂದು ಸ್ಥಳೀಯ ಗ್ರಾಮದ ಮುಖ್ಯಸ್ಥ ಬರಾಕಾ ಮುಗುವಾ ಆಸ್ಕರ್ ಹೇಳಿದ್ದಾರೆ.
ಅಲ್ಲಿಗೆ ಬಂದಾಗ ಮಗನನ್ನು ತನ್ನ ಅನುಪಸ್ಥಿತಿಯಲ್ಲಿ ಸಮಾಧಿ ಮಾಡಿದ್ದು ಅಪ್ಪನನ್ನು ಕೆರಳಿಸಿದೆ ಎಂದು ಆಸ್ಕರ್ ಹೇಳಿದ್ದಾರೆ. ಆತ ಅಲ್ಲಿ ನೆರೆದಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಸ್ಥಳದಿಂದ ಪಲಾಯನ ಮಾಡಿದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಅಥವಾ ಎಫ್‌ಆರ್‌ಡಿಸಿಯ ಸಶಸ್ತ್ರ ಪಡೆಯ ಯೋಧನನ್ನು ಬಂಧಿಸಲು ಕಾಂಗೋಲೀಸ್ ಸೈನ್ಯದ ತುಕಡಿಗಳನ್ನು ಕಳುಹಿಸಲಾಗಿದೆ.
ಯಾವುದೇ ಸಂದರ್ಭವೇ ಇರಲಿ ನೀವು ಮತ್ತೊಬ್ಬರ ಪ್ರಾಣ ತೆಗೆಯುವಂತಿಲ್ಲ. ಇದು ಅಶಿಸ್ತಿನ ಕ್ರಮವಾಗಿದ್ದು, ಇದನ್ನು ನ್ಯಾಯಾಲಯಗಳು ನೋಡಿಕೊಳ್ಳುತ್ತವೆ ಎಂದು ಸೇನಾ ವಕ್ತಾರ ನ್ಗೊಂಗೊ ಹೇಳಿದ್ದಾರೆ.
ಇದನ್ನೂ ಓದಿ:China: ಚೀನಾದಲ್ಲಿ ಜಿಮ್ನ ಮೇಲ್ಛಾವಣಿ ಕುಸಿತ, 10 ಮಂದಿ ಸಾವು
ಪೂರ್ವ ಕಾಂಗೋದಲ್ಲಿ ದಶಕಗಳಿಂದ 120 ಕ್ಕೂ ಹೆಚ್ಚು ಗುಂಪುಗಳು ಅಧಿಕಾರ, ಭೂಮಿ ಮತ್ತು ಬೆಲೆಬಾಳುವ ಖನಿಜ ಸಂಪನ್ಮೂಲಗಳಿಗಾಗಿ ಹೋರಾಡುತ್ತಿರುವಾಗ, ಇತರರು ತಮ್ಮ ಸಮುದಾಯಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿವೆ. ಈ ವಾರದ ಆರಂಭದಲ್ಲಿ, ವಿಶ್ವಸಂಸ್ಥೆಯು ದೇಶದ ಈಶಾನ್ಯದಲ್ಲಿ ಹಿಂಸಾಚಾರದ ಉಲ್ಬಣದ ಬಗ್ಗೆ ಎಚ್ಚರಿಕೆ ನೀಡಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ