ಅಫ್ಘಾನಿಸ್ತಾನ: ಹೆಣ್ಣುಮಕ್ಕಳಿರುವ ವಸತಿ ಕಟ್ಟಡಗಳಲ್ಲಿ ಕಿಟಕಿಯೂ ಇರಬಾರದೆಂದು ತಾಲಿಬಾನ್ ಆದೇಶ

|

Updated on: Dec 30, 2024 | 8:47 AM

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಿದಾಗಿನಿಂದ ಮಹಿಳೆಯರ ವಿರುದ್ಧವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ಯಾವ ರೀತಿ ಬಟ್ಟ ಧರಿಸಬೇಕೆಂಬುದರಿಂದ ಹಿಡಿದು ಅಕ್ಷರಶಃ ಮಹಿಳೆಯರು ಮನೆಯಲ್ಲಿದ್ದರೂ ಜೈಲಿನಲ್ಲಿರುವಂತಹ ಅನುಭವವಾಗುತ್ತಿರುವುದಂತೂ ಸತ್ಯ. ಹೋಟೆಲ್, ಪಾರ್ಕ್​, ಬ್ಯೂಟಿ ಪಾರ್ಲರ್, ಶಾಲೆ, ಕಾಲೇಜುಗಳು ಎಲ್ಲಿಗೂ ಹೋಗುವಂತಿಲ್ಲ. ಇಷ್ಟು ಸಾಲದ್ದಕ್ಕೆ ಸಾರ್ವಜನಿಕವಾಗಿ ಹಾಡುವಂತೆಯೂ ಇಲ್ಲ. ಈಗ ಬಂದಿರುವ ನಿಯಮದ ಪ್ರಕಾರ ಮನೆಯ ಕಿಟಿಕಿಯಿಂದ ಹೊರಗೆ ನೋಡುವಂತೆಯೂ ಇಲ್ಲ.

ಅಫ್ಘಾನಿಸ್ತಾನ: ಹೆಣ್ಣುಮಕ್ಕಳಿರುವ ವಸತಿ ಕಟ್ಟಡಗಳಲ್ಲಿ ಕಿಟಕಿಯೂ ಇರಬಾರದೆಂದು ತಾಲಿಬಾನ್ ಆದೇಶ
ಮಹಿಳೆಯರು
Image Credit source: The Hindu
Follow us on

ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗಾಗಿಯೇ ನಿತ್ಯವೂ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಹಿಜಾಬ್ ಧರಿಸುವುದು, ಬ್ಯೂಟಿಪಾರ್ಲರ್, ಪಾರ್ಕ್​, ಹೋಟೆಲ್, ಶಾಲೆ, ಕಾಲೇಜುಗಳಿಗೆ ನಿಷೇಧ ಇದೆಲ್ಲಾ ಮುಗಿದು ಈಗ ಹೊಸ ಕಾನೂನು ಮನೆಗೂ ಬಂದಿದೆ. ಇನ್ನು ಹೊಸದಾಗಿ ಕಟ್ಟಡಗಳ ನಿರ್ಮಾಣ ಮಾಡುವಾಗ ಮಹಿಳೆಯರಿರುವ ವಸತಿ ಕಟ್ಟಡದಲ್ಲಿ ಕಿಟಕಿಯನ್ನು ನಿರ್ಮಿಸುವುದನ್ನು ತಾಲಿಬಾನ್ ನಿಷೇಧಿಸಿದೆ.

ಮಹಿಳೆಯರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ, ಆಸ್ತಿ ಮಾಲೀಕರಿಗೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಲಾಗಿದೆ. ಮನೆಯನ್ನು ನಿರ್ಮಿಸುವ ವ್ಯಕ್ತಿಗಳು ಮಹಿಳೆಯರಿರುವ ಅಡುಗೆ ಮನೆ, ಅಂಗಳ, ಬಾವಿ ಇತರೆ ಸ್ಥಳಗಳಲ್ಲಿ ಕಿಟಕಿಗಳನ್ನು ನಿರ್ಮಿಸಬಾರದು ಎಂದು ಹೇಳಿದೆ.

ಅಸ್ತಿತ್ವದಲ್ಲಿರುವ ಕಟ್ಟಡಗಳು ಈ ನಿರ್ದೇಶನಗಳನ್ನು ಉಲ್ಲಂಘಿಸುವ ಕಿಟಕಿ ಹೊಂದಿದ್ದರೆ ಮಾಲೀಕರು ಗೋಡೆಯನ್ನು ನಿರ್ಮಿಸಬೇಕು ಎಂದು ಹೇಳಿದೆ. ಹೊಸ ಕಟ್ಟಡಗಳಲ್ಲಿ ಇಂತಹ ಕಿಟಕಿಗಳನ್ನು ನಿರ್ಮಾಣ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.

ಮತ್ತಷ್ಟು ಓದಿ: United Nations: ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಫ್ಘಾನ್ ಮಹಿಳೆಯರಿಗೆ ಕೆಲಸಕ್ಕೆ ಬಾರದಂತೆ ಸೂಚನೆ

2021 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ, ಇದರಲ್ಲಿ ಶಿಕ್ಷಣ ಮತ್ತು ಮನೆಯ ಹೊರಗೆ ಉದ್ಯೋಗದ ಮೇಲಿನ ನಿಷೇಧಗಳು ಸೇರಿದಂತೆ ಮಾನವ ಹಕ್ಕುಗಳ ಗುಂಪುಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ನೆರೆಹೊರೆಯವರ ಮನೆಗಳನ್ನು ನೋಡಲು ಸಾಧ್ಯವಾಗುವುದಿಲ್ಲ., ಇತ್ತೀಚಿನ ಕಾನೂನು ತಾಲಿಬಾನ್ ಸರ್ಕಾರದ ಇಸ್ಲಾಮಿಕ್ ಕಾನೂನಿನ ಅತ್ಯಂತ ಕಟ್ಟುನಿಟ್ಟಾದ ಅನ್ವಯದ ಅಡಿಯಲ್ಲಿ ಸಾರ್ವಜನಿಕವಾಗಿ ಹಾಡುವುದನ್ನು ನಿಷೇಧಿಸಿದ್ದಾರೆ.
ಕೆಲವು ಸ್ಥಳೀಯ ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳು ಹೆಣ್ಣುಮಕ್ಕಳ ಧ್ವನಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ