ಮಂಗಳ ಗ್ರಹದಲ್ಲಿ ಜೀವಸಂಕುಲ ಇರಬಹುದಾ ಎಂದು ದಶಕಗಳ ಕಾಲ ಶೋಧನೆ ನಡೆಸಿದ ನಂತರ ನಾಸಾ (NASA) ತನ್ನ ಮುಂದಿನ ಎರಡು ಮಿಷನ್ಗಳಿಗಾಗಿ ಶುಕ್ರಗ್ರಹವನ್ನು ಆರಿಸಿಕೊಂಡಿದೆ. ಭೂಮಿಗೆ ಅತ್ಯಂತ ಹತ್ತಿರದಲ್ಲಿರುವ ಮತ್ತು ಇಲ್ಲಿನಂತೆಯೇ ಅಲ್ಲೂ ಜೀವಿಸಲು ಯೋಗ್ಯ ವಾತಾವರಣವಿದೆ ಎಂದು ಈಗ ನರಕ-ಸದೃಶವಾಗಿರುವ ಶುಕ್ರಗ್ರಹ ಬಗ್ಗೆ ಹಿಂದೊಮ್ಮೆ ಹೇಳಲಾಗುತಿತ್ತು. ತನ್ನ ಹೊಸ ಮಿಷನ್ಗಳಿಗಾಗಿ ನಾಸಾ ಒಂದು ಬಿಲಿಯನ್ ಡಾಲರ್ಗಳಷ್ಟು ಹಣವನ್ನು ವ್ಯಯಿಸಲಿದೆ ಎಂದು ವರದಿಯಾಗಿದೆ. ಮೊದಲೆಲ್ಲ ಭೂಮಿ ಮೇಲಿರುವ ಲಕ್ಷಣಗಳನ್ನು ಹೊಂದಿದೆ ಮತ್ತು ಭೂಮಿ ಮೇಲಿನ ವಾತಾವರಣದ ಹಾಗೆ ಒಂದು ಸಾಗರವನ್ನೂ ಹೊಂದಿ ಜೀವಿಸಲು ಯೋಗ್ಯವಾದ ಸೌರಮಂಡಲದ ಮೊದಲ ವಿಶ್ವ ಎಂದು ಕರೆಸಿಕೊಳ್ಳುತ್ತಿದ್ದ ಶುಕ್ರಗ್ರಹ ಹೇಗೆ ನರಕ ರೂಪ ತಳೆಯಿತು ಎನ್ನುವುದನ್ನು ಅರ್ಥಮಾಡಿಕೊಳ್ಳವುದು ಈ ಎರಡು ಮಿಷನ್ಗಳ ಗುರಿಯಾಗಿದೆ ಎಂದು ಹೇಳಿಕೆಯೊಂದರಲ್ಲಿ ನಾಸಾ ತಿಳಿಸಿದೆ.
470 ಡಿಗ್ರಿ ಸೆಲ್ಸಿಯಸ್ಗಳಷ್ಟು ತಾಪಮಾನ ಹೊಂದಿರುವ ಶುಕ್ರಗ್ರಹವು ನಿರಂತರವಾಗಿ ಖಗೋಳ ಶಾಸ್ತ್ರಜ್ಞರ ಕುತೂಹಲಕ್ಕೆ ಸವಾಲೊಡ್ಡುತ್ತಿದೆ ಮತ್ತು ಅದನ್ನು ಸಂಶೋಧಿಸಬೇಕೆನ್ನುವುದು ಅವರ ಹಲವಾರು ವರ್ಷಗಳ ತುಡಿತವಾಗಿದೆ. ಈ ಗ್ರಹವು ತನ್ನ ಪರಿಧಿಯ ಸುತ್ತ ಹಿಮ್ಮುಖವಾಗಿ ಸುತ್ತುತ್ತದೆ, ಮತ್ತು ಅಲ್ಲಿನ ವಾತಾವಾರಣದಲ್ಲಿ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಇದ್ದು ಗಂಧಕಾಮ್ಲದ ಹನಿಯುದುರಿಸುವ ಮೋಡಗಳಿಂದ ಆವೃತವಾಗಿದೆ. ಅಲ್ಲಿನ ದಟ್ಟ ವಾತಾವರಣವು ಸೂರ್ಯನ ಶಾಖವನ್ನು ಟ್ರ್ಯಾಪ್ ಮಾಡುವುದರಿಂದ ಗ್ರಹದ ಮೇಲ್ಮೈ ಭಾರೀ ಉಷ್ಣಾಂಶದಿಂದ ಕೂಡಿದೆ.
ಡಾವಿನ್ಸಿ + ಮಿಷನ್ (DAVINCI+ Mission) ಅಂದರೇನು?
ದಿ ಡೀಪ್ ಅಟ್ಮೋಸ್ಫೇರ್ ವೀನಸ್ ಇನ್ವೆಸ್ಟಿಗೇಶನ್ ಆಫ್ ನೋಬಲ್ ಗ್ಯಾಸಸ್, ಕೆಮಿಸ್ಟ್ರಿ ಅಂಡ್ ಇಮೇಜಿಂಗ್ ಮಿಷನ್ಸ್ ಅನ್ನೇ ಡಾವಿನ್ಸಿ + ಮಿಷನ್ ಅಂತ ಕರೆಯುತ್ತಾರೆ. ಶುಕ್ರಗ್ರಹದ ವಾತಾವರಣದಲ್ಲಿ ಏನೆಲ್ಲ ಇದೆ ಎನ್ನುವುದನ್ನು ಇಂದು ಅಳತೆ ಮಾಡುತ್ತದೆ ಹಾಗೂ ಅದರ ಸೃಷ್ಟಿ ಮತ್ತು ವಿಕಸನ ಮತ್ತು ಅಲ್ಲಿ ಸಾಗರವೇನಾದರೂ ಇತ್ತೇ ಎನ್ನವುದನ್ನು ಪತ್ತೆ ಮಾಡುತ್ತದೆ. ಮಂಗಳ ಮತ್ತು ಜ್ಯೂಪಿಟರ್ನ ಉಪಗ್ರಹವಾಗಿರುವ ಯುರೋಪಾನಲ್ಲಿ ವಿಜ್ಞಾನಿಗಳು ಸರೋವರ ಮತ್ತು ಸಾಗರಗಳು ಇರುವ ಬಗ್ಗೆ ಸಾಕ್ಷ್ಯವನ್ನು ಕಲೆಹಾಕಿರುವುದರಿಂದ ಹಿಂದೆ ಭಾರೀ ಪ್ರಮಾಣದಲ್ಲಿ ನೀರು ಹೊಂದಿದ್ದರೂ ನಂತರದ ದಿನಗಳಲ್ಲಿ ಅದು ಕಾಣೆಯಾಯಿತು ಎನ್ನುವ ವಾದದ ಹಿನ್ನೆಲೆಯಲ್ಲಿ ಶುಕ್ರಗ್ರಹದಲ್ಲೂ ನೀರಿನ ಮೂಲಗಳಿರಬಹುದು ಎಂದು ಅವರು ಭಾವಿಸುತ್ತಿದ್ದಾರೆ.
‘ಸಾಕಷ್ಟು ದೊಡ್ಡ ಗಾತ್ರದ ಒಂದು ಗೋಳ ನಮ್ಮ ಮಿಷನ್ನ ಭಾಗವಾಗಿದ್ದು ಅದು ಶುಕ್ರಗ್ರಹದ ದಟ್ಟ ವಾತಾವರಣವನ್ನು ಭೇದಿಸಿ ಅಲ್ಲಿರುವ ನೋಬಲ ಅನಿಲಗಳು ಮತ್ತು ಇತರ ವಸ್ತಗಳ ನಿಖರವಾದ ಅಳೆತಗಳನ್ನು ತೆಗೆದುಕೊಂಡು,ಭೂಮಿಗಿಂತ ಭಾರೀ ಪ್ರಮಾಣದ ಉಷ್ಣಾಂಶ ಅಲ್ಲಿ ಯಾಕಿದೆ ಎನ್ನುವುದನ್ನು ಆಭ್ಯಾಸ ಮಾಡತ್ತದೆ,’ ಎಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡಾವಿನ್ಸಿ + ಶುಕ್ರಗ್ರಹದ ಭೌಗೋಳಿಕ ಲಕ್ಷಣಗಳ ಹೈ-ರೆಸೊಲ್ಯೂಷನ್ ಇಮೇಜ್ಗಳನ್ನು ನಾಸಾಗೆ ಕಳಿಸಲಿದೆ. ಇದಲ್ಲದೆ ಶುಕ್ರಗ್ರಹದಲ್ಲಿನ ವಾತಾವರಣದಲ್ಲಿ ಪ್ರವೇಶಿಸುವ ಸೌರ ಇಂಧನದಲ್ಲಿ ಅರ್ಧದಷ್ಟು ಹೀರಿಕೊಳ್ಳುವ ಅಪರಿಚಿತ ಅಲ್ಟ್ರಾವಯೋಲೆಟ್ನ ಸ್ವರೂಪವನ್ನು ನಿರ್ಧರಿಸುವ ಅಲ್ಟ್ರಾವಯೋಲೆಟ್ ಬೆಳಕಿನ ಹೈ-ರೆಸೊಲ್ಯೂಷನ್ ಅಳತೆಗಳನ್ನೂ ಅದು ಮಾಡಲಿದೆ.
ವೆರಿಟಾಸ್ ಮಿಷನ್ (VERITAS Mission) ಎಂದರೇನು?
ವೆರಿಟಾಸ್ (ದಿ ವೀನಸ್ ಎಮಿಸ್ಸಿವಿಟಿ ರೇಡಿಯೋ ಸೈನ್ಸ್ ಇನ್ಸಾರ್, ಟೊಪೊಗ್ರಾಫಿ ಅಂಡ್ ಸ್ಪೆಕ್ಟ್ರೋಸ್ಕೋಪಿ) ಎಂದು ಕರೆಸಿಕೊಳ್ಳುವ ಮಿಷನ್ ಶುಕ್ರಗ್ರಹದ ಮೇಲ್ಮೈಯನ್ನು ಅಳತೆ ಮಾಡಿ ಅದರ ಭೌಗೋಲಿಕ ಇತಿಹಾಸವನ್ನು ನಿರ್ಣಯಿಸುತ್ತದೆ ಮತ್ತು ಅದು ಭೂಮಿಗಿಂತ ಭಿನ್ನವಾಗಿ ಯಾಕೆ ಆಭಿವೃದ್ಧಿಯಾಯಿತು ಎನ್ನುವದನ್ನು ಗ್ರಹಿಸುತ್ತದೆ. ಈ ಮಿಷನ್, ಗ್ರಹದ 3ಡಿ ರಚನೆಯ ಮಾದರಿಯನ್ನು ತಯಾರಿಸಿ ಪ್ಲೇಟ್ ಟೆಕ್ಟಾನಿಕ್ಸ್ ಸುಳಿವುಗಳನ್ನು ಪತ್ತೆಮಾಡುತ್ತದೆ ಮತ್ತು ಅಲ್ಲಿ ಈಗಲೂ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತಿವೆಯೇ ಎನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತದೆ.
ಗ್ರಹದ ಮೇಲ್ಮೈಯಿಂದ ಹೊರಸೂಸುವ ಅಗೋಚರ ಅನಿಲಗಳನ್ನು ದಾಖಲಿಸಿಕೊಂಡು ಅದ ಬಂಡೆಯಂಥ ಪ್ರದೇಶಗಳನ್ನು ಒಳಗೊಒಂಡಿದೆಯೇ, ಮತ್ತು ಸಕ್ರಿಯ ಜ್ವಾಲಾಮುಖಿಗಳು ವಾತಾವರಣದಲ್ಲಿ ನೀರಿನ ಆವಿಯನ್ನು ಬಿಡುಗಡೆ ಮಾಡುತ್ತಿವೆಯೇ ಎನದ್ನುವುನ್ನು ನಿರ್ಣಯಿಸುತ್ತದೆ.
‘ಶುಕ್ರಗ್ರಹದ ಬಗ್ಗೆ ನಮ್ಮಲ್ಲಿ ಅತ್ಯಲ್ಪ ಮಾಹಿತಿ ಇರೋದು ನಿಜಕ್ಕೂ ಅಚ್ಚರಿ ಹುಟ್ಟಿಸುವ ಸಂಗತಿಯೇ. ಅದರೆ ಈ ಎರಡು ಮಿಷನ್ಗಳ ಸಂಯುಕ್ತ ಫಲಿತಾಂಶಗಳು, ಗ್ರಹದ ಆಕಾಶದಲ್ಲಿರುವ ಮೋಡಗಳು,ಅದರ ಮೇಲ್ಬಾಗದಲ್ಲಿರಬಹುದಾದ ಜ್ವಾಲಾಮುಖಿ ಮತ್ತು ಇನ್ನೂ ಹಲವಾರು ವಿಷಯಗಳನ್ನು ನಮಗೆ ಹೇಳಲಿವೆ,’ ಎಂದು ನಾಸಾ ಹೇಳಿದೆ.
ಇವು ಶುಕ್ರಗ್ರಹಕ್ಕೆ ಕಳಿಸುವ ಮೊದಲ ಆಕಾಶನೌಕೆಗಳೇನೂ ಅಲ್ಲ
ಡಾವಿನ್ಸಿ + ಮತ್ತು ವೆರಿಟಾಸ್ ಮಿಷನ್ಗಳು ವೈಜ್ಞಾನಿಕ ಸಮುದಾಯವನ್ನು ರೋಮಾಂಚನಗೊಳಿವೆಯಾದರೂ ಶುಕ್ರಗ್ರಹಕ್ಕೆ ಕಳಿಸುವ ಮೊಲದ ತನಿಖಾ ಆಕಾಶನೌಕೆಗಳೇನೂ ಇವು ಅಲ್ಲ. 1962ರಲ್ಲಿ ಮರೀನರ್-2 ಶುಕ್ರಗ್ರಹದ ಮೇಲ್ಮೈಗೆ 34,400 ಕಿಮೀ ಹತ್ತಿರದಷ್ಟು ಹೋಗಿ ಅಲ್ಲಿರುವ ಭಾರೀ ಉಷ್ಣಾಂಶದ ಬಗ್ಗೆ ಮಾಹಿತಿ ರವಾನಿಸಿತ್ತು.
ಏತನ್ಮಧ್ಯೆ, ಸೋವಿಯತ್ ಯೂನಿಯನ್ನ ವಿನೆರಾ ಪ್ರೊಗ್ರಾಮಿನ ಭಾಗವಾಗಿದ್ದ ವಿನೆರಾ-4 ಆಕಾಶನೌಕೆಯು, ಶುಕ್ರದ ಮೇಲ್ಮೈಯನ್ನು ತಲುಪಿ ಮಾಹಿತಿಯನ್ನು ರವಾನಿಸಿದ ಮೊದಲ ಸ್ಪೇಸ್ಕ್ರಾಫ್ಟ್ ಎನಿಸಿಕೊಂಡಿತ್ತು, ಈ ನೌಕೆಯು ಛಿದ್ರಗೊಳ್ಳುವ ಮೊದಲು ಅಲ್ಲಿನ ಮೇಲ್ಮೈ ಲಕ್ಷಣಗಳ ಬಗ್ಗೆ ಅತ್ಯಂತ ಮಹತ್ವಪೂರ್ಣ ಮಾಹಿತಿಯನ್ನು ರವಾನಿಸಿತ್ತು. ಅದು ಕಳಿಸಿದ ಮಾಹಿತಿ ಪ್ರಕಾರ ಶುಕ್ರಗ್ರಹ ವಾತಾವರಣ ಶೇಕಡಾ 90-95 ರಷ್ಟು ಇಂಗಾಲದ ಡೈ ಆಕ್ಸೈಡ್ನಿಂದ ಕೂಡಿದೆ ಮತ್ತು ಅದರಲ್ಲಿ ಸಾರಜನಕದ ಅಂಶವೇ ಇಲ್ಲ.
ಸುಮರು 300-500 ಮಿಲಿಯನ್ ವರ್ಷಗಳಷ್ಟು ಹಿಂದೆ ಶುಕ್ರಗ್ರಹವು ಜ್ವಾಲಾಮುಖಿಯ ಸ್ಫೋಟದಿಂದ ಸೃಷ್ಟಿಯಾಯಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಭೂಮಿಯ ಕಕ್ಷೆಯನ್ನು ಬಿಟ್ಟು ಆಚೆ ಹೋಗುವ ಬಗ್ಗೆ ದೇಶಗಳು ಯೋಚಿಸುತ್ತಿರುವಂತೆಯೇ, ಶುಕ್ರಗ್ರಹವು ಹಿಂದೊಮ್ಮೆ ವಾಸಯೋಗ್ಯ ಪ್ರದೇಶವಾಗಿದ್ದರೂ ನಂತರದ ದಿನಗಳಲ್ಲಿ ಬೆಂಕಿಯುಗುಳುವ ನರಕವಾಗಿ ಮಾರ್ಪಟ್ಟಿತು.
ಇದನ್ನೂ ಓದಿ: ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ