ಎಲ್ ಸಲ್ವಡಾರ್ ದೇಶದ ಅಧ್ಯಕ್ಷ ನಯೀಬ್ ಬುಕೆಲೆ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಕ್ರಿಪ್ಟೊಕರೆನ್ಸಿ ಬಿಟ್ಕಾಯಿನ್ಗೆ ತಮ್ಮ ದೇಶದಲ್ಲಿ ಕಾನೂನು ಮಾನ್ಯತೆ ನೀಡಲು ಮುಂದಿನ ವಾರ ಅಲ್ಲಿನ ಸಂಸತ್ನಲ್ಲಿ ಶಾಸನ ಮಂಡಿಸಲಿದ್ದಾರೆ. ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸಲ್ವಡಾರ್ ನಾಗರಿಕರು ತಮ್ಮ ತಾಯ್ನಾಡಿಗೆ ಹಣವನ್ನು ಈ ಬಿಟ್ ಕಾಯಿನ್ ರೂಪದಲ್ಲಿ ಕಳುಹಿಸಬಹುದು ಎಂಬುದು ಅಧ್ಯಕ್ಷರ ಅಭಿಮತ. ಅಧ್ಯಕ್ಷ ನಯೀಬ್ ಬುಕೆಲೆ ಅವರು ಹೇಳಿರುವ ಪ್ರಕಾರ, ಬಿಟ್ ಕಾಯಿನ್ ಅನ್ನು ಕಾನೂನು ಬದ್ಧವಾಗಿ ಮಾನ್ಯ ಮಾಡಿ, ಅದಕ್ಕೊಂದು ಮೌಲ್ಯಮಾಪನ ಗುರುತಿಸಲು ಕೆಲಸ ಮಾಡಲಾಗುತ್ತಿದೆ. ಒಂದು ವೇಳೆ ಈ ಬಗ್ಗೆ ಮಸೂದೆಗೆ ಅನುಮೋದನೆ ದೊರೆತಲ್ಲಿ ಬಿಟ್ ಕಾಯಿನ್ಗೆ ಮಾನ್ಯತೆ ನೀಡಿದ ಮೊದಲ ದೇಶ ಎಲ್ ಸಲ್ವಡಾರ್ ಆಗಲಿದೆ. ಆದರೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯು ಸದ್ಯಕ್ಕೆ ಲಭ್ಯವಾಗಿಲ್ಲ.
ಫ್ಲೋರಿಡಾದಲ್ಲಿ ಸಮಾವೇಶವೊಂದರಲ್ಲಿ ಬುಕೆಲೆ ಮಾತನಾಡಿ, ಸಣ್ಣದಾಗಿ ಹೇಳಬೇಕು ಅಂದಲ್ಲಿ ಇದರಿಂದ ಉದ್ಯೋಗ ಸೃಷ್ಟಿ ಆಗುತ್ತದೆ. ಜತೆಗೆ ಸಂಘಟಿತ ವಲಯದ ಆಚೆಗೆ ಇರುವವರಿಗೆ ಹಣಕಾಸು ಒಳಗೊಳ್ಳುವಿಕೆಗೆ ನೆರವು ನೀಡುತ್ತದೆ. ಇದರಿಂದ ದೇಶದೊಳಕ್ಕೆ ಹೂಡಿಕೆ ಬರುವುದಕ್ಕೆ ಸಹಾಯ ಆಗುತ್ತದೆ ಎಂದಿದ್ದಾರೆ. ಮೊದಲ ಬಿಟ್ಕಾಯಿನ್ ದೇಶ ಅಂದರೆ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಬೇಕಿದೆ. ಆದರೆ ಎಲ್ಸಲ್ವಡಾರ್ ದೇಶವು ಆರ್ಥಿಕವಾಗಿ ಅಸ್ಥಿರವಾಗಿದ್ದು, ಬಡತನದಿಂದ ಕೂಡಿದೆ. ಇಲ್ಲಿನ ಶೇ 70ರಷ್ಟು ನಾಗರಿಕರಿಗೆ ಬ್ಯಾಂಕ್ ಖಾತೆ ಕೂಡ ಇಲ್ಲ.
ಎಲ್ ಸಲ್ವಡಾರ್ ಜಿಡಿಪಿ 2020ರಲ್ಲಿ 2460 ಕೋಟಿ ಅಮೆರಿಕನ್ ಡಾಲರ್ ಇತ್ತು. ಸದ್ಯಕ್ಕೆ ದೇಶಕ್ಕೆ ವರ್ಗಾವಣೆ ಆಗುತ್ತಿರುವ ಹಣದ ಪ್ರಮಾಣ ಕಡಿಮೆ ಇದೆ. ಮಧ್ಯದಲ್ಲೇ ಆ 600 ಕೋಟಿ ಅಮೆರಿಕನ್ ಡಾಲರ್ನಲ್ಲಿ (43,680 ಕೋಟಿ ರೂಪಾಯಿ) ದೊಡ್ಡ ಭಾಗ ಹೊರಟು ಹೋಗುತ್ತಿದೆ. ಒಂದು ವೇಳೆ ಬಿಟ್ ಕಾಯಿನ್ ಬಳಸಿದಲ್ಲಿ ಕಡಿಮೆ ಆದಾಯದ ಕುಟುಂಬಗಳಿಗೆ ಬರುವ ಆದಾಯವು ನೂರಾರು ಕೋಟಿ ಅಮೆರಿಕನ್ ಡಾಲರ್ ಹೆಚ್ಚುತ್ತದೆ ಎಂದಿದ್ದಾರೆ ಬುಕೆಲೆ. ಎಲ್ ಸಲ್ವಡಾರ್ನ ಶೇ 70ರಷ್ಟು ಜನಸಂಖ್ಯೆಯು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಮತ್ತು ಅಸಂಘಟಿತ ಆರ್ಥಿಕತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಒಳಗೊಳ್ಳುವಿಕೆ ಎನ್ನುವುದು ನೈತಿಕ ಜವಾಬ್ದಾರಿ ಮಾತ್ರವಲ್ಲ, ನಾಗರಿಕರಿಗೆ ಸಾಲ, ಉಳಿತಾಯ ಖಾತೆ, ಹೂಡಿಕೆ, ಸುರಕ್ಷಿತ ವಹಿವಾಟಿಗೆ ಅವಕಾಶ ದೊರೆತಂತಾಗುತ್ತದೆ ಎಂದು ಬುಕೆಲೆ ಹೇಳಿದ್ದಾರೆ.
#Bitcoin has a market cap of $680 billion dollars.
If 1% of it is invested in El Salvador, that would increase our GDP by 25%.
On the other side, #Bitcoin will have 10 million potential new users and the fastest growing way to transfer 6 billion dollars a year in remittances.
— Nayib Bukele ?? (@nayibbukele) June 6, 2021
ಇದನ್ನೂ ಓದಿ: Tv9 Digital Live | ಬಿಟ್ ಕಾಯಿನ್ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್ ಕರೆನ್ಸಿ?
( El Salvador to be world’s first country to accept legal tender of cryptocurrency bit coin)
Published On - 11:17 pm, Mon, 7 June 21