ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್​ಗೆ ಕೊರೊನಾ ಸೋಂಕು, ಬೈಡನ್ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಅನುಮಾನ

|

Updated on: Sep 05, 2023 | 8:13 AM

ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್​ಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಜೋ ಬೈಡನ್​ ಅವರ ದೇಹದಲ್ಲಿ ಸೋಂಕು ಪತ್ತೆಯಾಗಿಲ್ಲ. ಜಿಲ್ ಬೈಡನ್​ಗೆ ಕಳೆದ ವರ್ಷದ ಆಗಸ್ಟ್​ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಇನ್ನು ಜೋ ಬೈಡನ್​ನ್​ಗೆ 2022ರ ಜುಲೈ ತಿಂಗಳಲ್ಲಿ ಸೋಂಕು ತಗುಲಿತ್ತು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್​ಗೆ ಕೊರೊನಾ ಸೋಂಕು, ಬೈಡನ್ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಅನುಮಾನ
ಜೋ ಬೈಡನ್
Image Credit source: India.com
Follow us on

ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಪತ್ನಿ ಜಿಲ್​ಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಜೋ ಬೈಡನ್​ ಅವರ ದೇಹದಲ್ಲಿ ಸೋಂಕು ಪತ್ತೆಯಾಗಿಲ್ಲ. ಜಿಲ್ ಬೈಡನ್​ಗೆ ಕಳೆದ ವರ್ಷದ ಆಗಸ್ಟ್​ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಇನ್ನು ಜೋ ಬೈಡನ್​ನ್​ಗೆ 2022ರ ಜುಲೈ ತಿಂಗಳಲ್ಲಿ ಸೋಂಕು ತಗುಲಿತ್ತು. ಜಿಲ್ ಬೈಡನ್ ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ಅವರ ಮನೆಯಲ್ಲಿ ಇರಲಿದ್ದಾರೆ. ಜಿಲ್​ಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಅಧ್ಯಕ್ಷ ಜೋ ಬೈಡನ್​ಗೂ ಕೊರೊನಾ ಪರೀಕ್ಷೆ ನಡೆಸಲಾಯಿತು, ರೋಗ ಲಕ್ಷಣಗಳ ಮೇಲ್ವಿಚಾರಣೆ ಮಾಡಲಿದ್ದಾರೆ.

ವಿಶ್ವದ 43 ದೇಶಗಳ ಪ್ರತಿನಿಧಿಗಳು ಭಾರತದಲ್ಲಿ ಉಪಸ್ಥಿತರಿರುತ್ತಾರೆ 43 ದೇಶಗಳ ಮುಖ್ಯಸ್ಥರು, ಸಂಸ್ಥೆಗಳು ಮತ್ತು ಪ್ರಪಂಚದಾದ್ಯಂತದ ಅವರ ನಿಯೋಗಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. G20 ರಾಷ್ಟ್ರಗಳಲ್ಲದೆ, 9 ಇತರ ದೇಶಗಳ ಮುಖ್ಯಸ್ಥರು ಮತ್ತು 14 ಅಂತಾರಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಶೃಂಗಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಸೆಪ್ಟೆಂಬರ್ 7ಕ್ಕೆ ದೆಹಲಿ ತಲುಪಲಿದ್ದಾರೆ ಜೋ ಬೈಡನ್ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆ..7ರಂದು ದೆಹಲಿ ತಲುಪಲಿದ್ದಾರೆ. ಅಧ್ಯಕ್ಷರಾದ ಬಳಿಕ ಜೋ ಬೈಡನ್ ಭಾರತಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೈಡನ್ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ.

ಮತ್ತಷ್ಟು ಓದಿ: ಜಿ20 ಶೃಂಗಸಭೆ: ದೆಹಲಿಯ ಈ ಪ್ರಸಿದ್ಧ ಹೋಟೆಲ್​ಗಳಲ್ಲಿ ಉಳಿಯಲಿದ್ದಾರೆ ಜೋ ಬೈಡನ್ ಸೇರಿದಂತೆ ಇತರೆ ವಿಶ್ವ ನಾಯಕರು

ಇದಾದ ಬಳಿಕ ಜೋ ಬೈಡನ್ ಸೆ.9 ಹಾಗೂ 10ರಂದು ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಡನ್​ ಐಟಿಸಿ ಮೌರ್ಯ ಹೋಟೆಲ್​ನಲ್ಲಿ ತಂಗಲಿದ್ದಾರೆ, ಐಟಿಸಿ ಮೌರ್ಯ ಹೋಟೆಲ್​ನ 14ನೇ ಮಹಡಿಯಲ್ಲಿ ಬೈಡನ್ ಉಳಿದುಕೊಳ್ಳಲಿದ್ದಾರೆ, ಸುಮಾರು 4,600 ಚದರಡಿ ವಿಸ್ತೀರ್ಣದ ರೂಂ ಅದಾಗಿದೆ.

ಇನ್ನು ಸೆಪ್ಟೆಂಬರ್ 9-10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಅನೇಕ ನಾಯಕರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಭಾರತಕ್ಕೆ ಬರುತ್ತಿಲ್ಲ ಎಂದು ಖಚಿತವಾಗಿದೆ. ಇನ್ನು ಜೋ ಬೈಡನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ