ಅಮೆರಿಕ: ಮಿಸಿಸಿಪ್ಪಿ ಏರ್‌ಪೋರ್ಟ್‌ನಿಂದ ಸ್ಥಳೀಯ ಕಾಲಮಾನ ಶನಿವಾರ ಬೆಳಗಿನ ಜಾವ 5 ಗಂಟೆಯಲ್ಲಿ E911 ವಿಮಾನ ಅಪಹರಣವಾಗಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ. ಅಮೆರಿಕದ ಮಿಸಿಸಿಪ್ಪಿಯಿಂದ ಟೇಕಾಫ್ ಆಗಿದ್ದ ವಿಮಾನವನ್ನು ಅಪಹರಿಸಲಾಗಿದೆ. ವಿಮಾನವನ್ನು ಸ್ಥಳೀಯ ವಾಲ್‌ಮಾರ್ಟ್ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಪೈಲಟ್‌ನಿಂದ ಬೆದರಿಕೆಯ ಕರೆ ಬಂದಿದೆ.
ತಾಜಾ ಮಾಹಿತಿ ಪ್ರಕಾರ ಅಪಹೃತ ವಿಮಾನವನ್ನು ಪೈಲಟ್ ಸುರಕ್ಷಿತವಾಗಿ ಕೆಳಗಿಳಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದರಿಂದ ಆತಂಕಗೊಂಡಿರುವ ಪೊಲೀಸರು ಮುನ್ನೆಚ್ಚರಿಕೆಯಿಂದ ವಾಲ್‌ಮಾರ್ಟ್ ಕಟ್ಟಡದಲ್ಲಿದ್ದ (Walmart in Tupelo, Mississippi) ಎಲ್ಲಾ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾರೆ (Mississippi Airplane hijack). ವಿಮಾನವನ್ನು ಕದ್ದ ಪೈಲಟ್, 29 ವರ್ಷದ ಕೋರಿ ಪ್ಯಾಟರ್ಸನ್ (Cory Patterson) ಎಂದು ಗುರುತಿಸಲಾಗಿದ್ದು, ಈತ ಟುಪೆಲೋ ಪ್ರಾದೇಶಿಕ ವಿಮಾನ ನಿಲ್ದಾಣದ (Tupelo Regional Airport) ಉದ್ಯೋಗಿ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಬೆಳವಣಿಗೆಗಳ ಪ್ರಕಾರ ಬೆಳಗ್ಗೆ 10 ಗಂಟೆಯಾಗಿದ್ದರೂ ಅಪಹರಣಕಾರ ಪೈಲಟ್, ಆಶ್ಲ್ಯಾಂಡ್ ಫಾಕ್ನರ್ (Ashland Faulkner) ಮತ್ತು ರಿಪ್ಲೆ, ಮಿಸ್ಸಿಸ್ಸಿಪ್ಪಿ (Ripley, Mississippi) ನಡುವೆ ವಿಮಾನವನ್ನು ಗಿರಕಿ ಹೊಡೆಸುತ್ತಿದ್ದಾನೆ. ವಿಮಾನ ಅಪಘಾತಕ್ಕೀಡಾಗುವ ಅಪಾಯವಿದ್ದು, ಈ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಪೊಲೀಸರು ಕೋರಿದ್ದಾರೆ.
NOW – Pilot threatens to crash a hijacked aircraft into a Walmart in Tupelo, Mississippi.pic.twitter.com/ITcj757113
— Disclose.tv (@disclosetv) September 3, 2022
State law enforcement and emergency managers are closely tracking this dangerous situation. All citizens should be on alert and aware of updates from the Tupelo Police Department. https://t.co/hQ8GxcR8s0
— Governor Tate Reeves (@tatereeves) September 3, 2022
Published On - 8:11 pm, Sat, 3 September 22