ಅಲೆಕ್ಸಾಂಡ್ರಿಯಾ: ಇಸ್ರೇಲ್​ ಪ್ರವಾಸಿಗರ ಮೇಲೆ ಈಜಿಪ್ಟ್​ನ ಪೊಲೀಸ್ ಅಧಿಕಾರಿಯಿಂದ ಗುಂಡಿನ ದಾಳಿ, 3 ಮಂದಿ ಸಾವು

|

Updated on: Oct 08, 2023 | 3:39 PM

ಅಲೆಕ್ಸಾಂಡ್ರಿಯಾದಲ್ಲಿ ಈಜಿಪ್ಟ್​ನ ಪೊಲೀಸ್ ಅಧಿಕಾರಿಯೊಬ್ಬರು ಇಸ್ರೇಲ್ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಜತೆಗೆ ಈಜಿಪ್ಟ್​ನ ಓರ್ವ ಪ್ರಜೆ ಕೂಡ ಮೃತಪಟ್ಟಿದ್ದಾರೆ. ಇಸ್ರೇಲ್​ನ ಪ್ರವಾಸಿ ಗುಂಪು ಪ್ರಯಾಣಿಸುತ್ತಿದ್ದ ಬಸ್​ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ. ಗಾಜಾ ಪಟ್ಟಿಯಿಂದ ರಾಕೆಟ್‌ಗಳ ಸುರಿಮಳೆಗೈದ ನಂತರ ಇಸ್ರೇಲ್ ಪ್ಯಾಲೆಸ್ತತೀನ್​ನ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವ ನಡುವೆ ಈ ಘಟನೆ ನಡೆದಿದೆ.

ಅಲೆಕ್ಸಾಂಡ್ರಿಯಾ: ಇಸ್ರೇಲ್​ ಪ್ರವಾಸಿಗರ ಮೇಲೆ ಈಜಿಪ್ಟ್​ನ ಪೊಲೀಸ್ ಅಧಿಕಾರಿಯಿಂದ ಗುಂಡಿನ ದಾಳಿ, 3 ಮಂದಿ ಸಾವು
ಪೊಲೀಸ್
Image Credit source: Business Today
Follow us on

ಅಲೆಕ್ಸಾಂಡ್ರಿಯಾದಲ್ಲಿ ಈಜಿಪ್ಟ್​ನ ಪೊಲೀಸ್ ಅಧಿಕಾರಿಯೊಬ್ಬರು ಇಸ್ರೇಲ್ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಜತೆಗೆ ಈಜಿಪ್ಟ್​ನ ಓರ್ವ ಪ್ರಜೆ ಕೂಡ ಮೃತಪಟ್ಟಿದ್ದಾರೆ. ಇಸ್ರೇಲ್​ನ ಪ್ರವಾಸಿ ಗುಂಪು ಪ್ರಯಾಣಿಸುತ್ತಿದ್ದ ಬಸ್​ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ. ಗಾಜಾ ಪಟ್ಟಿಯಿಂದ ರಾಕೆಟ್‌ಗಳ ಸುರಿಮಳೆಗೈದ ನಂತರ ಇಸ್ರೇಲ್ ಪ್ಯಾಲೆಸ್ತತೀನ್​ನ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವ ನಡುವೆ ಈ ಘಟನೆ ನಡೆದಿದೆ.

ಅಲೆಕ್ಸಾಂಡ್ರಿಯಾದ ಪಾಂಪೀಸ್ ಪಿಲ್ಲರ್ ಸೈಟ್‌ನಲ್ಲಿ ನಡೆದ ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಹೇಳಿದರು. ಭದ್ರತಾ ಪಡೆಗಳು ದಾಳಿಯ ಸ್ಥಳವನ್ನು ತ್ವರಿತವಾಗಿ ಸುತ್ತುವರೆದವು. ಇಸ್ರೇಲ್ ಹಾಗೂ ಹಮಾಸ್ ನಡುವೆ ತಿಕ್ಕಾಟ ನಡೆದಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳನ್ನು ಹಾರಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಇದುವರೆಗೆ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

2021ರಲ್ಲೂ ಇಬ್ಬರ ನಡುವೆ ಯುದ್ಧ ನಡೆದಿತ್ತು, ಆದ್ದರಿಂದ ಹಮಾಸ್ ಮತ್ತು ಇಸ್ರೇಲ್ ಈ ಬಾರಿ ಘರ್ಷಣೆಗೆ ಕಾರಣವಾದ ಇಸ್ರೇಲ್-ಪ್ಯಾಲೆಸ್ತೀನ್ ವಿವಾದ ಏನೆಂದು ನೋಡುವುದಾದರೆ ಇಸ್ರೇಲ್ ಮಧ್ಯಪ್ರಾಚ್ಯದಲ್ಲಿರುವ ಯಹೂದಿ ದೇಶವಾಗಿದೆ. ಪಶ್ಚಿಮ ದಂಡೆ ಅದರ ಪೂರ್ವ ಭಾಗದಲ್ಲಿದೆ. ದೆ, ಇಲ್ಲಿ ‘ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ’ ಪ್ಯಾಲೇಸ್ಟಿನಿಯನ್ ಜನರಿಗೆ ಸರ್ಕಾರ ನಡೆಸುತ್ತದೆ. ಇದನ್ನು ವಿಶ್ವಸಂಸ್ಥೆಯು ಗುರುತಿಸಿದೆ.

ಮತ್ತಷ್ಟು ಓದಿ: Israel War: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಇಲ್ಲಿಯವರೆಗೆ 300ಕ್ಕೂ ಅಧಿಕ ಮಂದಿ ಸಾವು

ಇಸ್ರೇಲ್‌ನ ನೈಋತ್ಯ ಭಾಗದಲ್ಲಿ ಒಂದು ಪಟ್ಟಿಯಿದೆ, ಇದು ಎರಡು ಕಡೆಗಳಲ್ಲಿ  ಇಸ್ರೇಲ್‌ನಿಂದ ಸುತ್ತುವರೆದಿದೆ, ಒಂದು ಬದಿಯಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ಈಜಿಪ್ಟ್. ಇದನ್ನು ಗಾಜಾ ಪಟ್ಟಿ ಎಂದು ಕರೆಯುತ್ತಾರೆ. ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯನ್ನು ಸಾಮಾನ್ಯವಾಗಿ ಪ್ಯಾಲೆಸ್ತೀನ್ ಎಂದು ಕರೆಯಲಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:38 pm, Sun, 8 October 23