Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel War: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಇಲ್ಲಿಯವರೆಗೆ 300ಕ್ಕೂ ಅಧಿಕ ಮಂದಿ ಸಾವು

ಇಸ್ರೇಲ್(Israel) ಹಾಗೂ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವನ್ನು ಪಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಯುದ್ಧದಲ್ಲಿ ಇದುವರೆಗೆ 300 ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 1750 ಇಸ್ರೇಲಿ ಜನರು ಗಾಯಗೊಂಡಿದ್ದಾರೆ. ಇದೇ ವೇಳೆ ಹಮಾಸ್ ಉಗ್ರಗ್ರಾಮಿ ಸಂಘಟನೆ ನಡೆಸಿದ ದಾಳಿಗೆ ಇಸ್ರೇಲ್​ನ ಶತ್ರು ರಾಷ್ಟ್ರ ಇರಾನ್ ಸಂಭ್ರಮಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಿಕಟವಾಗಿರುವ ಹಿರಿಯ ಸಲಹೆಗಾರರು  ಇರಾನ್ ಸಂಸತ್ತಿನಲ್ಲಿ ದಾಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಅದ್ಭುತ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

Israel War: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಇಲ್ಲಿಯವರೆಗೆ 300ಕ್ಕೂ ಅಧಿಕ ಮಂದಿ ಸಾವು
ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧImage Credit source: NDTV
Follow us
ನಯನಾ ರಾಜೀವ್
|

Updated on: Oct 08, 2023 | 8:24 AM

ಇಸ್ರೇಲ್(Israel) ಹಾಗೂ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವನ್ನು ಪಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಯುದ್ಧದಲ್ಲಿ ಇದುವರೆಗೆ 300 ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 1750 ಇಸ್ರೇಲಿ ಜನರು ಗಾಯಗೊಂಡಿದ್ದಾರೆ. ಇದೇ ವೇಳೆ ಹಮಾಸ್ ಉಗ್ರಗ್ರಾಮಿ ಸಂಘಟನೆ ನಡೆಸಿದ ದಾಳಿಗೆ ಇಸ್ರೇಲ್​ನ ಶತ್ರು ರಾಷ್ಟ್ರ ಇರಾನ್ ಸಂಭ್ರಮಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಿಕಟವಾಗಿರುವ ಹಿರಿಯ ಸಲಹೆಗಾರರು  ಇರಾನ್ ಸಂಸತ್ತಿನಲ್ಲಿ ದಾಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಅದ್ಭುತ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

ಈ ಸಂದರ್ಭದಲ್ಲಿ, ಇರಾನ್ ಸಂಸತ್ತಿನಲ್ಲಿ ಇಸ್ರೇಲ್‌ಗೆ ಮರಣದ ಘೋಷಣೆಗಳು ಮೊಳಗಿದವು. ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಂಸತ್ತಿನಲ್ಲಿ ಜನರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇರಾನ್ ಇಸ್ರೇಲ್ ಅನ್ನು ತನ್ನ ದೊಡ್ಡ ಶತ್ರು ಎಂದು ಪರಿಗಣಿಸುತ್ತದೆ, ಇರಾನ್‌ನ ವಿದೇಶಾಂಗ ಸಚಿವಾಲಯವು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಬೆಂಬಲಿಸಿತು.

20 ನಿಮಿಷಗಳಲ್ಲಿ 5000 ರಾಕೆಟ್​ಗಳನ್ನು ಹಾರಿಸಿದ ಪ್ಯಾಲೆಸ್ತೀನ್ ಇಸ್ರೇಲ್ ಹಿಂದೆಂದೂ ಕಂಡಿರದ ಐತಿಹಾಸಿಕ ದುರಂತವನ್ನು ಕಂಡಿದೆ. ಪ್ಯಾಲೆಸ್ತೀನ್​ನ ಭಯೋತ್ಪಾದಕ ಸಂಘಟನೆ ಹಮಾಸ್ ಕೇವಲ 20 ನಿಮಿಷಗಳಲ್ಲಿ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್​ಗಳನ್ನು ಹಾರಿಸಿತು. ಕಳೆದ 24 ಗಂಟೆಗಳಲ್ಲಿ ಈ ಸಂರ್ಷದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚಾಗತೊಡಗಿದೆ.

ಮತ್ತಷ್ಟು ಓದಿ: ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧದಲ್ಲಿ 40 ಜನ ಸಾವು; ಈ ಬಿಕ್ಕಟ್ಟು ಶುರುವಾಗಿದ್ದು ಹೇಗೆ?

300 ಮಂದಿ ಸಾವು ಪ್ರತೀಕಾರದ ದಾಳಿಯಲ್ಲಿ ಇದುವರೆಗೆ 300 ಮಂದಿ ಸಾವನ್ನಪ್ಪಿದ್ದಾರೆ, ಗಾಜಾದಲ್ಲಿ 230 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಹಮಾಸ್ ಹಲವು ಇಸ್ರೇಲಿ ಸೈನಿಕರು ಹಾಗೂ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿರಿಸಿಕೊಂಡಿತ್ತು.

ರಾತ್ರಿಯಿಡೀ ದಾಳಿ ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ಮುಂದುವರೆದಿತ್ತು. ಎರಡು ಕಡೆಯಿಂದ ದಾಳಿಗಳುಮುಂದುವರೆದವು. ದಕ್ಷಿಣ ಇಸ್ರೇಲ್​ನ ಕೆಲವು ಭಾಗಗಳಲ್ಲಿ ಸೇನೆಯು ಹಮಾಸ್​ನೊಂದಿಗೆ ಇನ್ನೂ ಹೋರಾಟದಲ್ಲಿ ತೊಡಗಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್​ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶ ಇಸ್ರೇಲ್​ನಲ್ಲಿ ಭಾನುವಾರ ಶಾಲೆಗಳಿಗೆ ರಜೆ ಇರುವುದಿಲ್ಲ ಆದರೆ ಈ ಭಾನುವಾರ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್