Canada Plane Crash: ಕೆನಡಾದ ವಿಮಾನ ಅಪಘಾತದಲ್ಲಿ ಮುಂಬೈನ ಇಬ್ಬರು ಟ್ರೈನಿ ಪೈಲಟ್‌ಗಳು ಸಾವು
ಒಂದು ದಿನದ ಹಿಂದಷ್ಟೇ ಕೆನಡಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮುಂಬೈನ ಇಬ್ಬರು ಟ್ರೈನಿ ಪೈಲಟ್‌ಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನವು ಈ ಪ್ರದೇಶದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಅಪಘಾತ ಸಂಭವಿಸಿದೆ. ಕೆನಡಾದ ವ್ಯಾಂಕೋವರ್ ಬಳಿಯ ಚಿಲ್ಲಿವಾಕ್ ಎಂಬಲ್ಲಿ ಈ ವಿಮಾನ (ಲೈಟ್ ಏರ್‌ಕ್ರಾಫ್ಟ್) ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ವಿಮಾನದಲ್ಲಿದ್ದರು, ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ.
ಒಂದು ದಿನದ ಹಿಂದಷ್ಟೇ ಕೆನಡಾ(Canada)ದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮುಂಬೈನ ಇಬ್ಬರು ಟ್ರೈನಿ ಪೈಲಟ್‌ಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನವು ಈ ಪ್ರದೇಶದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಅಪಘಾತ ಸಂಭವಿಸಿದೆ. ಕೆನಡಾದ ವ್ಯಾಂಕೋವರ್ ಬಳಿಯ ಚಿಲ್ಲಿವಾಕ್ ಎಂಬಲ್ಲಿ ಈ ವಿಮಾನ (ಲೈಟ್ ಏರ್‌ಕ್ರಾಫ್ಟ್) ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ವಿಮಾನದಲ್ಲಿದ್ದರು, ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ.
ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದರ ನಂತರ, ಅಪಘಾತಕ್ಕೀಡಾದ ವಿಮಾನವು ಹೋಟೆಲ್ ಕಟ್ಟಡದ ಹಿಂದೆ ಪತನಗೊಂಡಿತು. ಈ ಅಪಘಾತದಲ್ಲಿ ಅಭಯ್ ಗದ್ರು ಮತ್ತು ಯಶ್ ವಿಜಯ್ ರಾಮುಗಡೆ ಎಂಬ ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಇಬ್ಬರೂ ಭಾರತೀಯರು ಮುಂಬೈ ನಿವಾಸಿಗಳು . ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.
ಪೈಪರ್ ಪಿಎ-34 ಸೆನೆಕಾ, ಅವಳಿ-ಎಂಜಿನ್ ಲಘು ವಿಮಾನ, ಚಿಲ್ಲಿವಾಕ್ ನಗರದ ಮೋಟೆಲ್ ಹಿಂಭಾಗದ ಮರಗಳಿಗೆ ಅಪ್ಪಳಿಸಿತು ಎಂದು ಕೆನಡಾದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಭಾರತೀಯರ ಹೊರತಾಗಿ ಮತ್ತೊಬ್ಬ ಪೈಲಟ್ ಕೂಡ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: Amazon Forest: ವಿಮಾನ ಅಪಘಾತ: 40 ದಿನಗಳ ಕಾಲ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಬದುಕುಳಿದಿದ್ದು ಹೇಗೆ?
ವರದಿಯ ಪ್ರಕಾರ, ಪೈಪರ್ ಪಿಎ -34 ವಿಮಾನವನ್ನು 1972 ರಲ್ಲಿ ತಯಾರಿಸಲಾಯಿತು ಮತ್ತು 2019 ರಲ್ಲಿ ನೋಂದಾಯಿಸಲಾಗಿದೆ. ಮೃತರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಸಂಪೂರ್ಣ ತನಿಖೆಗಾಗಿ ಘಟನಾ ಸ್ಥಳಕ್ಕೆ ತಂಡವನ್ನು ಕಳುಹಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ