Amazon Forest: ವಿಮಾನ ಅಪಘಾತ: 40 ದಿನಗಳ ಕಾಲ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಬದುಕುಳಿದಿದ್ದು ಹೇಗೆ?
ಕೊಲಂಬಿಯಾದಿಂದ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳ ಜತೆಗೆ ಸಣ್ಣ ವಿಮಾನದಲ್ಲಿ ಜಾಲಿ ರೈಡ್ಗೆಂದು ಹೋಗಿದ್ದರು. ಆಗ ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತಕ್ಕೀಡಾಗಿತ್ತು, ವಿಮಾನವನ್ನು ಅರಸುತ್ತಾ ಬಂದ ರಕ್ಷಣಾ ಸಿಬ್ಬಂದಿಗೆ ತಾಯಿಯ ಶವ ದೊರೆತಿತ್ತು.
ಕೊಲಂಬಿಯಾದಿಂದ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳ ಜತೆಗೆ ಸಣ್ಣ ವಿಮಾನದಲ್ಲಿ ಜಾಲಿ ರೈಡ್ಗೆಂದು ಹೋಗಿದ್ದರು. ಆಗ ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತಕ್ಕೀಡಾಗಿತ್ತು, ವಿಮಾನವನ್ನು ಅರಸುತ್ತಾ ಬಂದ ರಕ್ಷಣಾ ಸಿಬ್ಬಂದಿಗೆ ತಾಯಿಯ ಶವ ದೊರೆತಿತ್ತು. ಹಾಗಾದರೆ ಮಕ್ಕಳೇನಾದರು ಎಂದು ಹುಡುಕುತ್ತಿದ್ದಾಗ ಅರ್ಧ ತಿಂದ ಹಣ್ಣು, ಮಗುವಿನ ಹಾಲಿನ ಬಾಟಲಿ, ಚಪ್ಪಲಿಗಳು ಸಿಕ್ಕಿದ್ದವು. ಹಾಗಾಗಿ ಮಕ್ಕಳು ಬದುಕಿರಬಹುದು ಎನ್ನುವ ನಂಬಿಕೆಯೊಂದಿಗೆ ಹುಡುಕಾಟ ಮುಂದುವರೆಸಿದ್ದರು.
ದೊಡ್ಡವನಿಗೆ 13 ವರ್ಷ. ಎರಡನೆಯದ್ದಕ್ಕೆ 9 ವರ್ಷ ,ಮೂರನೆಯದ್ದು 4 ವರ್ಷದ್ದು. ನಾಲ್ಕನೇ ಮಗು ಪಾಪ ಇನ್ನೂ ಒಂದು ವರ್ಷದ ಕಂದಮ್ಮ! ಅವರೆಲ್ಲಿದ್ದಾರೆ ಎಂದು ಮಿಲಿಟರಿ ಶೋಧ ಶುರುಮಾಡುತ್ತದೆ. ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ ಕಾಡೆಂದರೆ ಕ್ಯಾರೇ ಇಲ್ಲ. ಹೀಗಾಗಿ ಮಕ್ಕಳು ಕಾಡಿಗೆ,ಅದರ ಸವಾಲಿಗೆ ಜಗ್ಗುವುದಿಲ್ಲ ಎಂಬುದು ಮಿಲಿಟರಿಯ ವಿಶ್ವಾಸ.
ಮಕ್ಕಳ ಅಜ್ಜಿಯ ಧ್ವನಿ ದಾಖಲಿಸಿ, ಮಕ್ಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ ಎನ್ನುವ ಕೂಗನ್ನು ದೊಡ್ಡದಾಗಿ ಕಾಡೊಳಗೆ ಹರಿಯಬಿಡುತ್ತಾರೆ. ನಲುವತ್ತು ದಿನಗಳಾದವು. ಈ ಆ ನಾಲ್ಕೂ ಮಕ್ಕಳು ಅಮೆಜಾನ್ ಎಂಬ ದಟ್ಟಡವಿಯೊಳಗೆ ಪತ್ತೆಯಾಗಿದ್ದಾರೆ. ಮಕ್ಕಳ ಜೊತೆ ಇರುವ ಫೋಟೋಗಳನ್ನು ಮಿಲಿಟರಿ ಪ್ರಕಟಿಸಿದೆ.
ಮತ್ತಷ್ಟು ಓದಿ: Amazon Forest: ವಿಮಾನ ಅಪಘಾತವಾಗಿ 1 ತಿಂಗಳಾಯ್ತು, ಅಮೆಜಾನ್ ಕಾಡಿನಲ್ಲಿ 4 ಮಕ್ಕಳಿಗಾಗಿ ನಿರಂತರ ಹುಡುಕಾಟ, ಬದುಕಿರಬಹುದೆಂಬ ಭರವಸೆ
ಈ ಮಕ್ಕಳು ವಿಮಾನ ಕ್ರಾಶ್ ಆಗಿಯೂ ಬದುಕಿದ್ದಾರೆ, ಅಮೆಜಾನ್ ಕಾಡೊಳಗೆ ನಲುವತ್ತು ದಿನ ಕಳೆದೂ ಬದುಕಿದ್ದಾರೆ. ಅವರೇನು ತಿಂದರೋ ಅದೇನು ಕುಡಿದರೋ? ಆ ಅಡವಿಯ ಮೃಗಗಳೂ ಮಕ್ಕಳತ್ತ ಸುಳಿದಾಡಲಿಲ್ಲ. ಆ ಮೂವರು ಮಕ್ಕಳ ತನ್ನ ಪುಟಾಣಿ ಸಹೋದರನನ್ನು ಕ್ಷೇಮವಾಗಿ ನೋಡಿಕೊಂಡಿದ್ದಾರೆ.
ಬೀಜಗಳು, ಹಣ್ಣುಗಳು, ಬೇರುಗಳು ಮತ್ತು ಸಸ್ಯಗಳನ್ನು ಸಹ ಸೇವಿಸಿದ್ದಾರೆ, ಬಳಲಿಕೆ, ದೈಹಿ ನೋವು, ಕೀಟಗಳಿಂದ ಕಚ್ಚಿಸಿಕೊಂಡಿದ್ದರು, ಇದೆಲ್ಲಕ್ಕೂ ಚಿಕಿತ್ಸೆ ನೀಡಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ