ಇಸ್ರೇಲ್ ಯುದ್ಧದ ನಡುವೆ 7 ಮಂದಿಗೆ ಗಾಯ, 17 ಮಂದಿ ಹಮಾಸ್ ವಶದಲ್ಲಿದ್ದಾರೆ: ನೇಪಾಳ

ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ತಂಡಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ಈ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಲಾಗಿದೆ. "ಅವರು (ನೇಪಾಳಿಗಳು) ಹಾಸ್ಟೆಲ್‌ನಲ್ಲಿದ್ದಾರೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ತೀವ್ರ ಹೋರಾಟದ ಕಾರಣ ಈ ಪ್ರದೇಶವನ್ನು ಪ್ರವೇಶಿಸಲಾಗುವುದಿಲ್ಲ" ಎಂದು ಅವರು ಹೇಳಿದರು.

ಇಸ್ರೇಲ್ ಯುದ್ಧದ ನಡುವೆ 7 ಮಂದಿಗೆ ಗಾಯ, 17 ಮಂದಿ ಹಮಾಸ್ ವಶದಲ್ಲಿದ್ದಾರೆ: ನೇಪಾಳ
ಇಸ್ರೇಲ್ ಯುದ್ಧ
Follow us
|

Updated on: Oct 07, 2023 | 7:54 PM

ಜೆರುಸಲೇಮ್ ಅಕ್ಟೋಬರ್ 07: ಇಸ್ರೇಲ್ ವಿಶ್ವವಿದ್ಯಾನಿಲಯದಲ್ಲಿ ( Israel University) ಓದುತ್ತಿರುವ ಕನಿಷ್ಠ ಏಳು ನೇಪಾಳಿ (Nepal) ವಿದ್ಯಾರ್ಥಿಗಳು ಗಾಯಗೊಂಡಿದ್ದು ಮತ್ತು ಹಮಾಸ್ (Hamas) ಪಡೆಗಳ ವಶದಲ್ಲಿದ್ದಾರೆ ಎಂದು ಇಸ್ರೇಲ್‌ಗೆ ನೇಪಾಳದ ರಾಯಭಾರಿ ಖಚಿತಪಡಿಸಿದ್ದಾರೆ. ಇಸ್ರೇಲಿ ಸರ್ಕಾರದ “ಲರ್ನ್ ಆಂಡ್ ಅರ್ನ್” ಕಾರ್ಯಕ್ರಮದ ಅಡಿಯಲ್ಲಿ ಹರ್ಜ್ಲಿಯಾದಲ್ಲಿ ಏಳು ನೇಪಾಳಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ನೇಪಾಳದ ರಾಯಭಾರಿ ಕಾಂತಾ ರಿಜಾಲ್ ಹೇಳಿದರು.

ದಕ್ಷಿಣ ಇಸ್ರೇಲ್‌ನ ಅಲ್ಯುಮಿಮ್‌ನಲ್ಲಿರುವ ಕೃಷಿ ಫಾರ್ಮ್‌ನಲ್ಲಿ ಹೆಚ್ಚುವರಿ 10 ನೇಪಾಳಿ ವಿದ್ಯಾರ್ಥಿಗಳ ಜೊತೆಗೆ ಅವರನ್ನು ಹಮಾಸ್ ಪಡೆಗಳು ಸೆರೆಯಲ್ಲಿ ಇರಿಸಲಾಗಿದೆ ಎಂದು ಕಾಂತಾ ರಿಜಾಲ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ತಂಡಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ಈ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಲಾಗಿದೆ. “ಅವರು (ನೇಪಾಳಿಗಳು) ಹಾಸ್ಟೆಲ್‌ನಲ್ಲಿದ್ದಾರೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ತೀವ್ರ ಹೋರಾಟದ ಕಾರಣ ಈ ಪ್ರದೇಶವನ್ನು ಪ್ರವೇಶಿಸಲಾಗುವುದಿಲ್ಲ” ಎಂದು ಅವರು ಹೇಳಿದರು.

ಇಸ್ರೇಲ್‌ನ ತುರ್ತು ಸೇವೆಯ ಪ್ರಕಾರ ಹಮಾಸ್ ತನ್ನ ದಾಳಿಯನ್ನು ಪ್ರಾರಂಭಿಸಿದ ನಂತರ ಕನಿಷ್ಠ 40 ಜನರು ಸಾವಿಗೀಡಾಗಿದ್ದಾರೆ. ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಹಮಾಸ್ ತನ್ನ ಸದಸ್ಯರು ಮಿಲಿಟರಿ ನೆಲೆಯ ಮೇಲಿನ ದಾಳಿಯ ಸಮಯದಲ್ಲಿ ಹಲವಾರು ಇಸ್ರೇಲಿ ಸೈನಿಕರನ್ನು ಸೆರೆಹಿಡಿಯುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತಮ್ಮ ದೇಶವು ಯುದ್ಧದಲ್ಲಿದೆ. ನಾವು ಗೆಲ್ಲುತ್ತೇವೆ ಎಂದು ಹೇಳಿದ್ದೇವೆ.

“ನಾವು ಯುದ್ಧದಲ್ಲಿದ್ದೇವೆ ಇಂದು ಬೆಳಿಗ್ಗೆ, ಹಮಾಸ್ ಇಸ್ರೇಲ್ ರಾಜ್ಯ ಮತ್ತು ಅದರ ನಾಗರಿಕರ ವಿರುದ್ಧ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿತು. ಮುಂಜಾನೆಯಿಂದಲೂ ನಾವು ಇದರಲ್ಲೇ ಇದ್ದೇವೆ. ನಾನು ಭದ್ರತಾ ಸಂಸ್ಥೆಯ ಮುಖ್ಯಸ್ಥರನ್ನು ಕರೆದಿದ್ದೇನೆ. ಭಯೋತ್ಪಾದಕರು ಒಳನುಸುಳಿರುವ ಸಮುದಾಯಗಳನ್ನು ತೆರವುಗೊಳಿಸಲು ಮೊದಲನೆಯದಾಗಿ ಆದೇಶಿಸಿದೆ. ಇದನ್ನು ಪ್ರಸ್ತುತ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧದಲ್ಲಿ 40 ಜನ ಸಾವು; ಈ ಬಿಕ್ಕಟ್ಟು ಶುರುವಾಗಿದ್ದು ಹೇಗೆ?

ಅದೇ ಸಮಯದಲ್ಲಿ, ಮೀಸಲು ಪಡೆಗಳ  ವ್ಯಾಪಕ ಸಜ್ಜುಗೊಳಿಸುವಿಕೆಗೆ ನಾನು ಆದೇಶಿಸಿದ್ದೇನೆ. ಶತ್ರುಗಳ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಾವು ಹೋರಾಡುತ್ತೇವೆ. ಅವರು ಇದಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಈ ಮಧ್ಯೆ, ನಾನು ಇಸ್ರೇಲ್ ನಾಗರಿಕರಲ್ಲಿ ಹೇಳುವುದೇನೆಂದರೆ IDF ಮತ್ತು ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳಿಗೆ ಬದ್ಧರಾಗಿರಿ. ನಾವು ಯುದ್ಧದಲ್ಲಿದ್ದೇವೆ ಮತ್ತು ನಾವು ಅದನ್ನು ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ