ಸಾಮಾನ್ಯವಾಗಿ ಪೋಷಕರು ಶಾಲೆ(School)ಗಳಿಗೆ ಪೇರೆಂಟ್ಸ್-ಟೀಚರ್ ಮೀಟಿಂಗ್ಗಳಿಗೆ ಹೋಗುತ್ತಾರೆ, ಆಗ ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು ಸಾಮಾನ್ಯ. ಆದರೆ ಅಮೆರಿಕದ ಶಾಲೆಯಲ್ಲಿ ಮಗನ ಜತೆಗೆ ಊಟ ಮಾಡಲು ಕೆಫೆಟೇರಿಯಾಗೆ ಹೋಗಿದ್ದ ಪೋಷಕರನ್ನು ಬಂಧಿಸಿರುವ ಘಟನೆ ನಡೆದಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕ್ಯಾಲಿಫೋರ್ನಿಯಾ ಏರಿಯಾ ಸ್ಕೂಲ್ ಡಿಸ್ಟ್ರಿಕ್ಟ್ನಲ್ಲಿ ಈ ಘಟನೆ ವರದಿಯಾಗಿದೆ. ಅಂದು ಶಾಲೆಯಲ್ಲಿ ಪೋಷಕರಿಗೆ ಸಭೆ ಇತ್ತು, ಮಧ್ಯಾಹ್ನ ಸ್ವಲ್ಪ ಬಿಡುವಿತ್ತು ಪೋಷಕರು ಹೇಗೂ ಶಾಲೆಗೆ ಬಂದಿದ್ದೀವಲ್ಲ ಮಗನ ಜತೆಗೆ ಊಟ ಮಾಡೋಣವೆಂದು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಾರೆ ಬಳಿಕ ಆ ಪೋಷಕರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.
ಅಲ್ಲಿ ಪೋಷಕರಿಗೆ ಕೆಫೆಟೇರಿಯಾಗೆ ತೆರಳಲು ಅವಕಾಶವಿರುವುದಿಲ್ಲ, ಶಾಲಾ ಪ್ರಾಂಶುಪಾಲರು ಹಾಗೂ ಪೊಲೀಸರು ಅವರನ್ನು ಶಾಲೆಯ ಹೊರಗೆ ಕರೆದೊಯ್ದು ಕೈದಿಗಳಂತೆ ಕೋಳ ಹಾಕಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಮತ್ತಷ್ಟು ಓದಿ: ಈ ಶಾಲೆಯಲ್ಲಿರುವುದು ಓರ್ವ ವಿದ್ಯಾರ್ಥಿ, ಓರ್ವ ಶಿಕ್ಷಕಿ ಮಾತ್ರ ಹಾಗಾದ್ರೆ ಆ ಗ್ರಾಮದಲ್ಲಿ ಮಕ್ಕಳೇ ಇಲ್ಲವೇ?
ಪೋಷಕರ ಮೇಲೆ ಯಾವ ಆರೋಪವಿದೆ ಎಂದು ಅವರು ಹೇಳಿಲ್ಲ, ಘಟನೆಯನ್ನು ಭದ್ರತೆ ಉಲ್ಲಂಘನೆ ಎಂದು ಕರೆದಿದ್ದಾರೆ. ಪೋಷಕರು ಹಾಗೆ ಶಾಲೆಯ ಎಲ್ಲೆಂದರಲ್ಲಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಇಂಟರ್ನೆಟ್ ಬಳಕೆದಾರರು ಇದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.
ಈ ಪ್ರಾಂಶುಪಾಲರನ್ನು ವಜಾ ಮಾಡಬೇಕು, ಮಗುವಿನೊಂದಿಗೆ ಊಟ ಮಾಡುವುದು ತಪ್ಪೇ, ಈ ಶಾಲೆಯಲ್ಲಿ ಅದೆಂಥಾ ನಿಯಮ ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೊಬ್ಬರು ನನ್ನ ಸಹೋದರಿ ಹೈಸ್ಕೂಲ್ನಲ್ಲಿ ಓದುತ್ತಿದ್ದಾಳೆ, ಆದರೆ ಎಂದಿಗೂ ನನಗೆ ಇಂಥಹ ಅನುಭವವಾಗಿಲ್ಲ, ಈ ನಿಯಮ ಯಾವ ಶಾಲೆಗಳಲ್ಲೂ ಇಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ