AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan Election Results: ಲಾಹೋರ್ ಭದ್ರಕೋಟೆಯಲ್ಲಿ ನವಾಜ್ ಷರೀಫ್ ಕುಟುಂಬಕ್ಕೆ ಗೆಲುವು

ಸಾರ್ವತ್ರಿಕ ಚುನಾವಣೆಯ ಅಂತಿಮ ಫಲಿತಾಂಶದ ನಂತರ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ "ಗೆಲುವಿನ ಭಾಷಣ" ಮಾಡಲು ಸಿದ್ಧರಾಗಿದ್ದಾರೆ ಎಂದು ಅವರ ಪಕ್ಷ ಶುಕ್ರವಾರ ಹೇಳಿದೆ. ಅದೇ ವೇಳೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.

Pakistan Election Results: ಲಾಹೋರ್ ಭದ್ರಕೋಟೆಯಲ್ಲಿ ನವಾಜ್ ಷರೀಫ್ ಕುಟುಂಬಕ್ಕೆ ಗೆಲುವು
ನವಾಜ್ ಷರೀಫ್
ರಶ್ಮಿ ಕಲ್ಲಕಟ್ಟ
|

Updated on: Feb 09, 2024 | 6:10 PM

Share

ಲಾಹೋರ್ ಫೆಬ್ರುವರಿ 09: ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು ಲಾಹೋರ್‌ನಲ್ಲಿ (Lahore) ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಎಆರ್‌ವೈ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಉಗ್ರ ದಾಳಿಗಳು ಮತ್ತು ಚುನಾವಣಾ ದುಷ್ಕೃತ್ಯದ ಆರೋಪಗಳ ನಡುವೆ ಪಾಕಿಸ್ತಾನದಲ್ಲಿ ಗುರುವಾರ ಸಂಜೆ 5 ಗಂಟೆಗೆ ಸಂಸತ್ತಿನ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ.  ಏತನ್ಮಧ್ಯೆ, ವಿವಾದಾತ್ಮಕ ಚುನಾವಣೆಯ ಹಿನ್ನಲೆಯಲ್ಲಿ ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಪಾಕಿಸ್ತಾನ ಗುರುವಾರ ರಾಷ್ಟ್ರದಾದ್ಯಂತ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಇಮ್ರಾನ್ ಖಾನ್ ಅವರ ಮಿತ್ರಪಕ್ಷಗಳು ಮುನ್ನಡೆ

266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಟಿಐ ನಿಷ್ಠಾವಂತರು ಇದುವರೆಗೆ ಸುಮಾರು 49 ಸ್ಥಾನಗಳನ್ನು ಗೆದ್ದಿದ್ದಾರೆ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಗೆ 42 ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಗೆ 34 ಸ್ಥಾನಗಳನ್ನು ಗೆದ್ದಿದ್ದಾರೆ. ಅದೇ ವೇಳೆ ಪಾಕಿಸ್ತಾನ ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ ಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತರು ಆಗಿರುವ ಪಕ್ಷೇತರರು ಎಣಿಕೆಯಾದ 136 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದಾರೆ.

‘ಗೆಲುವಿನ ಭಾಷಣ’ ಮಾಡಲು ನವಾಜ್ ಷರೀಫ್ ಸಜ್ಜು

ಸಾರ್ವತ್ರಿಕ ಚುನಾವಣೆಯ ಅಂತಿಮ ಫಲಿತಾಂಶದ ನಂತರ ಮುಖ್ಯಸ್ಥ ನವಾಜ್ ಷರೀಫ್ “ಗೆಲುವಿನ ಭಾಷಣ” ಮಾಡಲು ಸಿದ್ಧರಾಗಿದ್ದಾರೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಶುಕ್ರವಾರ ಹೇಳಿದೆ. ಅದೇ ವೇಳೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.

ಮತ ಎಣಿಕೆ ವಿಳಂಬ ಏಕೆ?

ಗುರುವಾರ ಮತದಾನದ ವೇಳೆ ಸರ್ಕಾರ ವಿಧಿಸಿರುವ ಒಂದು ದಿನದ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸುವಿಕೆ ವಿಳಂಬಕ್ಕೆ ಕಾರಣ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿತ ಅಭ್ಯರ್ಥಿಗಳು 49 ಸ್ಥಾನಗಳನ್ನು ಗೆದ್ದಿದ್ದಾರೆ

ಚುನಾವಣಾ ಆಯೋಗವು ಘೋಷಿಸಿದ 122 ಸ್ಥಾನಗಳ ಪೈಕಿ ಖಾನ್ ಅವರ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 49 ಸ್ಥಾನಗಳನ್ನು ಗೆದ್ದಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷ 39 ಸ್ಥಾನಗಳನ್ನು ಹೊಂದಿದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 30 ಸ್ಥಾನಗಳನ್ನು ಪಡೆದಿತ್ತು.

ಇದನ್ನೂ ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ, ಇಡೀ ದೇಶಾದ್ಯಂತ ಮೊಬೈಲ್ ಸೇವೆ ಸ್ಥಗಿತ

ಲಾಹೋರ್ ಭದ್ರಕೋಟೆಯಲ್ಲಿ PML-N ನ ಷರೀಫ್ ಕುಟುಂಬ ಗೆಲುವು

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಲ್ವರು ಷರೀಫ್ ಕುಟುಂಬದ ಸದಸ್ಯರು ತಮ್ಮ ಭದ್ರಕೋಟೆಯಾದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಿಂದ ತಮ್ಮ ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗವು (ECP) ತಮ್ಮ ಕ್ಷೇತ್ರಗಳ ಫಲಿತಾಂಶಗಳನ್ನು ಪ್ರಕಟಿಸಲು ಮತದಾನದ ನಂತರ 20 ಗಂಟೆಗಳ ಕಾಲ ತೆಗೆದುಕೊಂಡಿತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ